14-08-2016, 5:47 AM
ದಿನಾಂಕ 14-08-2016ರ ಆದಿತ್ಯವಾರ ಅಡ್ವೆ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಉದ್ಘಾಟನೆಯನ್ನು ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಅಧ್ಯಕ್ಷ ಸುಂದರ ಯು. ಸುವರ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ಕುಮಾರ್, ಸಾಹಿತಿ ಉಗ್ಗಪ್ಪ ಪೂಜಾರಿ ಬೆದ್ರ, ಚಿತ್ರನಟ ಭೋಜರಾಜ ವಾಮಂಜೂರು, ಅಥನಿ ಕಂಪೆನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ನವೀನ್ಚಂದ್ರ ಸುವರ್ಣ, ಸುರೇಶ್ ಶೆಟ್ಟಿ ಮೂಡುಗುತ್ತು, ತ್ಯಾಂಪಣ್ಣ ಶೆಟ್ಟಿ ಮತ್ತು ಮನೋಜ್ ಕರ್ಕೇರ ಮೊದಲಾದವರು ಭಾಗವಹಿಸಿದ್ದರು. ಹಿರಿಯರಾದ ಸುಧಾಕರ ಡಿ. […]
Read More
14-08-2016, 5:37 AM
ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 14-08-2016ರಂದು ಘಟಕದ ಉಪಾಧ್ಯಕ್ಷ ಯೋಗೀಶ್ ಮಜಿಕುಡೇಲು ಇವರ ಅಧ್ಯಕ್ಷತೆಯಲ್ಲಿ ಸುವರ್ಣ ಆರ್ಕೆಡ್ ಸಂತೆಕಟ್ಟೆ ಇಲ್ಲಿ ಜರಗಿತು. ಸಭೆಯಲ್ಲಿ 2015-16ನೇ ಸಾಲಿನ ವಾರ್ಷಿಕ ವರದಿ ಮಂಡನೆ ಜಮಾ-ಖರ್ಚಿನ ವಿವರ ಮಂಡನೆ, 2016-17ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಪರಿಶೀಲನೆ, 2016-17ನೇ ಸಾಲಿನ ನಿರ್ದೇಶಕರ ಆಯ್ಕೆ ನಡೆಯಿತು. ಪ್ರಾರಂಭದಲ್ಲಿ ರಘುನಾಥ್ ಶಾಂತಿ ಪ್ರಾರ್ಥಿಸಿ, ಅಶ್ವತ್ ಕುಮಾರ್ರವರು ಸ್ವಾಗತಿಸಿ, ಸ್ಮಿತೇಶ್ ಎಸ್. ಬಾರ್ಯ ವಂದಿಸಿದರು. ನಿರ್ದೇಶಕರ ಸಭೆ ದಿನಾಂಕ 14-8-2016ರಂದು ಘಟಕದ ನೂತನ ನಿರ್ದೇಶಕರ ಪ್ರಥಮ […]
Read More
12-08-2016, 5:40 AM
ತೀರಾ ಅನಾರೋಗ್ಯದಿಂದ ಬಳಲುತ್ತಿರುವ ಆರಂಬೋಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ಪದ್ಮ ಪೂಜಾರಿಯವರ ಮನೆಗೆ ದಿನಾಂಕ 12-8-2016ರಂದು ಘಟಕದ ಪದಾಧಿಕಾರಿಗಳು, ನಿರ್ದೇಶಕರು, ಸಲಹೆಗಾರರು ಭೇಟಿ ನೀಡಿ ಚಿಕಿತ್ಸಾ ವೆಚ್ಚಕ್ಕಾಗಿ ರೂ. 10,000/- ಮೊತ್ತದ ಸಹಾಯಧನವನ್ನು ನೀಡಿದರು.
