
19-09-2026, 11:00 AM
ಮಂಗಳೂರು, ಸೆ. 19: ಉತ್ತಮ ಭವಿಷ್ಯಕ್ಕಾಗಿ ಆದಾಯಕ್ಕೆ ಅನುಗುಣವಾಗಿ ಉಳಿತಾಯ ಮಾಡುವುದರ ಜೊತೆಗೆ, ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವ ಜ್ಞಾನವೂ ಅಗತ್ಯ ಎಂದು ಹಣಕಾಸು ತಜ್ಞ ಬಾಲಾಜಿ ರಾವ್ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ, ಐಸಿಐಸಿಐ ಮ್ಯೂಚುವಲ್ ಫಂಡ್ ಸಹಕಾರದೊಂದಿಗೆ ನಗರದ ದೀಪಾ ಕಂಫರ್ಟ್ನಲ್ಲಿ ನಡೆದ ಹಣಕಾಸು ನಿರ್ವಹಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಹಾಗೂ ಆಸ್ತಿ ಮೌಲ್ಯಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು […]
Read More

18-09-2026, 8:00 PM
ಕಟ್ಟೆಮಾರ್, ಸೆ. 18: ಅಸಮಾನತೆ, ಅಜ್ಞಾನ, ಮೂಢನಂಬಿಕೆ ಹಾಗೂ ಸಾಮಾಜಿಕ ಅನ್ಯಾಯಗಳಿಂದ ಮನುಷ್ಯನಿಗೆ ಮುಕ್ತಿ ದೊರೆಯುವುದೇ ನಿಜವಾದ ಸ್ವಾತಂತ್ರ್ಯ ಎಂಬ ವಿಶಾಲ ಚಿಂತನೆಗೆ ಶ್ರೀ ನಾರಾಯಣಗುರುಗಳು ತಮ್ಮ ಜೀವನದ ಮೂಲಕ ದಾರಿ ತೋರಿಸಿದರು ಎಂದು ಬರಹಗಾರ್ತಿ ಅರ್ಚನಾ ಎಂ. ಬಂಗೇರ ಹೇಳಿದರು. ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ, ಮನೋಜ್ ಕಟ್ಟೆಮಾರ್ ಅವರ ಸಾನಿಧ್ಯದಲ್ಲಿ ನಡೆದ ‘ಗುರುತತ್ವವಾಹಿನಿ’ ಮಾಲಿಕೆ–78ರಲ್ಲಿ ಗುರುಸಂದೇಶ ನೀಡಿದ ಅವರು, ನಾರಾಯಣಗುರುಗಳ ಚಿಂತನೆಗಳು ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ ಎಂದರು. ಶಿಕ್ಷಣದಿಂದ […]
Read More

18-09-2026, 8:00 PM
ಕೂಳೂರು ಸೆ 18 : ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 67ನೇ ಮನೆ ಮನೆ ಭಜನೆ ಕಾರ್ಯಕ್ರಮವು ಘಟಕದ ಸದಸ್ಯರಾದ ಶ್ರೀಮತಿ ಹರಿಣಾಕ್ಷಿ ಭಾಸ್ಕರ್ ಅವರ ಉರುಂದಾಡಿಯ ನಿವಾಸದಲ್ಲಿ ಸೆ. 18ರಂದು ನಡೆಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹರಿಣಾಕ್ಷಿ ಭಾಸ್ಕರ್ ದಂಪತಿಗಳನ್ನು ಕೂಳೂರು ಘಟಕದ ಅಧ್ಯಕ್ಷೆ ಗೀತಾವಸಂತ್ ಅವರು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಿದರು. ಬಳಿಕ ಪ್ರಸಾದ […]
Read More

18-09-2026, 8:00 PM
ಮಾಣಿ, ಸೆ. 18: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೀನಪ್ಪ ಪೂಜಾರಿ ಬರಿಮಾರು ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ದಿನಕರ ಅಂಚನ್ ಬರಿಮಾರು ಮಾತನಾಡಿ, “ಮಾನವಕುಲಕ್ಕೆ ಸಮಾನತೆಯ ಸಂದೇಶ ನೀಡಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ, ಮತ, ಭೇದಭಾವಗಳನ್ನು ಮೀರಿ ಮಾನವೀಯತೆಯ ಬದುಕಿಗೆ ದಾರಿ ತೋರಿಸಿದರು. ಶಿಕ್ಷಣದ ಮೂಲಕ ಜ್ಞಾನವನ್ನು ಬೆಳೆಸಬೇಕು, ಸಂಘಟನೆಯ ಮೂಲಕ ಸಮಾಜವನ್ನು ಬಲಪಡಿಸಬೇಕು ಹಾಗೂ ಸಮಾನತೆಯ […]
Read More

18-09-2026, 5:00 PM
ಪಣಂಬೂರು ಕುಳಾಯಿ ಸೆ 18 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ “ಸ್ವಚ್ಛ ಸಾಗರ್ – ಸುರಕ್ಷಿತ ಸಾಗರ್ ಅಭಿಯಾನ – 2026”ರ ಅಂಗವಾಗಿ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಅಭಿಯಾನದ ಅಂಗವಾಗಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಛಗೊಳಿಸಿದರು. ಈ ಮೂಲಕ ಕಡಲತೀರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈಜೋಡಿಸಿದರು. ಸ್ವಚ್ಛ ಹಾಗೂ ಸುರಕ್ಷಿತ ಕಡಲತೀರ ನಿರ್ಮಾಣದ […]
Read More

