ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ಪುಟಾಣಿ ಮಕ್ಕಳಿಗಾಗಿ “ಮಕ್ಕಳ ಹಬ್ಬ” ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಚಿನಡ್ಕ ಇಲ್ಲಿ ದಿನಾಂಕ 17/11/2019 ರ ಭಾನುವಾರ ಮುಂಜಾನೆ ಉದ್ಘಾಟನೆಯೊಂದಿಗೆ ಆರಂಭಗೊಂಡು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳ ನಂತರ ಅಪರಾಹ್ನ ಸಮಾರೋಪ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಂಜಾನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಇವರು ವಹಿಸಿಕೊಂಡಿದ್ದರು, ಸಮಾರಂಭದ ಉದ್ಘಾಟಕರಾಗಿ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸಾದಿಯ ಬಾನು, ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿ, ಮಂಗಳೂರು ಇದರ ಎರಡನೇ ಉಪಾಧ್ಯಕ್ಷರಾದ ಶ್ರೀ ಉದಯ ಅಮೀನ್ ಮಟ್ಟು, ಉಡುಪಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನೀತಾ ಗುರುರಾಜ್, ಅದಾನಿ ಯು.ಪಿ.ಸಿ.ಎಲ್.ನ ಫೈನಾನ್ಸ್ ಮತ್ತು ಅಕೌಂಟ್ಸ್ ಅಸೋಸಿಯೇಟ್ ಮೇನೇಜರ್ ಶ್ರೀ ಪ್ರೇಮಾನಂದ ಕುಮಾರ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹಸನ್ ಬಾವ,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೆ.ರೇಖಾ ಶೆಣೈ , ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀ ವಿಧಿತ್ ವಿ .ಪೂಜಾರಿ ಇವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಘಟಕದ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಸರ್ವರನ್ನು ಸ್ವಾಗತಿಸಿದರು,ಶಾಲಾ ನಾಯಕಿ ಕುಮಾರಿ ಸಾದಿಯಾ ಬಾನು ,ಗಣ್ಯರೊಂದಿಗೆ ದೀಪ ಬೆಳಗುವುದರೊಂದಿಗೆ
ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿರುವ ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಉದಯ ಅಮೀನ್ ಮಟ್ಟು ಅವರು ಮಕ್ಕಳ ಹಬ್ಬ ಕಾರ್ಯಕ್ರಮದಂತ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ಹಾಗೂ ಇತರೆ ಘಟಕಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪಡುಬಿದ್ರಿ ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಹಸನ್ ಬಾವ ಅವರು ಘಟಕ ಮತ್ತು ಕಾರ್ಯಕ್ರಮವನ್ನು ಪ್ರಶಂಸಿ ಇನ್ನಷ್ಟು ಪ್ರಶಸ್ತಿಗಳನ್ನು ಯುವವಾಹಿನಿ ಸಂಸ್ಥೆ ಪಡೆಯಲಿ ಎಂದು ಹಾರೈಸಿದರು.
ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗಾಗಿ ಅಭಿನಯ ಗೀತೆ, ಛದ್ಮವೇಷ, ದೇಶಭಕ್ತಿಗೀತೆ, ಭಾಷಣ,ರಸಪ್ರಶ್ನೆ,ಚಿತ್ರಕಲೆ, ಸಮೂಹ ನೃತ್ಯ ಮುಂತಾದ ವಿವಿಧ ಸ್ಪರ್ಧೆಗಳು ವಿಭಾಗ-1 ,1 ರಿಂದ 4ನೇ ತರಗತಿ ಹಾಗೂ ವಿಭಾಗ- 2. 5 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆಯಿತು.
ಸ್ಪರ್ಧಾ ಕಾರ್ಯಕ್ರಮ ಮುಕ್ತಾಯದ ನಂತರ ಅಪರಾಹ್ನ ಸಮಾರೋಪ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಯೋಗೀಶ್ ಪೂಜಾರಿ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಪ್ರದಾನ ಕಾರ್ಯದರ್ಶಿಯವರಾದ ಶ್ರೀ ಎಸ್. ಆರ್. ಪ್ರದೀಪ್ ,
ಬಿ.ಜೆ.ಪಿ. ಕಾಪು ವಿಧಾನ ಸಭಾ ಕ್ಷೇತ್ರದ ಕ್ಷೇತ್ರಾಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು.