Read More
10-08-2016, 7:42 AM
ಆಟಿ ತಿಂಗಳ ಆಚರಣೆಯು ಪರಿಪೂರ್ಣವಾದ ವೈಜ್ಞಾನಿಕ ವಿಷಯಗಳಿಂದ ಕೂಡಿದ್ದು, ಇದರ ಬಗ್ಗೆ ಜನರಲ್ಲಿರುವ ಮೌಢ್ಯವನ್ನು ಸೂಕ್ತ ತಿಳಿವಳಿಕೆ ನೀಡುವ ಮೂಲಕ ನಿವಾರಿಸ ಬೇಕು. ಅದರಲ್ಲಿರುವ ಉತ್ತಮ ಅಂಶಗಳನ್ನು ಬೆಳೆಸಿಕೊಂಡು ಬರುವುದು ಒಳಿತು ಎಂದು ಹಿರಿಯ ಶಿಕ್ಷಕ ಹಾಗೂ ಪತ್ರಕರ್ತ ವಾಮನ ಇಡ್ಯಾ ಹೇಳಿದರು. ಅವರು ಮೂಲ್ಕಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಜರಗಿದ 14 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಆಚರಣೆಯಲ್ಲಿ ಅಡಗಿರುವ ಮೌಢ್ಯಗಳ ಅಂಶಗಳನ್ನು ಸರಿಪಡಿಸಿಕೊಂಡು ಮುಖ್ಯವಾಗಿ ಯುವಜನರಲ್ಲಿ ತಿಳುವಳಿಕೆಯನ್ನು ಮೂಡಿಸಿ ತುಳು […]
Read More
31-07-2016, 1:01 PM
ಕ್ರೀಡಾ ಪಟುಗಳ ವಿಶ್ವದ ಅತ್ಯುನ್ನತ ವೇದಿಕೆ- ಒಲಿಂಪಿಕ್ಸ್ ಇದರಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯನ್ನು ಗಳಿಸುವುದೇ ಅತ್ಯಂತ ಕಷ್ಟಕರ ಪ್ರಯಾಸಕರ ಸವಾಲು. ಕ್ರೀಡೆಯ ತನ್ನ ಆಸಕ್ತಿಗಳನ್ನು ಮಾರ್ಗದರ್ಶಕರಾದ ಶ್ರೀಯುತ ಅಬ್ಬಾಸ್ ಹಾಗೂ ಲಚ್ಚೇಂದ್ರ ರಿಂದ ಪೋಷಿಸಿಕೊಂಡು ನಂಬಲಸಾಧ್ಯ ಸಾಧನೆ- ಒಲಿಂಪಿಕ್ಗೆ ಆಯ್ಕೆಯ ಕನಸನ್ನು ನೆನಸಾಗಿಸಿದ ಕರ್ನಾಟಕದ ಹೆಮ್ಮೆಯ ಶ್ರೀ ಮನೀಷ್ ಪೂಜಾರಿ ಒಬ್ಬ ಧ್ರುವತಾರೆ. ಕರ್ನಾಟಕದ ಉಸೈನ್ ಬೋಲ್ಟ್ ಎಂದು ಕರೆಯಲ್ಪಡಲು ಅರ್ಹ ರಾಷ್ಟ್ರೀಯ ದಾಖಲೆಯುತ್ತ ಸಾಗುವ ಪ್ರಥಮಹಂತ, ರಾಜ್ಯ ದಾಖಲೆಯ 100ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಹಾಗೂ 21.5 ಸೆ.ನಲ್ಲಿ […]
Read More
31-07-2016, 12:56 PM
ವಿದ್ಯಾರ್ಥಿಯೊಬ್ಬರ ಸತತ ಪರಿಶ್ರಮದ ಸಾಧನೆಯ ಮಾನದಂಡ ಆತ/ ಆಕೆ ಗಳಿಸುವ ಶೇಕಡಾವಾರು ಅಂಕ. ಈ ನಿಟ್ಟಿನಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಸಿ ಶೇ. 99.52 % ಸಾಧನೆ ಮಾಡಿದ ಕು| ರಕ್ಷಾ ಡಿ ಅಂಚನ್ ನೋಡುವವರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶ್ರೀ ದೇವಿಪ್ರಸಾದ್ ಹಾಗೂ ಶ್ರೀಮತಿ ವಿನೋದಾ ದಂಪತಿಗಳ ಈ ಹೆಮ್ಮೆಯ ಕುವರಿ. ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಾಳೆ. ಕನ್ನಡದಲ್ಲಿ 125 ಕ್ಕೆ 125, ಹಿಂದಿ, ಗಣಿತ ಹಾಗೂ ವಿಜ್ಞಾನದಲ್ಲಿ 100 ಕ್ಕೆ 100 […]
Read More
31-07-2016, 12:49 PM
2015-16 ರ ಸಾಲಿನ CBSE 10 ೦ನೇ ತರಗತಿ ಪರೀಕ್ಷೆಯಲ್ಲಿ ಉದ್ಯಾವರ ಪ್ರತಾಪ್ ಕುಮಾರ್ 10 ಕ್ಕೆ 10 ಗ್ರೇಡ್ ಅಂಕ ಗಳಿಸಿರುತ್ತಾನೆ. ವಿಜ್ಞಾನ ಮಾದರಿಯಲ್ಲಿ ರಾಜ್ಯ ಮಟ್ಟದ ಪ್ರದರ್ಶನ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ನಲ್ಲಿ ವಿಶಿಷ್ಟ ಶ್ರೇಣಿ, ಅಂತರ ಶಾಲಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ಈತ ಕಾಲ್ಚೆಂಡು ಆಟಗಾರ ಕೂಡ. ಶಾಲೆಯಲ್ಲಿ ಪ್ರಬಂಧ, ಭಾಷಣ, ಹಾಡುಗಾರಿಕೆ, ಛದ್ಮವೇಷ, ವಿಜ್ಞಾನ ಮಾದರಿ, ಗೂಡುದೀಪ ತಯಾರಿಕೆ, […]
