Yuvavahini

ಘಟಕಗಳು

ಸಂಸ್ಕ್ರತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ : ವಿಜಯಲಕ್ಷ್ಮಿ

ಕುಳಾಯಿ : ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಹೊಣೆಗಾರಿಕೆ ಪ್ರಾಮುಖ್ಯವಾಗಿದೆ. ಯುವವಾಹಿನಿ ಸಂಘಟನೆ ಯುವಕರಲ್ಲಿ ಶಿಕ್ಷಣ, ಸಂಘಟನೆ ಬಗ್ಗೆ ಜಾಗ್ರತಿ ಮೂಡಿಸಿ ಸುಸಂಸ್ಕ್ರತ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಟಿದ ಪೊನ್ನುಪೊಂಜೊವುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ತಿಳಿಸಿದರು. ಅವರು ದಿನಾಂಕ 29-07-2018ನೇ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ, ಯುವವಾಹಿನಿ(ರಿ) ಪಣಂಬೂರು ಘಟಕ ಮತ್ತು ಯುವವಾಹಿನಿ(ರಿ) ಸುರತ್ಕಲ್ […]

Read More

ಕಷ್ಟದಲ್ಲಿರುವವರಿಗೆ ಸ್ವಂದಿಸುವ ಸಂಘಟನೆಯೆಂಬ ಹೆಗ್ಗಳಿಕೆ – ಜಯಂತ್

ಪುತ್ತೂರು : ವಿದ್ಯೆ-ಉದ್ಯೋಗ -ಸಂಪರ್ಕ ಎಂಬ ದ್ಯೇಯವಾಕ್ಯದಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯುವವಾಹಿನಿ ಸಂಘಟನೆಂಯು ಕಷ್ಟದಲ್ಲಿರುವವರೆಗೆ ಸದಾ ಸ್ವಂದಿಸುವ ಸಂಘಟನೆಯಾಗಿ ಹೆಸರು ಗಳಿಸಿದೆ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು. ಅವರು ಜು .೨೨ ರಂದು ಬಪ್ಪಳಿಗೆ ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಯುವವಾಹಿನಿ ಘಟಕದಲ್ಲಿ ಕಳೆದ […]

Read More

ಸಂಸ್ಕೃತಿ ಪರಂಪರೆ ನಮ್ಮ ಧ್ಯೇಯವಾಗಲಿ : ಪದ್ಮನಾಭ ಕೋಟ್ಯಾನ್

ಮೂಲ್ಕಿ: ತುಳುನಾಡಿನ ಸಂಸ್ಕೃತಿ ಪರಂಪರೆ ನಮ್ಮ ಧ್ಯೇಯವಾಗಬೇಕು, ಮುಂದಿನ ಪೀಳಿಗೆಗೆ ಹಿಂದಿನ ಸಾಂಸ್ಕೃತಿಕತೆಯನ್ನು ತಿಳಿ ಹೇಳುವ ಕೆಲಸ ಇಂದು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ, ಮೂಲ್ಕಿ ಯುವವಾಹಿನಿಯಂತಹ ಸಂಸ್ಥೆಗಳಿಂದ ಯುವ ಪೀಳಿಗೆಯನ್ನು ಸಂಘಟನಾ ಶಕ್ತಿಯನ್ನು ತೋರಿಸಿರುವುದು ಸಮಾಜ ಗುರುತಿಸಿದೆ ಎಂದು ಕರ್ನಾಟಕ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿಯ ಯುವವಾಹಿನಿ ಘಟಕದ ಆಶ್ರಯದಲ್ಲಿ ಭಾನುವಾರ ನಡೆದ ಹದಿನಾರನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೇದಿಕೆಯಲ್ಲಿ ತರಕಾರಿ, […]

