25-12-2022, 5:06 AM
ಮಂಗಳೂರು :- ರಾಜ್ಯಾದ್ಯಂತ 33 ಘಟಕಗಳು ಹಾಗೂ ಮೂರು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ 2022-23ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಅವರು ಡಿ.25 ರಂದು ಮುಲ್ಕಿ ಯಲ್ಲಿ ನಡೆದ ಯುವವಾಹಿನಿಯ 35 ನೇ ವಾರ್ಷಿಕ ಸಮಾವೇಶದಲ್ಲಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಹರೀಶ್ ಕೆ. ಪೂಜಾರಿ ಮಂಗಳೂರು, ಲೋಕೇಶ್ ಕೋಟ್ಯಾನ್ ಕೂಳೂರು , ಪ್ರಧಾನ ಕಾರ್ಯದರ್ಶಿಯಾಗಿ ಕುಸುಮಾಕರ ಕುಂಪಲ , ಕೋಶಾಧಿಕಾರಿಯಾಗಿ ಎಂ […]
Read More
18-12-2022, 3:40 PM
ಮಂಗಳೂರು:- ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ (ಎಂಸಿಎಫ್), ಪಣಂಬೂರು ಸಾರಥ್ಯದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ದೇರಳಕಟ್ಟೆ, ಧೂಮಾವತಿ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ ಮತ್ತು ಯುವವಾಹಿನಿ ಸುರತ್ಕಲ್ ಘಟಕದ ಸಹಯೋಗದಲ್ಲಿ ದಿನಾಂಕ 18 ಡಿಸೆಂಬರ್ ಭಾನುವಾರದಂದು ನೇತ್ರ ತಪಾಸಣಾ ಉಚಿತ ಶಿಬಿರ ನಡೆಯಿತು. ಎಂಸಿಎಫ್‌ನ ಸಿಎಂ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಸಾರಾಳ ಧೂಮಾವತಿ ದೈವಸ್ಥಾನ ಅಧ್ಯಕ್ಷ ಹರೀಶ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ಧೂಮಾವತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅರುಣ್ ಅಂಚನ್, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ […]
Read More
17-12-2022, 3:37 PM
ಉಡುಪಿ:- ಯುವವಾಹಿನಿ ಉಡುಪಿ ಘಟಕದಿಂದ ತಲೆಗೊಂದು ಸೂರು ಯೋಜನೆಯ ಬಡ ಕುಟುಂಬದ ಮನೆ ಕಟ್ಟಿ ಕೊಡುವ ಸಹಾಯಾರ್ಥ ದಿನಾಂಕ 17 ಡಿಸೆಂಬರ್ 2022 ಶನಿವಾರದಂದು ಅಜ್ಜರಕಾಡು ಬಯಲು ರಂಗ ಮಂದಿರದಲ್ಲಿ ಅಭಿನಯ ಕಲಾವಿದರು ಉಡುಪಿ ತಂಡದ “ಶಾಂಭವಿ” ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಜಕುಮಾರ್ ಅಂಬಲಪಾಡಿ ಇವರನ್ನು ಗೌರವಿಸಲಾಯಿತು, ಅತಿಥಿಗಳಾಗಿ ಆಗಮಿಸಿದಂತ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಪೊಲೀಸ್ ಅಧಿಕಾರಿಗಳಾದ ರಾಮಚಂದ್ರ ಬೈಂದೂರು , ಅಭಿನಯ ತಂಡದ ಅಧ್ಯಕ್ಷರಾದ […]
Read More
04-12-2022, 3:34 PM
ಪಣಂಬೂರು ಕುಳಾಯಿ :- ಯುವವಾಹಿನಿ (ರಿ.) ಪಣಂಬೂರು – ಕುಳಾಯಿ ಘಟಕ ಹಾಗು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಇವರ ಜಂಟಿ ಆಶ್ರಯದಲ್ಲಿ ಎಂ ಆರ್ ಪಿ ಎಲ್ ಪ್ರಾಯೋಜಕತ್ವದಲ್ಲಿ ಕುಳಾಯಿ ಪರಿಸರದಲ್ಲಿ, ಇತ್ತೀಚಿಗೆ ನಮ್ಮನ್ನಗಲಿದ ಘಟಕದ ಗೌರವ ಸದಸ್ಯರಾದ ದಿl ಮಹಾಬಲ ಟಿ. ಸಾಲ್ಯಾನ್ ರವರ ಸ್ಮರಣಾರ್ಥವಾಗಿ ದಿನಾಂಕ 04 ಡಿಸೆಂಬರ್ 2022 ರಂದುಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುಧೀರ್ ರವರ ನಾಯಕತ್ವದಲ್ಲಿ, ಆರಂಭವಾದ ಸ್ವಚ್ಛತಾ ಕಾರ್ಯದಲ್ಲಿ ಅಧ್ಯಕ್ಷರಾದ ರಂಜನ್ ಕೆ.ಕೋಟ್ಯಾನ್, […]
Read More
04-12-2022, 3:24 PM
ಬೆಂಗಳೂರು :- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇದರ ಸಹಯೋಗದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ನೇತೃತ್ವದಲ್ಲಿ “ಯುವ ವೈಭವ-2022” ಎಂಬ ಸಾಂಸ್ಕೃತಿಕ ಹಬ್ಬವು ದಿನಾಂಕ 04 ಡಿಸೆಂಬರ್ 2022ರಂದು ಡಾ| ರಾಜಕುಮಾರ್ ಒಳಾಂಗಣ ಕ್ರೀಡಾಂಗಣ, ಮಹಾಲಕ್ಷ್ಮಿ ಲೇಔಟ್ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಬೆಂಗಳೂರು ಘಟಕದ ಅಧ್ಯಕ್ಷರಾದ ಶ್ರೀಧರ ಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕಿಶನ್ […]
