01-02-2026, 1:00 PM
ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಆಯೋಜಿಸಲಾದ 100ನೇ ಉಚಿತ ಆರೋಗ್ಯ ಶಿಬಿರದ ಸಂದರ್ಭದಲ್ಲಿ ಸಮಾಜಸೇವೆಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕವನ್ನು ಗೌರವಿಸಲಾಯಿತು, ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರು ಗೌರವ ಸ್ವೀಕರಿಸಿದರು. ಸಾರ್ವಜನಿಕ ಆರೋಗ್ಯ ಜಾಗೃತಿ, ಸೇವಾಭಾವನೆ ಮತ್ತು ಮಹಿಳಾ ಸಬಲೀಕರಣದ ದಿಸೆಯಲ್ಲಿ ಯುವವಾಹಿನಿ ಮಹಿಳಾ ಘಟಕದ ಕೊಡುಗೆಯನ್ನು ಗುರುತಿಸಿ ನೀಡಲಾದ ಈ ಗೌರವವು ಸಂಘಟನೆಯ ಸೇವಾ ಪಯಣಕ್ಕೆ ಮತ್ತಷ್ಟು ಪ್ರೇರಣೆಯಾಯಿತು.
Read More
01-02-2026, 1:00 PM
ಪಡೀಲು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇವರ ಆಶ್ರಯದಲ್ಲಿ “ಆರೋಗ್ಯ ಸೇವಾ ಸಂಗಮ” ಎಂಬ ಶೀರ್ಷಿಕೆಯಡಿ 100ನೇ ಬೃಹತ್ ಉಚಿತ ವೈದ್ಯಕೀಯ, ನೇತ್ರ, ದಂತ ಹಾಗೂ ರಕ್ತದಾನ ಶಿಬಿರ, ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ ಹಾಗೂ ಸಂಘದ ಹದಿನಾಲ್ಕನೇ ವಾರ್ಷಿಕೋತ್ಸವವು ದಿನಾಂಕ 01.02.2026ರ ಆದಿತ್ಯವಾರ ಪಡೀಲಿನ ಬೈರಾಡಿ ಕೆರೆಯ ಸಮೀಪದಲ್ಲಿರುವ ಆತ್ಮಶಕ್ತಿ ಸೌಧದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದ ಅಂಗವಾಗಿ ಶಿಬಿರಕ್ಕೆ ಸಹಯೋಗ ನೀಡಿದ ವಿವಿಧ ಸಂಘ–ಸಂಸ್ಥೆಗಳ ಗುರುತಿಸುವಿಕೆ ಮತ್ತು ಗೌರವ ಕಾರ್ಯಕ್ರಮವನ್ನು […]
Read More
01-02-2026, 11:30 AM
ಕೊಲ್ಯ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ಆಯೋಜಿಸಲಾದ ಬಿಲ್ಲವಾಸ್ ವುಮೆನ್ಸ್ ಪ್ರೀಮಿಯರ್ ಲೀಗ್ – 2026 ಕ್ರಿಕೆಟ್ ಪಂದ್ಯಾಟದಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ತಂಡವು ಭಾಗವಹಿಸಿ, ಅತ್ಯುತ್ತಮ ಪ್ರದರ್ಶನ ನೀಡಿತು. ಪಂದ್ಯಾಟದ ಅವಧಿಯಲ್ಲಿ ಕೊಲ್ಯ ಘಟಕದ ಮಹಿಳಾ ಆಟಗಾರ್ತಿಯರು ತಮ್ಮ ಆಟದ ಮೂಲಕ ಕೌಶಲ್ಯ, ಆತ್ಮವಿಶ್ವಾಸ ಮತ್ತು ತಂಡಾತ್ಮಕ ಮನೋಭಾವವನ್ನು ಪ್ರದರ್ಶಿಸಿ, ಪ್ರೇಕ್ಷಕರ ಹಾಗೂ ಸಂಘಟಕರ ಮೆಚ್ಚುಗೆಗೆ ಪಾತ್ರರಾದರು.
