ಮಾಣಿ : ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಪಾಟ್ರಕೇೂಡಿ ಕೆದಿಲದಲ್ಲಿ ದಿನಾಂಕ 17.03.2018 ರಂದು ಉಚಿತ ಆಯುಷ್ ಚಿಕಿತ್ಸಾ ಶಿಬಿರವು ಯುವವಾಹಿನಿ (ರಿ)ಮಾಣಿ ಘಟಕದ ಆಶ್ರಯದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವತಿಯಿಂದ ನಡೆಯಿತು. ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಹಿಂದಿನ ಕಾಲದಲ್ಲಿ ಜನರಿಗೆ ಯಾವುದೇ ರೇೂಗಗಳು ಕಂಡು ಬಂದಲ್ಲಿ ಗಿಡಮೂಲಿಕೆಗಳಿಂದ ಮನೆ ಮದ್ದು ತಯಾರಿಸಿ ಉಪಯೇೂಗಿಸುತ್ತಿದ್ದರು. ಈಗ ಅದಕ್ಕೆಂದೆ ಸರ್ಕಾರ ಆಯುಷ್ ನಂತಹ ಆಸ್ಪತ್ರೆಗಳನ್ನು ತೆರೆದು ಮತ್ತು ಈ ಸಂಘ ಸಂಸ್ಥೆಗಳ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ) ಮಾಣಿ ಘಟಕದ ಅಧ್ಯಕ್ಷರಾದ ಬಿ .ರಾಜೇಶ್ ಪೂಜಾರಿ ಬಾಬನಕಟ್ಟೆಯವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಜ|ಆದಂಕುಂಞ ಬಿ .ಕೆದಿಲ ,ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಮಾಣಿ ಘಟಕದ ಸಲಹೆಗಾರರಾದ ಪ್ರೇಮನಾಥ ಕೆ ,ದ.ಕ.ಜಿ.ಪಂ.ಉ.ಹಿ .ಪ್ರಾ.ಶಾಲೆ ಪಾಟ್ರಕೇೂಡಿ ಕೆದಿಲ ಇದರ ಎಸ್. ಡಿ .ಎಂ .ಸಿ ಅಧ್ಯಕ್ಷರಾದ ಜ|ಶರೀಫ್ ಕೆ ಎಸ್ ,ದ.ಕ.ಜಿ.ಪಂ.ಉ.ಹಿ .ಪ್ರಾ.ಶಾಲೆ ಪಾಟ್ರಕೇೂಡಿ ಕೆದಿಲ ಇದರ ಮುಖ್ಯೇೂಪದ್ಯಾಯರಾದ ಶರಣಪ್ಪ, ದ.ಕ.ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಸಹನಾ ರೈ, ಡಾ. ಕೃಷ್ಣಪ್ರಸಾದ್, ಡಾ.ಮಹಮ್ಮದ್ ಅಸ್ಫಾಕ್, ಯುವವಾಹಿನಿ ಸಂಘಟನಾ ಕಾರ್ಯದರ್ಶಿ ಸತೀಶ್ ಬಾಯಿಲ ರವರು ಉಪಸ್ಥಿತರಿದ್ದರು. ಸುಮಾರು 200ಕ್ಕೂ ಹೆಚ್ಚು ಜನ ಇದರ ಸದುಪಯೇೂಗವನ್ನು ಪಡೆದು ಕೊಂಡರು. ಕಾರ್ಯದರ್ಶಿ ಪ್ರಶಾಂತ್ ಅನಂತಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.