Read More
03-12-2022, 3:10 PM
ಕೂಳೂರು :- ಸಮಾಜದಲ್ಲಿರುವ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಯುವವಾಹಿನಿ (ರಿ.) ಕೂಳೂರು ಘಟಕ ಕಳೆದ 7 ವರುಷಗಳಿಂದ ವಿದ್ಯಾನಿಧಿ ನೀಡುತ್ತಾ ಬಂದಿದೆ . ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉನ್ನತ ಅಂಕ ಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಕೂಳೂರಿನ ಪಂಪ್ ಹೌಸ್ ಬಳಿ ದಿನಾಂಕ 03 ಡಿಸೆಂಬರ್ 2022ರ ಶನಿವಾರದಂದು ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ನಡೆದ ವಿದ್ಯಾನಿಧಿ […]
Read More
20-11-2022, 5:38 PM
ಉಡುಪಿ :- ತುಳುನಾಡು ಭಾವನಾತ್ಮಕ ಕುಟುಂಬ ಪದ್ಧತಿಯನ್ನು ಹೊಂದಿದ್ದು ಇಲ್ಲಿನ ಆಚಾರ ವಿಚಾರಗಳು, ಸಂಸ್ಕೃತಿಯ ಉಳಿವಿಗೆ ಇದರ ಪಾತ್ರ ಮಹತ್ವದ್ದಾಗಿದೆ. ಜಾನಪದ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕೆ ಇಂದು ನನಗೆ ಸಾರ್ಥಕ್ಯದ ಕ್ಷಣವಾಗಿದೆ, ಅದೇ ರೀತಿ ತುಳುನಾಡಿನ ಜಾನಪದ ಹಾಗೂ ಸಂಸ್ಕ್ರತಿಯ ಉಳಿವಿಗೆ ಯುವವಾಹಿನಿಯ ಕೊಡುಗೆ ಅನನ್ಯ ಎಂದು ಜಾನಪದ ವಿದ್ವಾಂಸರೂ, ಸಂಶೋಧಕರಾದ ಕೆ.ಎಲ್. ಕುಂಡಂತಾಯ ಇವರು ನುಡಿದರು. ಅವರು ಯುವವಾಹಿನಿ ಉಡುಪಿ ಘಟಕದ ವತಿಯಿಂದ ದಿನಾಂಕ 20 ನವೆಂಬರ್ 2022ರ ರವಿವಾರದಂದು ಉಡುಪಿಯ ಚಿಟ್ಪಾಡಿಯ ಲಕ್ಷ್ಮೀ ಸಭಾ […]
Read More
19-11-2022, 3:06 PM
ಉಪ್ಪಿನಂಗಡಿ :- ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಬೆಳಕಿನಡಿಯಲ್ಲಿ ಕಳೆದ 35 ವರ್ಷಗಳಿಂದ ಸಮಾಜಮುಖಿ ಚಿಂತನೆಗಳೊಂದಿಗೆ ಸಾಗುತ್ತಿರುವ ಯುವವಾಹಿನಿಯ ಯುವಸಮುದಾಯಕ್ಕೆ ಗುರುಗಳ ಪ್ರೇರಣೆಯೇ ದಾರಿದೀಪ ಎಂದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ತಿಳಿಸಿದರು. ಅವರು ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಇವರ ಮನೆಯಲ್ಲಿ ದಿನಾಂಕ 19 ನವೆಂಬರ್2022 ರಂದು ಜರಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಘಟಕವನ್ನು ತಮ್ಮ […]
Read More
19-11-2022, 2:42 PM
ಕಡಬ :- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಕಡಬ ಘಟಕದ 2022-23ನೇ ಸಾಲಿನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿನಾಂಕ 19 ನವೆಂಬರ್ 2022 ನೇ ಶನಿವಾರದಂದು ಶ್ರೀ ದುರ್ಗಂಬಿಕಾ ಅಮ್ಮನವರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ಇವರು ಈ ವರ್ಷದ ಕೆಲಸ ಕಾರ್ಯಗಳನ್ನು ಗಮನಿಸಿ ಅಭಿನಂದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ […]
Read More
14-11-2022, 6:03 PM
ಕಂಕನಾಡಿ :- ದಿನಾಂಕ 14 ನವೆಂಬರ್ 2022ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಘಟಕದ ವತಿಯಿಂದ ನೆಕ್ಕರೆಮಾರ್ ಅಂಗನವಾಡಿಯಲ್ಲಿ ಚಿಣ್ಣರೊಂದಿಗೆ ಸುಸಮಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪೃಥ್ವಿರಾಜ್ ವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಪುಷ್ಪರವರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿಯ ನೂತನ ಶಿಕ್ಷಕಿ ಕುಮಾರಿ ಪ್ರತೀಕ್ಷಾರವರು ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಘಟಕದ […]
Read More