Read More
31-01-2026, 9:00 PM
ಬೆಳ್ತಂಗಡಿ : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ತಾಲೂಕು ಇವರ ಸಹಕಾರದೊಂದಿಗೆ ದಿನಾಂಕ 31.01.2026 ಶನಿವಾರ ಸಂಭ್ರಮ–2 ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪಣಕಜೆಯ ನವಸುಮ ನಿವಾಸದಲ್ಲಿ ಆತ್ಮೀಯವಾಗಿ ನಡೆಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ “ಸ್ಪಂದನ : ಹೃದಯ ಸ್ತಂಭನ ಹಾಗೂ ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉಜಿರೆ ಬೆನಕ ಹೆಲ್ತ್ ಸೆಂಟರ್ನ ತುರ್ತು ಚಿಕಿತ್ಸಾ ತಜ್ಞರಾದ ಡಾ. […]
Read More
31-01-2026, 10:00 AM
ಪಡುಬಿದ್ರಿ: ಕ್ರೀಡೆ ಸಂಘಟನೆಗೆ ಏಕತೆಗೆ ಅತ್ಯುತ್ತಮ ಆಯ್ಕೆ. ಕ್ರೀಡೆ ಮೂಲಕ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಟ್ಟ ಯುವವಾಹಿನಿಯ ಪ್ರಯತ್ನ ಶ್ಲಾಘನೀಯ ಎಂದು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ತಿಳಿಸಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಬಿಲ್ಲವಾಸ್ ವುಮನ್ಸ್ ಪ್ರೀಮಿಯರ್ ಲೀಗ್- 2026 ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ಕು| ರಕ್ಷಾ ರೆಂಜಾಳ ಮಾತನಾಡಿ, ಇಂತಹ ವಿನೂತನ […]
Read More
29-01-2026, 10:00 AM
ಕಟಪಾಡಿ : ಯುವವಾಹಿನಿ (ರಿ.) ಕಟಪಾಡಿ ಘಟಕದ ಆಶ್ರಯದಲ್ಲಿ ದಿನಾಂಕ 29/01/2026ರಂದು ಕೋಟೆ ಅಂಗನವಾಡಿ ಕೇಂದ್ರದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬ್ರಹ್ಮಶ್ರೀ ನಾರಾಯಣಗುರುಗಳ ಸ್ಮರಣೆಯೊಂದಿಗೆ, ಘಟಕದ ಪೂರ್ವ ಅಧ್ಯಕ್ಷರಾದ ವಾಮನ್ ಪೂಜಾರಿ ಅವರು ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ಭಕ್ತಿಭಾವದ ಮುನ್ನುಡಿ ನೀಡಿದರು. ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಮೀಳಾ ಜತ್ತನ್ ಹಾಗೂ ಕೋಟೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ದಯಾನಂದ ಬಂಗೇರ ಅವರು ಉದ್ಘಾಟಿಸಿದರು.ಯುವವಾಹಿನಿ (ರಿ.) ಕಟಪಾಡಿ ಘಟಕದ […]
Read More
28-01-2026, 7:00 PM
ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ “ಮನೆ ಮನದಲ್ಲಿ ಭಜನೆ” ಯೋಜನೆಯ ಅಂಗವಾಗಿ, ದಿನಾಂಕ 28-01-2026 ಬುಧವಾರ ಘಟಕದ ಗೌರವ ಸದಸ್ಯರಾದ ಪ್ರಕಾಶ್ ಪೂಜಾರಿ ಅವರ ಮನೆಯಲ್ಲಿ ಸಂಜೆ 6:00 ಗಂಟೆಗೆ ಗುರುಪೂಜೆ ಹಾಗೂ ಘಟಕದ ಭಜನಾ ತಂಡದ ವತಿಯಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಭಕ್ತಿ–ಭಾವಪೂರ್ಣ ಭಜನಾ ಕೀರ್ತನೆಯಲ್ಲಿ ಯುವವಾಹಿನಿ ಮಂಗಳೂರು ಘಟಕದ ಸದಸ್ಯರಾದ ಸದಾನಂದ ಪೂಜಾರಿ ಅವರು ಗುರುಪೂಜಾ ಕಾರ್ಯವನ್ನು ನೆರವೇರಿಸಿದರು. ಭಜನಾ ಸೇವೆಗೆ ಆತಿಥ್ಯ ವಹಿಸಿದ ಪ್ರಕಾಶ್ ಪೂಜಾರಿ ದಂಪತಿಗಳನ್ನು ಘಟಕದ ವತಿಯಿಂದ […]