Read More
31-07-2016, 12:46 PM
ಕು| ನಿಧಿಶಾ-ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿ ಕಳೆದ 2016 ಮಾರ್ಚ್ನಲ್ಲಿ ನಡೆಸಿದ SSLC ಪರೀಕ್ಷೆಯಲ್ಲಿ 625 ಕ್ಕೆ ನಂಬಲಸಾಧ್ಯವಾದ 620 ಅಂಕಗಳಿಂದ ಕಲಿತ ಶಾಲೆಯ ಅಧ್ಯಾಪಕರು, ಪೋಷಕರು ಮತ್ತು ಬಿಲ್ಲವ ಸಮುದಾಯವೇ ಹೆಮ್ಮೆ ಪಡುವ ಸಾಧನೆ ಮಾಡಿರುತ್ತಾರೆ. ಈ ಬೆಲೆ ಕಟ್ಟಲಾಗದ ನಿಧಿ ಬರೀ ಕಲಿಕೆಗೇ ಸೀಮಿತಗೊಂಡಿಲ್ಲ. ಸಾಮಾನ್ಯವಾಗಿ ಕಲಿಕೆಯಲ್ಲಿ ಮುಂಚೂಣಿಯಲ್ಲಿರಬೇಕಾದಲ್ಲಿ ಬರೀ, ಪುಸ್ತಕ-ಓದು ಇಷ್ಟಕ್ಕೆ ಸೀಮಿತವಿರಬೇಕೆಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ನಿಧಿಶಾಳ ಪೋಷಕ ಲೋಕನಾಥ್-ಚಿತ್ರಕಲಾ ದಂಪತಿಗಳು ತಮ್ಮ ಮಗಳು ಇತರ ಸಾಧನೆಯನ್ನು ಮಾಡಲೂ ಪ್ರೋತ್ಸಾಹಿಸಿರುವುದು ಸಂತಸದ ವಿಚಾರ. ಪ್ರಬಂಧ ಸ್ಪರ್ಧೆಯಲ್ಲಿ […]
Read More
31-07-2016, 12:44 PM
ಮೂಲ್ಕಿ ಚಿತ್ರಾಪಿನ ಶ್ರೀಮತಿ ಭಾರತಿ ಹಾಗೂ ಶ್ರೀ ಭಾಸ್ಕರ ಕೋಟ್ಯಾನ್ ದಂಪತಿಗಳು ತಮ್ಮ ಮಗಳು ಕು|ರಿಶಿಕಾ ಬೆಳೆದು ಶೈಕ್ಷಾಣಿಕ ಸಾಧನೆಯಿಂದ ಪಠ್ಯೇತರ ಸಾಧನೆಯಿಂದ ತಮಗೆ ಉತ್ತಮ ಹೆಸರು ತರಬಹುದೆಂದು ತಿಳಿದಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಲ್ಲವಸಮುದಾಯದ ಇತ್ತೀಚಿನ ಸಮಾಜೋನ್ನತಿ ಕಾರ್ಯಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು ಯುವವಾಹಿನಿ ಎಂಬ ಸಂಸ್ಥೆಯ ಕಣ್ಣಿಗೆ ಬಿದ್ದ ಈ ಪ್ರತಿಭೆ ಇದೀಗ ಕಲಿಕೆ ಮತ್ತು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ನೃತ್ಯ ಪ್ರಾಕಾರವಾದ ಭರತ ನಾಟ್ಯ ಹೀಗೆ ಎರಡರಲ್ಲೂ ಹೆಸರುಗಳಿಸಿದ್ದು ಉಲ್ಲೇಖನೀಯ ಅಂಶ. ಖ್ಯಾತ ತುಳುನಾಡ […]
Read More
31-07-2016, 12:39 PM
ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ| ಉಮ್ಮಪ್ಪ ಪೂಜಾರಿ ಹಾಗೂ LIC ಉದ್ಯೋಗಿ ಶ್ರೀಮತಿ ರೇಖಾ ದಂಪತಿಗಳ ಪುತ್ರ ಕ್ಷಿಪ್ರಜ್ ಯು CBSE ಹತ್ತನೆಯ ತರಗತಿಯಲ್ಲಿ ಹತ್ತರಲ್ಲಿ ಹತ್ತು ಗ್ರೇಡ್ ಪಾಯಿಂಟ್ ಗಳಿಸಿರುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಕೇಂದ್ರಿಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 21 ನೇ ಸ್ಥಾನ ಪಡೆದಿದ್ದು ದಕ್ಷಿಣ ಭಾರತ ಹಿಂದಿ ಪ್ರಚಾರ್ ಸಭಾ ಇವರು ನಡೆಸಿದ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ […]
Read More