Read More

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ಶ್ರಮದಾನ

ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ದಿನಾಂಕ 29.07.2018 ರಂದು ಪಡುಬಿದ್ರಿ ಬಿಲ್ಲವ ಸಂಘದ ಪರಿಸರದಲ್ಲಿ ಶ್ರಮದಾನವು ನಡೆಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಕಾರ್ಯದರ್ಶಿ ಶೈಲಜಾ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Read More

ತುಳುವರ ಬದುಕಿನ ಕ್ರಮವೇ ಶ್ರೀಮಂತಿಕೆಯ ದ್ಯೋತಕ : ಚೇತನ್ ಮುಂಡಾಜೆ

ಮಾಣಿ : ತುಳು ಬದುಕು ಎನ್ನುವುದು ಹಲವು ಆಯಾಮಗಳ ಒಟ್ಟು ಮೊತ್ತದ ಪ್ರತಿರೂಪ. ಇಲ್ಲಿನ ಸಂಸ್ಕ್ರತಿ , ಆಚರಣೆ, ವೈಶಿಷ್ಟಗಳು ಅನನ್ಯವಾದುದು. ದೈವಾರಾಧನೆಯಲ್ಲಿ ಬಳಕೆಯಾಗುವ ನುಡಿಗಟ್ಟುಗಳು ತುಳುವರ ಬದುಕಿನ ಶ್ರೀಮಂತಿಕೆಗೆ ಸಾಕ್ಷಿ. ಅವುಗಳ ಮರು ಪ್ರಸ್ತುತಿಯು ಆಟಿಡೊಂಜಿ ದಿನದಂತಹ ಕಾರ್ಯಕ್ರಮದಲ್ಲಿ ನಡೆದು ಬರುತ್ತಿರುವುದು ಸಮಂಜಸವಾಗಿದೆ ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಚೇತನ್ ಮುಂಡಾಜೆ ನುಡಿದರು. ಅವರು ಯುವವಾಹಿನಿ (ರಿ) ಮಾಣಿ ಘಟಕದ ವತಿಯಿಂದ ದಿನಾಂಕ: 29.07.2018ರ ಆದಿತ್ಯವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ […]

Read More

ತುಳುನಾಡ ಸಂಪ್ರಧಾಯ, ಪದ್ಧತಿ, ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಕೊಡೋಣ : ಸುಧಾಕರ್ ಅಮೀನ್

ಕಾಪು  : ತುಳುವರ ಆಚರಣೆ, ಸಂಪ್ರಧಾಯ ಮತ್ತು ಪದ್ಧತಿ ಗಳು ಸರ್ವರಿಗೂ ಅನುಕರಣೀವಾಗಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧಾರ್ಮಿಕ ಚಿಂತಕ ಸುಧಾಕರ ಡಿ. ಅಮೀನ್ ಹೇಳಿದರು. ಯುವವಾಹಿನಿ(ರಿ) ಕಾಪು ಘಟಕದ ವತಿಯಿಂದ ದಿನಾಂಕ 29.08.2018 ರಂದು ಕಾಪು ಬಿಲ್ಲವರ ಸಹಾಯಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆಟಿ ತಿಂಗಳನ್ನು ಅನಿಷ್ಟದ ತಿಂಗಳು ಎಂಬ ಅರ್ಥವನ್ನು ಕಲ್ಪಿಸಲಾಗುತ್ತಿದೆ. ಆದರೆ ಇದು ಅನಿಷ್ಡದ […]

Read More

ಬದಲಾವಣೆ ಬೇಕು ಆದರೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. -ಕೆ.ಎ ರೋಹಿಣಿ .

