ದಿನಾಂಕ 24-08-2025 ರಂದು ಭಾನುವಾರ ಮಹಿಳಾ ಮಂಡಲ ಕುಳಾಯಿಯಲ್ಲಿ, ರೋಟರಿ ಕ್ಲಬ್ ಸುರತ್ಕಲ್, ಮಹಿಳಾ ಮಂಡಲ ಕುಳಾಯಿ, ಇನ್ನರ್ ವೀಲ್ ಕ್ಲಬ್ ಸುರತ್ಕಲ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ. ಎಸ್. ಹೆಗ್ಡೆ ದೇರಳಕಟ್ಟೆ, ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ವಿದ್ಯಾಲಯದ ಸಹಭಾಗೀತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು..
ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾl ಗೋಪಾಲಕೃಷ್ಣ ಭಟ್ ಸಂಕಬಿತ್ತಿಲು, ಉದ್ಘಾಟಿಸಿದರು. ರೋಟರಿ ಕ್ಲಬ್ ಸುರತ್ಕಲ್ ನ ಅಧ್ಯಕ್ಷರಾದ ರೊ. ರಾಮಚಂದ್ರ ಕುಂದರ್ ಎಲ್ಲಾ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ಅಧ್ಯಕ್ಷ ಶ್ರೀ ಧನಿಷ್ ಕುಳಾಯಿ, ಇನ್ನರ್ ವೀಲ್ ಕ್ಲಬ್ ಸುರತ್ಕಲ್ ನ ಅಧ್ಯಕ್ಷೆ ಶ್ರೀಮತಿ ದಿವ್ಯ ಶೆಟ್ಟಿ, ಮಹಿಳಾ ಮಂಡಲ ಕುಳಾಯಿ ಅಧ್ಯಕ್ಷೆ ಶ್ರೀಮತಿ ರೇವತಿ ನವೀನ್, ಜಸ್ಟಿಸ್ ಕೆ. ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯೆ ಡಾl ಭವಾನಿ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಾಲಯದ ವೈದ್ಯೆ ಡಾl ದೀಪಿಕಾ ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಕುಳಾಯಿ ಪರಿಸರದ ಸುಮಾರು 150 ಕ್ಕಿಂತ ಹೆಚ್ಚು ಸದಸ್ಯರುಗಳು ವೈದ್ಯಕೀಯ ಸಂಬಂಧಿಸಿದ ಪ್ರಯೋಜನವನ್ನು ಪಡೆದುಕೊಂಡರು.
SEP 15, 2025 3.45 PM IST


