ಕೂಳೂರು ಸೆ 18 : ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 67ನೇ ಮನೆ ಮನೆ ಭಜನೆ ಕಾರ್ಯಕ್ರಮವು ಘಟಕದ ಸದಸ್ಯರಾದ ಶ್ರೀಮತಿ ಹರಿಣಾಕ್ಷಿ ಭಾಸ್ಕರ್ ಅವರ ಉರುಂದಾಡಿಯ ನಿವಾಸದಲ್ಲಿ ಸೆ. 18ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಹರಿಣಾಕ್ಷಿ ಭಾಸ್ಕರ್ ದಂಪತಿಗಳನ್ನು ಕೂಳೂರು ಘಟಕದ ಅಧ್ಯಕ್ಷೆ ಗೀತಾವಸಂತ್ ಅವರು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಿದರು. ಬಳಿಕ ಪ್ರಸಾದ ವಿತರಣೆ ನಡೆಯಿತು. ಸುಮಾರು 50ಕ್ಕೂ ಅಧಿಕ ಸದಸ್ಯರು ಭೋಜನ ಪ್ರಸಾದ ಸ್ವೀಕರಿಸಿ ಸಂತೃಪ್ತರಾದರು.