17-09-2026, 8:00 PM
ಪಡುಬಿದ್ರಿ, ಸೆ. 17: ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ನೂತನ ತಂಡದ ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ಹಾಗೂ ಭಜನಾ ಸೇವೆ ಸಲ್ಲಿಸುವುದು ಘಟಕದ ಸಂಪ್ರದಾಯವಾಗಿದೆ. ಅದರಂತೆ, ಸೆಪ್ಟೆಂಬರ್ 17ರಂದು ಗುರುವಾರ ಘಟಕದ ವತಿಯಿಂದ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಹಾಗೂ ಭಜನಾ ಸೇವೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಗುರುಗಳ ಸನ್ನಿಧಿಯಲ್ಲಿ ನೂತನ ತಂಡದ ಯಶಸ್ವಿ ಕಾರ್ಯಚಟುವಟಿಕೆಗಳಿಗೆ ಪ್ರಾರ್ಥನೆ ಸಲ್ಲಿಸಿ, ಗುರುತತ್ವ ಹಾಗೂ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಮುನ್ನಡೆಯುವ ಸಂಕಲ್ಪವನ್ನು ಕೈಗೊಳ್ಳಲಾಯಿತು. […]
Read More

17-09-2026, 8:00 PM
ಮಾಣಿ, ಸೆ. 17: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸೆಪ್ಟೆಂಬರ್ 17ರಂದು ಮೋಹನ ಪೂಜಾರಿ ಮುಜಲ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಅಮೀನ್ ಪೆರಾಜೆ ಅವರು, ಹಿಂದಿನ ಕಾಲದ ಕೇರಳದಲ್ಲಿ ನೆಲೆಸಿದ್ದ ಮೇಲು–ಕೀಳು ಭೇದಭಾವ ಹಾಗೂ ಅನಿಷ್ಟ ಪದ್ಧತಿಗಳಿಂದಾಗಿ ಸಮಾಜದಲ್ಲಿ ಅಸಮಾನತೆ ಬೇರೂರಿತ್ತು. ಇಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ, ಸಮಾನತೆ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಮಾಜವನ್ನು ಮುನ್ನಡೆಸುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ […]
Read More

16-09-2026, 8:00 PM
ಕೊಲ್ಯ, ಸೆ. 16: ಯುವವಾಹಿನಿ (ರಿ.) ಕೊಲ್ಯ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಸಹಯೋಗದಲ್ಲಿ ಪಿಎಂ ಶ್ರೀ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಒಂಬತ್ತುಕೆರೆ, ಉಳ್ಳಾಲ ಇಲ್ಲಿನ ವಿದ್ಯಾರ್ಥಿಗಳಿಗೆ ಮೊಬೈಲ್ ಅಡಿಕ್ಷನ್ ಹಾಗೂ ಡ್ರಗ್ಸ್ ಅಡಿಕ್ಷನ್ ಕುರಿತು ಮಾಹಿತಿ ಶಿಬಿರವು ಸೆ. 16ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯ ಹಿನ್ನೆಲೆಯಲ್ಲಿ ಮೊಬೈಲ್ ಅಡಿಕ್ಷನ್ […]
Read More

16-09-2026, 8:00 PM
ಮಂಗಳೂರು, ಸೆ. 16: ಯುವಕರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಅವರೊಳಗಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಲು ಯುವವಾಹಿನಿ ಸಂಸ್ಥೆಯು ಉತ್ತಮ ವೇದಿಕೆಯನ್ನು ನಿರ್ಮಿಸುತ್ತಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕ ಹಾಗೂ ಮುಖ್ಯ ತರಬೇತುದಾರ, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಘಟಕದ ಸಾಪ್ತಾಹಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದ ಅವರು, ಇಂದಿನ ಯುವಕರಿಗೆ ತಮ್ಮ […]
Read More

15-09-2026, 8:00 PM
ಎಡಪದವು, ಸೆ. 15: ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಎಡಪದವು ಇದರ ಆಶ್ರಯದಲ್ಲಿ ನಡೆಯುತ್ತಿರುವ 17ನೇ ವರ್ಷದ ಎಡಪದವು ಗಣೇಶೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಕುಪ್ಪೆಪದವು–ಎಡಪದವು ಘಟಕದ ವತಿಯಿಂದ ಸೆ. 15ರಂದು ಒಂದು ದಿನದ ಸ್ವಯಂಸೇವಾ ಕಾರ್ಯ ನಡೆಸಲಾಯಿತು. ಮಧ್ಯಾಹ್ನ 1 ಗಂಟೆಯಿಂದ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಗಣೇಶೋತ್ಸವದ ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೇವಾ ಮನೋಭಾವದಿಂದ ಕೈಜೋಡಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ […]
Read More