ಕೂಳೂರು : ಬದಲಾವಣೆ ಬೇಕು ಆದರೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ತುಳುನಾಡಿನ ಸಂಸ್ಕೃತಿ ,ಸಂಪ್ರದಾಯ ಹಾಗೂ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ರವಾನಿಸಬಹುದು, ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಇದರ ಸ್ಥಾಪಕ ಅಧ್ಯಕ್ಷರಾದ ಕೆಎ ರೋಹಿಣಿತಿಳಿಸಿದರು. ಆಗಿನ ಕಾಲದಲ್ಲಿ ಹೆತ್ತವರು ಹೇಳಿದಂತೆ ಮಕ್ಕಳು ಕೇಳುತ್ತಿದ್ದರು, ಆದರೆ ಈಗಿನ ಕಾಲದಲ್ಲಿ ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ , ಆಟಿ ತಿಂಗಳಿನ ವಿಶೇಷತೆ ,ಅಮಾವಾಸ್ಯೆ ಬಡಿಸುವುದು ,ಆಟಿ ಕಳಂಜ […]

Read More

ತುಳುನಾಡ ಸಂಪ್ರದಾಯ, ಪದ್ಧತಿ, ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಕೊಡೋಣ : ಸುಧಾಕರ್ ಅಮೀನ್

ಕಾಪು, ಜು. 29 :ತುಳುವರ ಆಚರಣೆ, ಸಂಪ್ರದಾಯ ಮತ್ತು ಪದ್ಧತಿ ಗಳು ಸರ್ವರಿಗೂ ಅನುಕರಣೀವಾಗಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧಾರ್ಮಿಕ ಚಿಂತಕ ಸುಧಾಕರ ಡಿ. ಅಮೀನ್ ಹೇಳಿದರು. ಯುವವಾಹಿನಿ ಕಾಪು ಘಟಕದ ವತಿಯಿಂದ ರವಿವಾರ ಕಾಪು ಬಿಲ್ಲವರ ಸಹಾಯಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆಟಿ ತಿಂಗಳನ್ನು ಅನಿಷ್ಟದ ತಿಂಗಳು ಎಂಬ ಅರ್ಥವನ್ನು ಕಲ್ಪಿಸಲಾಗುತ್ತಿದೆ. ಆದರೆ ಇದು ಅನಿಷ್ಡದ ತಿಂಗಳು ಅಲ್ಲವೇ […]

Read More

ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ

ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಸೇವಾ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕದಿಂದ ವಂಚನೆಗೊಂಡಿದ್ದ ಮೂಡುಕೋಡಿ ಹೊಸಮನೆ ದೋಟ ಸುಶೀಲ ರವರ ಮನೆಗೆ 20,000/- ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಮಾಡಿಕೊಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷರಾದ ಜಯಂತ ನಡುಬೈಲು  ವಿದ್ಯುತ್ ಸಂಪರ್ಕ ಉದ್ಘಾಟನೆ ಮಾಡಿದರು .ಇದೇ ಮನೆಯ ಸುಶೀಲಾರ ಮಗ ಸಚಿನ್ ಮನೊರೋಗದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಘಟಕದ ವತಿಯಿಂದ 7,000 /-ರೂಪಾಯಿ ಘಟಕದ ಅಧ್ಯಕ್ಷರಾದ ನಿತೀಶ್ ಎಚ್ ವಿತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ […]

Read More

ನಗರಕ್ಕೆ ಹಸಿರ ಮೆರುಗು ಶ್ಲಾಘನೀಯ : ಶಶಿಧರ ಹೆಗ್ಡೆ

ಮಂಗಳೂರು : ನಗರಕ್ಕೆ ಹಸಿರ ಮೆರುಗು ನೀಡುವ ಸಂಘಟನೆಗಳ ಕಾರ್ಯ ಶ್ಲಾಘನೀಯವಾದುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ ಹೆಗ್ಡೆ ತಿಳಿಸಿದರು. ಅವರು ದಿನಾಂಕ 29.07.2018 ರಂದು ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರಿನ ಉರ್ವಾಸ್ಟೋರ್ ನಿಂದ ಕೊಟ್ಟಾರದವರೆಗೆ ರಸ್ತೆ ವಿಭಜಕದಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನಾಗವೇಣಿ ,ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ, […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!