ದಿನಾಂಕ 05.09.2019 ರಿಂದ 12.09.2019 ರವರೆಗೆ ಮಂಗಳೂರು ಘಟಕದ 36 ಜನರ ತಂಡವು ತಮ್ಮ ಬಂಧುಗಳೊಂದಿಗೆ ಗುಜರಾತ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಿಂದ ಪ್ರೇರೆಪಿತಗೊಂಡ ನಮ್ಮ ಘಟಕದ ಎರಡನೇ ತಂಡವು 43 ಜನರ ಬಂಧುಗಳೊಂದಿಗೆ ದಿನಾಂಕ 10.10.2019 ರಿಂದ 17.10.2019 ರವರೆಗೆ ಗುಜರಾತ್ ಪ್ರವಾಸ ವನ್ನು ಹಮ್ಮಿಕೊಂಡಿತ್ತು. ಈ ಎರಡು ತಂಡಗಳು ಗುಜರಾತಿನಲ್ಲಿರುವ ದ್ವಾರಕ ಮಂದಿರ, ಬೆಟ್ ದ್ವಾರಕ, ರುಕ್ಕ್ಮಿನಿ ಮಾತಾ ಮಂದಿರ, ನಾಗೇಶ್ವರ ಜೋತರ್ಲಿಂಗ, ಗೋಪಿತಲಾಬ್, ಕೃಷ್ಣ ಸುಧಾಮ ದೇವಸ್ಥಾನ, ಸೋಮಾನಾಥ ಜೋತಿರ್‍ಲಿಂಗ, ಅಹಮದಾಬಾಧ್ ನಗರ, ಸಬರಮತಿ ಅಶ್ರಮ, ಅಕ್ಷರಧಾಮ, Statue of unity ಸರದಾರವಲ್ಲಭಾಯಿ ಪಾಟೇಲ್ ಬ್ರಹತ್ ಮೂರ್ತಿ, ವಡೋದರ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಮರಳಿದೆ. ಸುಮಾರು 7 ದಿವಸದ ಪ್ರವಾಸದಲ್ಲಿ
ಸ್ಲಿಪರ್ ಕೋಚ್ ರೈಲ್, ಹವಾನಿಯಾಂತ್ರಿತ ಬಸ್ಸ್, ಹವಾನಿಯಾಂತ್ರಿತ ರೂಮ್‍ಗಳು, ಉತ್ತರ ಮತ್ತು ದಕ್ಷಿಣ ಭಾರತೀಯ ತಿಂಡಿ ಹಾಗೂ ಊಟದ ವ್ಯವಸ್ಥೆಯು ಎಲ್ಲಾ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಯಿತು. ಪ್ರವಾಸ ಸಂಚಾಲಕರಾದ
ಹರೀಶ್. ಕೆ. ಪೂಜಾರಿಯವರ ಕಾರ್ಯತತ್ಪರತೆ, ಅಧ್ಯಕ್ಷರಾದ ಕೆ.ಅರ್.ಲಕ್ಷ್ಮೀ ನಾರಾಯಣ ಹಾಗೂ ಮಾಜಿ ಅಧ್ಯಕ್ಷರಾದ ಸುನೀಲ್ ಕೆ. ಅಂಚನ್ ರವರ ಸಹಕಾರದೊಂದಿಗೆ ಪ್ರವಾಸವು ಅತ್ಯಂತ ಯಶಸ್ವಿಯಾಗಿದೆ.
ಘಟಕವು ಏರ್ಪಡಿಸಿರುವ ಔತಣ ಕೂಟದಲ್ಲಿ ಎಲ್ಲಾ ಪ್ರವಾಸಿಗರು ಅತ್ಯಂತ ಉತ್ಸಾಹದಿಂದ ಬಾಗವಹಿಸಿ ತಮ್ಮ ಅನಿಸಿಕೆ, ಅನುಭವಗಳನ್ನು ವ್ಯಕ್ತಪಡಿಸಿ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಯುವವಾಹಿನಿಯ ಶಿಸ್ತು, ಸಂಯಮ ಮತ್ತು ಸಮಯಪಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಿನಾಂಕ 20.10.2019 ರಂದು ನಮ್ಮ ಘಟಕವು 51 ಜನರ ತಂಡದೊಂದಿಗೆ ಒಂದು ದಿವಸದ ಜೋಗ ಪ್ರವಾಸ ಕೈಗೊಂಡಿತ್ತು.
ಬೆಳಿಗ್ಗೆ 6:00 ಗಂಟೆಗೆ ಯುವವಾಹಿನಿ ಸಭಾಂಗಣದಿಂದ ಹೊರಟು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟಪಾಡಿ ಶ್ರೀ ವಿಶ್ವನಾಥ ದೇವಸ್ಥಾನ, ಬಂಗಾರಮಕ್ಕಿ ಶ್ರೀ ವಿರಾಂಜನೇಯ ದೇವಸ್ಥಾನ, ಜೋಗ ಜಲಪಾತ ವೀಕ್ಷಣೆ ಹಾಗೂ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳನ್ನು ವೀಕ್ಷಿಸಿ ರಾತ್ರಿ 11.00 ಗಂಟೆಗೆ ತಲುಪಿರುತ್ತೇವೆ. ಕಟಪಾಡಿಯಲ್ಲಿ ಯುವವಾಹಿನಿ (ರಿ) ಕಟಪಾಡಿ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ನಮ್ಮ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿ, ಶಾಲು ಹೊದಿಸಿ ಗೌರವಿಸಿದ್ದು, ಯುವವಾಹಿನಿಯ ಘಟಕಗಳ ಭಾಂದವ್ಯವನ್ನು ಎತ್ತಿ ತೋರಿಸುತ್ತಿತ್ತು. ಬಸ್ಸಿನಲ್ಲಿ ಹಾಡು, ಕುಣಿತ ಹರಟೆಯೊಟ್ಟಿಗೆ, ಎಲ್ಲಾ ಪ್ರವಾಸಿಗರಿಗೆ ಒಂದು ದಿನ ಕಳೆದಿದ್ದು ಗೊತ್ತೇ ಆಗಲಿಲ್ಲ, ಪ್ರವಾಸ ಸಂಚಾಲಕರಾದ ಸತೀಶ್ ಕುಮಾರ್ ಮತ್ತು ಸಹಕರಿಸಿದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಹಾಗೂ ಕಾರ್ಯದರ್ಶಿ ಗಣೇಶ್ ವಿ ರವರ ಸಂಘಟಿತ ಕಾರ್ಯ ವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.