Read More
27-01-2026, 9:00 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಕೆ ಸುವರ್ಣ ಆಯ್ಕೆಯಾಗಿದ್ದಾರೆ ಅಧ್ಯಕ್ಷರು : ಹರೀಶ್ ಕೆ.ಸುವರ್ಣಪ್ರಥಮ ಉಪಾಧ್ಯಕ್ಷರು : ಯತೀಶ್ ಬಳಂಜದ್ವಿತೀಯ ಉಪಾಧ್ಯಕ್ಷರು : ಮಹೇಶ್ ಅಮೀನ್ಕಾರ್ಯದರ್ಶಿ : ಉಷಾ.ಕೆ ಪೂಜಾರಿಜೊತೆ ಕಾರ್ಯದರ್ಶಿ : ತಿಲಕ್ ರಾಜ್ ಸುವರ್ಣಕೋಶಾಧಿಕಾರಿ : ಚಂದ್ರಶೇಖರ್ ಕಿನ್ನಿಗೋಳಿ ವ್ಯಕ್ತಿತ್ವ ವಿಕಸನ ನಿರ್ದೇಶಕರು : ಶ್ರೀಕಾಂತ್ ಅಂಚನ್ಕ್ರೀಡಾ ನಿರ್ದೇಶಕರು : ಸುಜೀತ್ ಕೋಟಾನ್ಆರೋಗ್ಯ ನಿರ್ದೇಶಕರು : ಶಶೀಂದ್ರ ಪೂಜಾರಿಸಮಾಜ ಸೇವಾ ನಿರ್ದೇಶಕರು :ದಿನೇಶ್ […]
Read More
27-01-2026, 8:00 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ತನ್ನ ಸಂಘಟನಾ ಚಟುವಟಿಕೆಗಳ ಮೂಲಕ ಸಮಾಜಮುಖಿ ಮೌಲ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಿರಂತರವಾಗಿ ಕೈಜೋಡಿಸುತ್ತಿದ್ದು, ಶೈಕ್ಷಣಿಕ ಪ್ರೋತ್ಸಾಹ, ಸೇವಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುವಕರಲ್ಲಿ ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ಸೇವಾಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಭಾರತೀಯ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೂಜಾರಿ ತಿಳಿಸಿದ್ದಾರೆ.ಅವರು ದಿನಾಂಕ 27.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ ಯುವವಾಹಿನಿ (ರಿ) ಮಂಗಳೂರು ಘಟಕದ 2026–27ನೇ ಸಾಲಿನ ನೂತನ […]
Read More
26-01-2026, 9:00 PM
ವೇಣೂರು : ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ದಿನಾಂಕ 26.01.2026ರ ಸೋಮವಾರ ಸೈಂಟ್ ಮೇರಿ ದ್ವೀಪಕ್ಕೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಬೆಳಿಗ್ಗೆ 9 ಗಂಟೆಗೆ ವೇಣೂರುನಿಂದ ಹೊರಟ ಪ್ರವಾಸ ತಂಡವು ಬಜಗೋಳಿಯಲ್ಲಿ ಉಪಹಾರ ಸೇವಿಸಿ, ಬಸ್ಸಿನಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಮಲ್ಪೆಗೆ ಪ್ರಯಾಣಿಸಿತು. ಬಳಿಕ ಬೋಟ್ ಮೂಲಕ ಸೈಂಟ್ ಮೇರಿ ದ್ವೀಪಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಸಂಭ್ರಮಿಸಿದರು. ಮಧ್ಯಾಹ್ನದ ಊಟವನ್ನು ಮಲ್ಪೆ ಬೀಚ್ ಸಮೀಪದ ಹೋಟೆಲ್ನಲ್ಲಿ ಸೇವಿಸಿದ ಬಳಿಕ ಮಲ್ಪೆ […]
Read More