ಘಟಕದ 7ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ
ಶ್ರೀ ದೇವಿ ಭಜನಾ ಮಂದಿರದ ಆವರಣ. ಘಟಕದ ಸದಸ್ಯರಾದ ಶ್ರೀಮತಿ ಪ್ರತಿಮಾ ಪಾಲನ್ ಗುರು ಪ್ರಾಥನೆ ಮಾಡಿದರು. ಭಜನಾ ಮಂದಿರದ ಉಪಾಧ್ಯಕ್ಷರಾದ ಉಗ್ಗಪ ಬಂಗೇರ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು .
ತೀರ್ಪುಗಾರರಾಗಿ ಶ್ರೀಮತಿ ಕನಕ ಮೋಹನ್ ಮತ್ತು ವಿದುಷಿ ಕುಮಾರಿ ಶ್ರೇಯ ಶೆಟ್ಟಿಯವರು ಪಾಲ್ಗೊಂಡಿದರು.
ಮುದ್ದು ಕೃಷ್ಣ, ತುoಟ ಕೃಷ್ಣ, ಬಾಲ ಕೃಷ್ಣ, ರಾಧ ಕೃಷ್ಣ, ನಾಲ್ಕು ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿತು ಸುಮಾರು ಮೂವತಕ್ಕು ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿದರು. ವಿಜೇತರಿಗೆ ಶಾಶ್ವತ ಫಲಕ ಸ್ಮರಣೆಕೆ, ಪ್ರಮಾಣ ಪತ್ರ, ಹಾಗೂ ಭಗವತ್ ಗೀತೆ ಪುಸ್ತಕ ನೀಡಿ ಅಭಿನoದಿಸಲಾಯಿತು. ಉಳಿದ ಮಕ್ಕಳಿಗೆ ಭಗವತ್ ಗೀತೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಅಭಿನoದಿಸಲಾಯಿತು. ಘಟಕದ ಸ್ಥಾಪಕ ಅಧ್ಯಕ್ಷರಾದ ಗಣೇಶ್ ಅರ್ಬಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಹಾಗೂ ಭಾಗವಹಿದ ಎಲ್ಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಮತ್ತು ಸೇರಿದ ಎಲ್ಲಾ ಯುವವಾಹಿನಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು .
SEP 15, 2025 4.06 PM IST