ನಿವೃತ್ತ ಅಂಚೆ ಸಹಾಯಕರಾದ ಶ್ರೀ ಬಾಬು ಕೋಟ್ಯಾನ್.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಇದರ ಸಂಘಟನಾ ಕಾರ್ಯದರ್ಶಿ ಶ್ರೀ ಸಂತೋಷ್ ಎಸ್.ಪೂಜಾರಿ.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೆ.ರೇಖಾ ಶೆಣೈ.
ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀ ವಿಧಿತ್ ವಿ.ಪೂಜಾರಿ.
ಘಟಕದ ಕಾರ್ಯದರ್ಶಿ ಕುಮಾರಿ ಯಶೋದ.
ಉಪಸ್ಥಿತರಿದ್ದರು.
ಕುಮಾರಿ ಐಶ್ವರ್ಯ ಸಿ.ಅಂಚನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯದರ್ಶಿ ಎಲ್ಲರನ್ನೂ ಸ್ವಾಗತಿಸಿದರು.
ಎಸ್.ಆರ್.ಪ್ರದೀಪ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು , ಪೋಷಕರು ಮತ್ತು ಶಿಕ್ಷಕರಿಗೆ ಗೌರವ ಕೊಟ್ಟು ಒಳ್ಳೆಯ ದಾರಿಯಲ್ಲಿ
ನಡೆಯಬೇಕೆಂದು ಹಿತ ನುಡಿ ನುಡಿದರು.
ನಂತರ ವಿಭಾಗ -1ರ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ನಂತರ ಪ್ರಕಾಶ್ ಪಾದೆಬೆಟ್ಟು ಮಾತನಾಡುತ್ತಾ ಘಟಕದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು
ಬಾಬು ಕೋಟ್ಯಾನ್ ಅವರು ಮಾತನಾಡುತ್ತಾ ಶಾಲೆ ಆರಂಭದ ದಿನಗಳ ಬಗ್ಗೆ ತಿಳಿಸಿ ,ಶಾಲೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರಿಸಿದರು.
ನಂತರ ವಿಭಾಗ -2 ರ 5 ರಿಂದ 7ನೇ ತರಗತಿ ವಿದ್ಯಾರ್ಥಿಗಳ ಬಹುಮಾನ ನೀಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿ ಘಟಕದ ಕಾರ್ಯಕ್ರಮ, ಸದಸ್ಯರ ಒಗ್ಗಟ್ಟು ,ಶಿಸ್ತನ್ನು ಶ್ಲಾಘಿಸಿ,ಘಟಕ ಇನ್ನಷ್ಟು ಯಶಸ್ಸು ಗಳಿಸಿ ,ಚಿರಾಯುವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಗೈದ ತಲಾ ಒಬ್ಬ ವಿದ್ಯಾರ್ಥಿಗೆ ನೀಡುವ ಕಲಾಶ್ರೀ ,ಕಲಾರತ್ನ ,ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಗೌರವ ಪಡೆದ ವಿದ್ಯಾರ್ಥಿಗಳು ವಿಭಾಗ-1ರ ಕುಮಾರಿ ಮಾನ್ವಿ 3 ನೇ ತರಗತಿ ಕಲಾಶ್ರೀ ಪ್ರಶಸ್ತಿ ಹಾಗೂ
ವಿಭಾಗ -2 ರ ಕುಮಾರಿ ಸೃಷ್ಠಿ 7ನೇ ತರಗತಿ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತೀರ್ಪುಗಾರರ ಮೆಚ್ಚುಗೆ ಗಳಿಸಿದ ಕುಮಾರಿ ನವ್ಯಶ್ರೀ ಅವರನ್ನು ಗೌರವಿಸಲಾಯಿತು.
ವಿಧಿತ್ ವಿ. ಪೂಜಾರಿ ಅವರ ಧನ್ಯವಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.