
26-10-2026, 9:00 PM
ಮಂಗಳೂರು ಅ 26 : ಮಹಿಳೆಯರಿಗೆ ಜವಾಬ್ದಾರಿ ನೀಡಿದರೆ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯುವವಾಹಿನಿ ಮಹಿಳಾ ಘಟಕವೇ ಸಾಕ್ಷಿಯಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಸಂಘ-ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಿಳಾ ಮಂಡಳಿ, ಕಟಪಾಡಿಯ ಅಧ್ಯಕ್ಷೆ ಗೀತಾಂಜಲಿ ಸುವರ್ಣ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅಕ್ಟೋಬರ್ 26ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಉದ್ಘಾಟಿಸಿ […]
Read More

26-10-2026, 8:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 26-10-2026 ರಂದು ಸಂಜೆ ನಡೆಯಿತು. ಇಂದಿನ ಭಜನಾ ಸೇವೆಯು ಯುವವಾಹಿನಿ (ರಿ.) ಗ್ರಾಮಚಾವಡಿ ಘಟಕ ಕೊಣಾಜೆ ಇವರ ಸಹಯೋಗದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಮನ ತುಂಬುವ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. […]
Read More

26-10-2026, 8:00 PM
ಮಂಗಳೂರು ಅ 26 :ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2026–27ನೇ ಸಾಲಿನ ಅಧ್ಯಕ್ಷರಾಗಿ ದೀಪಿಕಾ ಮನೋಜ್ ಆಯ್ಕೆಯಾಗಿದ್ದಾರೆ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರು : ದೀಪಿಕಾ ಮನೋಜ್ಪ್ರಥಮ ಉಪಾಧ್ಯಕ್ಷರು: ಸೋನಿಯಾ ರಾಜ್ದ್ವಿತೀಯ ಉಪಾಧ್ಯಕ್ಷರು : ಜಯಲಕ್ಷ್ಮಿಕಾರ್ಯದರ್ಶಿ : ಪ್ರಿಯಾ ಸುರೇಶ್ಜೊತೆ ಕಾರ್ಯದರ್ಶಿ: ಸುಪ್ರಿಯ ಸಚಿನ್ಕೋಶಾಧಿಕಾರಿ : ರೂಪ ಜನಾರ್ಧನ್ ನಿರ್ದೇಶಕರುವ್ಯಕ್ತಿತ್ವ ವಿಕಸನ ನಿರ್ದೇಶಕರು : ಸರಿತಾ ಯಶವಂತ್ಕ್ರೀಡಾ ನಿರ್ದೇಶಕರು : ಲಲಿತಾ ವಿ.ಎಸ್.ಆರೋಗ್ಯ ನಿರ್ದೇಶಕರು : ಸುಜಾತ ಕೋಟ್ಯಾನ್ಸಮಾಜ ಸೇವಾ ನಿರ್ದೇಶಕರು : ಲಲಿತ ಪೂಜಾರಿಕಲೆ […]
Read More

26-10-2026, 10:00 AM
53 ಮಂದಿ ಸದಸ್ಯರಿಂದ ನಾರಾಯಣ ಗುರುಗಳ ಜನ್ಮಸ್ಥಳ, ಶಿವಗಿರಿ ಮಠ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಂಗಳೂರು ಅ 26 : ಬ್ರಹ್ಮಶ್ರೀ ನಾರಾಯಣ ಗುರುದೇವರ ತತ್ವಾದರ್ಶಗಳನ್ನು ಅರಿತು, ಅವರ ಜೀವನ ಸಂದೇಶವನ್ನು ಅನುಭವಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಆಯೋಜಿಸಲಾದ ಶಿವಗಿರಿ–ರಾಮೇಶ್ವರ ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳ ಆಧ್ಯಾತ್ಮಿಕ ಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಘಟಕದ ಸದಸ್ಯರು ಸೇರಿದಂತೆ ಒಟ್ಟು 53 ಮಂದಿ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಕ್ಟೋಬರ್ 24ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ […]
Read More

25-10-2026, 11:00 PM
ಕಡಬ, ಅ. 25: ಯುವವಾಹಿನಿ (ರಿ.) ಕಡಬ ಘಟಕದ 2026–27ನೇ ಸಾಲಿನವಾರ್ಷಿಕ ಮಹಾಸಭೆಯು ಕಡಬದ ಜಯದುರ್ಗಾ ವಿಲಾಸ ಸಭಾಭವನದಲ್ಲಿ ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತುಈ ಸಭೆಯಲ್ಲಿ ಯುವವಾಹಿನಿ ಕಡಬ ಘಟಕದ 2026-27 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು ಅಧ್ಯಕ್ಷರು : ಸರಿತಾ ಉಂಡಿಲಪ್ರಥಮ ಉಪಾಧ್ಯಕ್ಷರು : ಜಯಪ್ರಕಾಶ್ ದೋಳದ್ವಿತೀಯ ಉಪಾಧ್ಯಕ್ಷರು : ಸತೀಶ್ ಬಳ್ಪಕಾರ್ಯದರ್ಶಿ : ಧನಂಜಯ ಮರ್ದಾಳಜೊತೆ ಕಾರ್ಯದರ್ಶಿ : ತುಳಸಿ ಪಡ್ಕಿಲಾಯಕೋಶಾಧಿಕಾರಿ : ಸವಿತಾ ಸುಬ್ರಹ್ಮಣ್ಯ ನಿರ್ದೇಶಕರು […]
Read More

