ಬಜ್ಪೆ ಯುವವಾಹಿನಿ ಘಟಕದ ವತಿಯಿಂದ ತಾ. 18.03.2018 ಭಾನುವಾರದಂದು ಬಜ್ಪೆ ಬಿಲ್ಲವ ಸಂಘದ ಸಭಾ ಭವನದಲ್ಲಿ ರಂಗ ಕ್ರಿಯೆ – ರಂಗ ಪ್ರಜ್ಞೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಘಟಕದ ಸದಸ್ಯರುಗಳಿಗೆ, ಅವರ ಮಕ್ಕಳಿಗೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಂಗ ತಜ್ಞ ಜಗನ್‌ಪವಾರ್ ಬೇಕಲ್ ಇವರು ಸಂಗೀತ ನಾಟಕ, ದೃಶ್ಯ, ಬೀದಿ ನಾಟಕ ಮುಂತಾದ ಪ್ರಕಾರಗಳ ವಿಶಿಷ್ಟ ಹೊಲ ಹೊರ ಹೂರಣಗಳನ್ನು ಪ್ರಯೋಗಿಕವಾಗಿ ಉಣಬಡಿಸಿ, ಫಲಾನುಭವಿಗಳನ್ನು ಜೀತೋಹಾರಿಯಾಗಿಸಿದರು. ಸದಸ್ಯರುಗಳಿಗೆ ನಟನಾ ಕೌಶಲ್ಯದ ಸೂಕ್ಷ್ಮತೆಯನ್ನು ತಿಳಿಹೇಳಿ ಅವರ ಮೂಲಕ ರೂಪಕ, ಪ್ರಹಸನಗಳನ್ನು ಮಾಡಿಸಿದರು. ಸಾಮಾಜಿಕ ವಿಚಾರಗಳು ಸಂದೇಶಾತ್ಮಕ ವಿಷಯಗಳ ಮೂಲಕ ಮತ್ತಷ್ಟು ಅರಿವನ್ನು ಮೂಡಿಸುವ ಕಾರ್ಯ ಈ ಸಂದರ್ಭದಲ್ಲಿ ನಡೆಯಿತು. ಸುಮಾರು 35ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ದೇವರಾಜ್ ಸ್ವಾಗತಿಸಿದರು, ಕಾರ್ಯದರ್ಶಿ ಸುನೀತಾ ವಂದಿಸಿದರು