18-10-2017, 2:22 PM
ಪರಸ್ಪರ ದೀಪಗಳಿಂದ ಬೆಸೆದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಒಂದು ಅಲೌಕಿಕ ಬೆಳಕಿನ ಚಿತ್ತಾರವನ್ನು ಪೂರ್ತಿ ಬಿಡಿಸಿದಂತೆ ಕಾಣುವ ಅಥವಾ ಅದನ್ನು ಅನುಭವಿಸುವ ಅವಕಾಶವಿರುವುದು ದೀಪಗಳ ಹಬ್ಬಕ್ಕೆ ಮಾತ್ರ, ತುಳುನಾಡಿನಲ್ಲಿ ತುಡಾರ ಪರ್ಬಕ್ಕೆ ವಿಶೇಷ ಮಹತ್ವ ಇದೆ. ಕುಟುಂಬದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಶಕ್ತಿ ಹಬ್ಬಗಳಿಗಿದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ.ತಮ್ಮಯ ತಿಳಿಸಿದರು. ಅವರು ದಿನಾಂಕ 18.10.2017 ರಂದು ಉಪ್ಪಿನಂಗಡಿ ರಾಜ್ ಮಹಲ್ ಪೆದಮ್ಮಲೆ ( ವರದ್ರಾಜ್ ನಿವಾಸ) ಇಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಜರುಗಿದ ತುಡಾರ […]
Read More
15-10-2017, 4:16 PM
ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ15.10.2017 ರಂದು ಮೂರು ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ತುಕರಾಮ್ ಎನ್ ,ಕುಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷರಾದ ಜಯನಂದ ಅಮೀನ್ ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪ ರಾಜ್, ಸಂಚಾಲಕರಾದ ಪವಿತ್ರ ಕೆ ಹಾಗೂ ಯುವವಾಹಿನಿ ಕೂಳೂರು ಘಟಕದ ಸದಸ್ಯರು ಉಪಸ್ಥಿತರಿದ್ದರು.
Read More
10-10-2017, 1:39 PM
ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ, ಕೆಟ್ಟದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಸಮಾಜದಲ್ಲಿ ಗೌರವ ಅರಸಿಕೊಂಡು ಬರುತ್ತದೆ. ಎಂದು ಜೇಸಿಐ ರಾಷ್ತ್ರೀಯ ತರಬೇತುದಾರರಾದ ಅರುಣಾ ಎಸ್. ಐತಾಳ್ ತಿಳಿಸಿದರು ದಿನಾಂಕ 15.10.2017 ರಂದು ಯುವವಾಹಿನಿ (ರಿ) ಕೊಲ್ಯ ಘಟಕದ ಆಶ್ರಯದಲ್ಲಿ ,ಕೊಲ್ಯ ನಾರಾಯಣಗುರು ಸೇವಾ ಸಂಘ, ಕೊಲ್ಯ ರೋಟರಿ ಸಸಮುದಾಯ ದಳ ,ಹಾಗು ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘ ಇದರ ಸಹಯೋಗದೊಂದಿಗೆ ಕೊಲ್ಯ ನಾರಾಯಣಗುರು ಸಭಾಂಗಣದಲ್ಲಿ ಜರುಗಿದ ನಾಯಕತ್ವ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ […]
Read More
10-10-2017, 7:59 AM
ಯುವವಾಹಿನಿ (ರಿ) ಬಜ್ಪೆ ಘಟಕದ ನೇತೃತ್ವದಲ್ಲಿ ದಿನಾಂಕ 21/10/2017ರಿಂದ 24/10/2017ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದಿಂದ ಮತ್ತು ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿವಗಿರಿ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಯಾತ್ರೆಯಲ್ಲಿ ಒಟ್ಟು 52 ಯಾತ್ರಾರ್ಥಿಗಳು ಭಾಗವಹಿಸಿದ್ದರು. ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಮತ್ತು ಕಾರ್ಯದರ್ಶಿ ಕನಕಾ ಮೋಹನ್, ಸಂಚಾಲಕರಾದ ದೇವರಾಜ್ ಅಮೀನ್, ಶಿವರಾಮ ಪೂಜಾರಿ ಇವರು ಶಿವಗಿರಿ ಯಾತ್ರೆಯ ನೇತ್ರತ್ವ ವಹಿಸಿದ್ದರು.
