ಕಥೆಗಾರ,ಕಾದಂಬರಿಗಾರ,ನಾಟಕಗಾರ ದಿ.ವಿಶುಕುಮಾರ್ ಅವರ ಕೋಟಿ ಚೆನ್ನಯ ನಾಟಕಕ್ಕೆ ಮರ ಜೀವ ತುಂಬಿದ ಯುವವಾಹಿನಿ ಕಲಾವಿದರು ಇಂದು ತುಳು ನಾಟಕರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ಯುವವಾಹಿನಿನಿಯ ೫೧ ಮಂದಿ ಕಲಾವಿದರು ವಿಶುಕುಮಾರ್ ಅವರ ಕೋಟಿಚೆನ್ನಯ ನಾಟಕ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಐದು ದಶಕದ ಹಿಂದೆ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದ, ಬಳಿಕ ಸಿನಿಮವಾಗಿ ಪ್ರೇಕ್ಷಕರ ಮನ ಗೆದ್ದ ಕೋಟಿಚೆನ್ನಯ ನಾಟಕ ಯಾವುದೇ ಪರಿವರ್ತನೆಗಳಿಲ್ಲದೆ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.
ಕೋಟಿಚೆನ್ನಯರ ಬಂಧನಕ್ಕೆಕುಟಿಲ ತಂತ್ರ ಹೆಣೆಯುವ ಕೇಮಾರ್ ಬಲ್ಲಾಳರಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಮಿಂಚಿದ್ದು ಮೊದಲ ನಾಟಕದಲ್ಲಿಯೇ ಸೈ ಎಣಿಸಿಕೊಂಡರು. ಪೆರುಮಲ ಬಲ್ಲಾಳರಾಗಿ ಸಸಿಹಿತ್ಲು ಘಟಕದ ಪ್ರದೀಪ್, ಬುದ್ದಿವಂತನಾಗಿ ಶೈಲೇಶ್ ಸಸಿಹಿತ್ಲು, ಕೋಟಿಯಾಗಿ ಮಂಗಳೂರು ಘಟಕದ ರಾಜಶೇಖರ್, ಚೆನ್ನಯನಾಗಿ ರಾಕೇಶ್ ಕುಮಾರ್ , ಸಣ್ಣ ಕೋಟಿಯಾಗಿ ರಕ್ಷಿತ್‌ಯಶವಂತ್, ಚೆನ್ನಯನಾಗಿ ರಜತ್ ಸಸಿಹಿತ್ಲು, ದೇಯಿಯಾಗಿ ರಾಜೇಶ್ವರಿ ಮೂಲ್ಕಿ, ಕಿನ್ನಿದಾರುವಾಗಿ ಮಹಿಳಾ ಘಟಕದ ಅಮಿತಾಗಣೇಶ್, ಬೂಡಿ ಬೊಮ್ಮಯ್ಯರಾಗಿ ಜಯಕುಮಾರ್ ಮೂಲ್ಕಿ, ಚಾವಡಿ ಸಾಂತಯ್ಯನಾಗಿ ಸುನೀಲ್ ಕೆ. ಅಂಚನ್,ಅಬ್ಬೆಯಾಗಿ ರಕ್ಷಿತಾಯೋಗೀಶ್ ಮೂಲ್ಕಿ,ಸಾಯನ ಬೈದ್ಯನಾಗಿ ಕೃಷ್ಣ ಬಜ್ಪೆ, ಪಯ್ಯನಾಗಿ ಮಾಧವಕೋಟ್ಯಾನ್,ಚಾಮುಂಡ ಬೈದ್ಯನಾಗಿ ನಿತಿನ್ ಪಣಂಬೂರು, ಕಿನ್ನಿಚೆನ್ನಯನಾಗಿ ರಂಜನ್ ಪಣಂಬೂರು, ಮಂಜು ಪೆರ್ಗಡೆಯಾಗಿ ದೇವರಾಜ್ ಬಜ್ಪೆ,ಸೈನಿಕರಾಗಿ ಮಂಗಳೂರು ಘಟಕದ ಅಧ್ಯಕ್ಷರಾದ ನವೀನ್‌ಚಂದ್ರ, ಗಣೇಶ್, ಅಮಣ ಬಣ್ಣಾಯ ಮಾಧವ ಬಜ್ಪೆ,ಸುಂಕದದೇರೆ ಯೋಗೀಶ್ ಬಜ್ಪೆ, ಓಲೆಕಾರ ಮೋಹನ್‌ದಾಸ್, ಜಟ್ಟಿ ರಾಜೇಶ್ ಐಡಿಯಲ್, ಭಾಸ್ಕರ ಪೂಜಾರಿ, ಕಮಲಾಕ್ಷ, ದಾಮೋದರ, ಗಣೇಶ್‌ವಿ, ಶ್ರೀಕಾಂತ್, ಸುರೇಶ್‌ಕೊಲೆಯ, ಮೋಹನ್‌ದಾಸ್ ಮಾಲೆಮಾರ್, ಗೋಪಾಲ್ ಮಾಲೆಮಾರ್, ಶ್ರೀಕಾಂತ್ ಸುವರ್ಣ, ಸುನೀತಾ, ಜಯಗಣೇಶ್ , ವಸಂತಿ, ಅಭಿನಯಿಸಿದ್ದರು. ನಾಟಕದ ಸಂಪೂರ್ಣ ನಿರ್ವಹಣೆ: ಹರೀಶ್ ಕೆ ಪೂಜಾರಿ ಇವರದ್ದು ಸಂಗೀತ ವಿಶ್ವನಾಥ ನೆಲ್ಯಾಡಿ,ಸಹಕಾರ ,ಮಧು ಬಂಗೇರಕಲ್ಲಡ್ಕ ಮತ್ತು ರಾಜೇಶ್ ಬಂಟ್ವಾಳ, ಮುಖವರ್ಣಿಕೆ ವರ್ಣಕಲಾಆರ್ಟ್ಸ್ ಮಂಗಳೂರುಇವರು ನೀಡಿದ್ದು ನಾಟಕವನ್ನುಯುವವಾಹಿನಿ ಕೇಂದ್ರ ಸಮಿತಿಯಉಪಾಧ್ಯಕ್ಷರಾದ ನರೇಶ್‌ಕುಮಾರ್ ಸಸಿಹಿತ್ಲು ನಿರ್ದೇಶಿಸಿದ್ದರು.
ಅತ್ಯದ್ಬುತವಾಗಿ ನಾಟಕಗಳು ಮೂಡಿ ಬ೦ದಿದೆ..
Yuva vahini has good potential to produce abundant number of new quality artists. Keep it up.