ಕಾರ್ಗಿಲ್ ಯುದ್ಧ ದ ಒಂದೊಂದು ದಿನಗಳು ಕೂಡಾ ನಮಗೆ ಮರೆಯಲು ಸಾಧ್ಯವಿಲ್ಲ. ನಮ್ಮ ಕಣ್ಣೆದುರು ಅದೆಷ್ಟೂ ಯೋಧರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಕಾರ್ಗಿಲ್ ವಿಜಯ ದಿನಾಚರಣೆ ಹುತಾತ್ಮ ಯೋಧರು ಹಾಗೂ ಅವರ ಕುಟುಂಬಕ್ಕೆ ನೀಡುವ ಗೌರವ ವಾಗಿದೆ . ಮುಲ್ಕಿ ಘಟಕದ ದೇಶದ ಮೇಲಿನ ಅಭಿಮಾನದ ಈ ಕಾರ್ಯಕ್ರಮ ಶ್ಲಾಘನೀಯ ಎಂದು ನಿವೃತ್ತ ಯೋಧ ಹಾಗು ಮುಲ್ಕಿ ಆರಕ್ಷಕ
ಉಪ ನಿರೀಕ್ಷಕ ಉಮೇಶ್ ಕುಮಾರ್ ಹೇಳಿದರು.
ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಂಘದಲ್ಲಿ ಜರಗಿದ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಮಾತನಾಡಿ ರೈತರು ಹಾಗೂ ಯೋಧರು ದೇಶದ ಕಣ್ಣುಗಳಿದ್ದಂತೆ, ದೇಶ ಕಾಯುವ ಯೋಧರ ರಕ್ಷೆಗಾಗಿ ನಾವು ದಿನಾ ಪ್ರಾರ್ಥಿಸುತ್ತಿರಬೇಕು ಎಂದರು.
ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ ಹಾಗು ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡ ನಿವೃತ್ತ ಯೋಧ ಪ್ರಸ್ತುತ ಮುಲ್ಕಿ ಆರಕ್ಷಕ ತಾನೇಯಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಉಮೇಶ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹತ್ತೊಂಬತ್ತು ವರ್ಷ ದೇಶ ಸೇವೆ ಮಾಡಿದ ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡ ನಿವೃತ್ತ ಯೋಧ ನಮ್ಮ ಘಟಕದ ಮಾಜಿ ಅಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ ಯವರನ್ನು ಗೌರವಿಸಲಾಯಿತು. .
ಘಟಕದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಪ್ರೇರಣಾ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೇಘನಾ ಮತ್ತು ಯಶಸ್ವಿನಿ ಪ್ರಾರ್ಥಿಸಿದರು, ಘಟಕಾದ್ಯಕ್ಷ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು,ಮಾಜಿ ಅಧ್ಯಕ್ಷ ಉದಯ್ ಅಮೀನ್ ಮಟ್ಟು ನಿರೂಪಿಸಿದರು , ಕಾರ್ಯದರ್ಶಿ ಪ್ರೇರಣಾ ಡಿ ವಂದಿಸಿದರು.