Read More
08-10-2017, 4:42 PM
ಮಹಾ ಮಾನವತಾವಾದಿ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುವರ್ಯರು ಸಮಾಜದ ಒಳಿತಿಗಾಗಿ ದುಡಿದವರು. ಸಮಸ್ತ ಮಾನವ ಜನಾಂಗಕ್ಕೆ ಹೊಸ ಹಾದಿ ತೋರಿದ ಅವರ ಸಂದೇಶದ ಅನುಷ್ಠಾನದ ಜತೆಗೆ ಅವರು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಮಂಗಳೂರಿನ ಖ್ಯಾತ ವಕೀಲರು ಹಾಗು ಕಾಂತಾವರದ ಅಲ್ಲಮ ಪ್ರಭು ಪೀಠದ ಅಧ್ಯಕ್ಷರಾದ ಶ್ರೀ ಯಶೋಧರ ಪಿ. ಕರ್ಕೇರರವರು ತಿಳಿಸಿದರು ಅವರು ಯುವವಾಹಿನಿ(ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜಯಂತಿಯ ಪ್ರಯುಕ್ತ ದಿನಾಂಕ […]
Read More
08-10-2017, 4:16 AM
ರಕ್ತದಾನ ಮಹಾದಾನ ಶ್ರೇಷ್ಠ ದಾನ ,ಇದು ಮಾನವೀಯತೆಯ ಪ್ರತೀಕ ,ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರುತ್ತದೆ , ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯುವವಾಹಿನಿ ಮಾಣಿ ಘಟಕದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ತಿಳಿಸಿದರು. ಯುವವಾಹಿನಿ (ರಿ) ಮಾಣಿ ಮತ್ತು ಬಂಟ್ವಾಳ ಘಟಕ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲೆ ರಕ್ತನಿಧಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, […]
Read More
03-10-2017, 8:31 AM
ಯುವವಾಹಿನಿ (ರಿ) ಉಡುಪಿ ಘಟಕದ ಸದಸ್ಯರ ಹಾಗೂ ಕುಟುಂಬಸ್ಥರ ಉತ್ತರ ಕರ್ನಾಟಕದ ಜಗತ್ಪ್ರಸಿದ್ಧ ಐತಿಹಾಸಿಕ ಸ್ಥಳಗಳಿಗೆ ದಿನಾಂಕ 30.09.2017 ರಿಂದ 03.10.2017 ರ ವರಗೆ ಪ್ರವಾಸ ಜರುಗಿತು. ಬಿಜಾಪುರದ ಗೊಲ್ ಗುಂಬಜ಼್ , ಆಲಮಟ್ಟಿ ಅಣೆಕಟ್ಟು, , ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಐತಿಹಾಸಿಕ ಸ್ಥಳಗಳಿಗೆ 49 ಯುವವಾಹಿನಿ ಕುಟುಂಬಸ್ಥರ ಪ್ರವಾಸವು ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ರಮೇಶ್ ಕುಮಾರ್, ಉಪಾಧ್ಯಕ್ಷರಾದ ಅಶೋಕ್ ಕೋಟ್ಯಾನ್, ಸಂಚಾಲಕರಾದ ಜಗದೀಶ್ ಕೋಟ್ಯಾನ್ ಪ್ರವಾಸದ ನೇತ್ರತ್ವ […]
Read More
02-10-2017, 2:54 AM
ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತದಾನ ಮೂಲಕ ಅನೇಕರ ಜೀವ ಉಳಿಸುವುದರೊಂದಿಗೆ ದಾನಿಯೂ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲಕ ಸೆಬೆಸ್ಟಿನ್ ಜತ್ತನ್ ಹೇಳಿದರು. ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, , ಜೋರ್ಜ್ ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ, ಹೆಲ್ತ್ ಕೇರ್ ಡಯಾಗ್ನಾಸ್ಟಿಕ್ ಸೆಂಟರ್ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು , ರೆಡ್ ರಿಬ್ಬನ್ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು […]
Read More
01-10-2017, 3:56 PM
ಪಡುಮಲೆಯ ದೇಯಿ ಬೈದೇತಿಯ ಔಷದ ವನದಲ್ಲಿ ದುಷ್ಕರ್ಮಿಯೊಬ್ಬ ಅಶ್ಲೀಲಕರವಾಗಿ ಚಿತ್ರೀಕರಿಸಿ ವಿಕೃತಿ ಮೆರೆದಿದ್ದಾನೆ ಮತ್ತು ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ತುಳುನಾಡಿನ ಆರಾಧ್ಯ ದೈವ ದೇಯಿ ಬೈದೇತಿಯ ಭಕ್ತರ ಹಾಗೂ ಅಖಂಡ ಹಿಂದೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುತ್ತಾರೆ. ಈ ರೀತಿ ಧಕ್ಕೆ ತಂದಿರುವ ದುಷ್ಕರ್ಮಿ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಯುವವಾಹಿನಿ(ರಿ) ಸುಳ್ಯ ಘಟಕದ ವತಿಯಿಂದ ಸುಳ್ಯ ಪೋಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು. ಈ […]
Read More
01-10-2017, 12:33 PM
ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ . ನಾವು ದಾನ ಮಾಡುವ ರಕ್ತದಿಂದ ಜೀವ ಉಳಿಸಬಹುದಾಗಿದೆ ;ರಕ್ತದಾನದಿಂದ ಆರೋಗ್ಯವೂ ಉಲ್ಲಾಸಮಯವಾಗಿರುತ್ತದೆ . ಯುವವಾಹಿನಿ ಪುತ್ತೂರು ಘಟಕವು ಇಂತಹ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ವರ್ಷ 365 ದಿನಗಳಲ್ಲಿ ಕೂಡ ರಕ್ತದ ಅವಶ್ಯಕತೆ ಇದ್ದವರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು ದಿನಾಂಕ 01.10.2017 ರಂದು ಯುವವಾಹಿನಿ (ರಿ ) ಪುತ್ತೂರು ಘಟಕದ ಆಶ್ರಯದಲ್ಲಿ […]
Read More