25-10-2026, 2:00 PM
ಉಳಿತಾಯದ ಹವ್ಯಾಸ ಭವಿಷ್ಯದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ – ಶಾಸಕ ಡಿ. ವೇದವ್ಯಾಸ ಕಾಮತ್ ಮಂಗಳೂರು ಅ 25 : ಭಾರತೀಯ ಅಂಚೆ ಇಲಾಖೆಯು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಹಲವು ಜನಪರ ಸೇವೆಗಳನ್ನು ಒದಗಿಸುತ್ತಿದ್ದು, ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಅಂಚೆ ಇಲಾಖೆಯ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು. ಅವರು ಅಕ್ಟೋಬರ್ […]
Read More

25-10-2026, 11:00 AM
102 ಯೂನಿಟ್ ರಕ್ತ ಸಂಗ್ರಹ | 150ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ | 62 ಮಂದಿಗೆ ಉಚಿತ ಕನ್ನಡಕ | 20 ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಬೆಳ್ತಂಗಡಿ ಅ 25 : ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ಅಗತ್ಯವಿರುವವರಿಗೆ ವೈದ್ಯಕೀಯ ನೆರವು ಒದಗಿಸುವ ಮೂಲಕ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರವು ಅಕ್ಟೋಬರ್ 25ರಂದು ಗುರುವಾಯನಕೆರೆಯ N.E.T. […]
Read More

23-10-2026, 9:00 PM
ವಾಮದಪದವು ಅ 23 : ನಾರಾಯಣಗುರುಗಳು ಸರ್ವೇಶ್ವರನ ಅವತಾರ ಪುರುಷರಾಗಿ ಮಾನವಕುಲದ ಉದ್ಧಾರಕ್ಕಾಗಿ ಜನಿಸಿದ ಮಹಾನ್ ದಾರ್ಶನಿಕರು. ಮನುಷ್ಯನಲ್ಲಿರುವ ದೈವತ್ವವನ್ನು ಗುರುತಿಸಿ, ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ನಾರಾಯಣಗುರುಗಳು ಎಂದು ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವರಾಜ್ ಗಟ್ಟಿ ಹೇಳಿದರು. ನಾರಾಯಣಗುರುಗಳ ಆಧ್ಯಾತ್ಮಿಕ ಚಿಂತನೆ ಮತ್ತು ಸಮಾಜ ಸುಧಾರಣೆಯ ಕಾರ್ಯಗಳನ್ನು ವಿವರಿಸಿದ ಅವರು, ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೈವತ್ವವನ್ನು ಕಾಣುವ ವಿಶಾಲ ದೃಷ್ಟಿಕೋನವನ್ನು […]
Read More

22-10-2026, 8:00 PM
ಉಡುಪಿ, ಅ. 22: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ದಿನಾಂಕ 22-10-2026ರ ಗುರುವಾರ ಸಂಜೆ 6:30ಕ್ಕೆ ಘಟಕದ ಪ್ರಚಾರ ನಿರ್ದೇಶಕರಾದ ಶಕುಂತಲಾ ಸುಕೇಶ್ ಅವರ ಮನೆಯಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರೆಲ್ಲರೂ ಸೇರಿ ಗುರುಗಳಿಗೆ ದೀಪ ಬೆಳಗಿಸಿ, ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಂದಿನ ಯುವಜನತೆಗೆ ಪ್ರೇರಣೆ ನೀಡುವ ಹಾಗೂ ಮನಮುಟ್ಟುವ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಘಟಕದ ಸಂಘಟನಾ ಕಾರ್ಯದರ್ಶಿ ಮಹೇಶ್ ಮಲ್ಪೆ ಅವರು ಗುರು ಸತ್ಸಂಗ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಘಟಕದ […]
Read More

22-10-2026, 7:00 PM
ಮಂಗಳೂರು ಅ 22 : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು. ಮಂಗಳೂರು ದಸರಾ ಮಹೋತ್ಸವ–2026ರ ಯಶಸ್ಸಿಗಾಗಿ ಕ್ಷೇತ್ರದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಜರುಗಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) […]
Read More