ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ 28-01-2018ನೇ ಆದಿತ್ಯವಾರದಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿಯ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ ಯಶಸ್ವಿಯಾಗಿ ಸಂಪನ್ನಗೊಂಡಿತು.
ಯುವವಾಹಿನಿಯ 28 ಘಟಕ ಗಳನ್ನು ಪ್ರತಿನಿಧಿಸುವ 28 ವರ್ಣರಂಜಿತ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದ ಸ್ವಾಗತ ಗೋಪುರವು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಧ್ವಜಾರೋಹಣ ಮಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಯುವವಾಹಿನಿಯ 28 ಘಟಕಗಳನ್ನು ಸಾಂಕೇತಿಸುವ ಸಲುವಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಯವರು 28 ಬಾರಿ ಡೋಲು ಬಾರಿಸುವ ಮೂಲಕ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆ ಗೆ ಚಾಲನೆ ನೀಡಿದರು. ವರ್ಣರಂಜಿತ ಕೆಂಪು ಬಣ್ಣದ ಸಮವಸ್ತ್ರದ ಸಾಂಪ್ರದಾಯಿಕ ಉಡುಗೆಯ ಮೂಲಕ 150 ಕ್ಕೂ ಹೆಚ್ಚು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಸುವರ್ಣ ಅಲೆತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿಯ ಸ್ಪರ್ಧಾ ತಂಡಗಳನ್ನು ಸ್ವಾಗತ ಗೋಪುರದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಶಿಸ್ತು, ಸಮಯ ಪಾಲನೆ ಮೂಲಕ ಡೆನ್ನಾನ ಡೆನ್ನನ ಯುವವಾಹಿನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಬಂಟ್ವಾಳ ಘಟಕದ ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಕೋಟ್ಯಾನ್ ಕುದನೆ, ಡೆನ್ನಾನ ಡೆನ್ನನ ಸಂಚಾಲಕರಾದ ಪ್ರೇಮನಾಥ್ ಕೆ, ಬಿ.ಶ್ರೀಧರ ಅಮೀನ್, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಗಣೇಶ್ ಪೂಂಜರೆಕೋಡಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ, ಜತೆ ಕಾರ್ಯದರ್ಶಿ ಕಿರಣ್ ರಾಜ್, ಸಲಹೆಗಾರರಾದ ಬಿ. ತಮ್ಮಯ, ಅಣ್ಣು ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ :
ಡೆನ್ನಾನ ಡೆನ್ನನ ಪುರಸ್ಕಾರ
ಪ್ರಥಮ: ಮೂಡಬಿದ್ರೆ ಘಟಕ
ದ್ವಿತೀಯ: ಮಂಗಳೂರು ಘಟಕ
ತೃತೀಯ: ಹೆಜಮಾಡಿ ಘಟಕ
ಚತುರ್ಥ: ಸಸಿಹಿತ್ಲು ಘಟಕ
ಪಂಚಮ: ಪಡುಬಿದ್ರೆ ಘಟಕ
ಕಂಕನಾಡಿ ಘಟಕವು ಶಿಸ್ತು ಪುರಸ್ಕಾರವನ್ನು ಪಡೆದುಕೊಂಡಿತು.
ಡೆನ್ನಾನ ಡೆನ್ನನ ಪ್ರೋತ್ಸಾಹಕ ಪುರಸ್ಕಾರ
ಕಂಕನಾಡಿ ಘಟಕ, ಮಂಗಳೂರು ಮಹಿಳಾ ಘಟಕ, ಮಾಣಿ ಘಟಕ, ಪಣಂಬೂರು, ಕುಳೂರು ಘಟಕ, ಉಪ್ಪಿನಂಗಡಿ ಘಟಕ, ವೇಣೂರು ಘಟಕ, ಪುತ್ತೂರು ಘಟಕ, ಬೆಳ್ತಂಗಡಿ ಘಟಕ, ಸುರತ್ಕಲ್ ಘಟಕ, ಹಳೆಯಂಗಡಿ ಘಟಕ, ಅಡ್ವೆ ಘಟಕ, ಬೆಳುವಾಯಿ ಘಟಕ, ಉಡುಪಿ ಘಟಕ ಹಾಗೂ 7 ಕಲಾವಿದರಿಗೆ ಡೆನ್ನಾನ ಡೆನ್ನನ ಶ್ರೇಷ್ಠ ಕಲಾವಿದ ಪುರಸ್ಕಾರ ನೀಡಲಾಯಿತು.
ರಾಮಚಂದ್ರ ರಾವ್, ಸುಧಾಕರ್ ಕುಲಾಲ್, ಸುರೇಶ್ ಕಾರಂತ್ ಪೆರ್ಮಂಕಿ ಇವರು ತೀರ್ಪುಗಾರರಾಗಿ ಸಹಕಾರ ನೀಡಿದರು.
ಬoದುಗಳೆ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಈ ತರಹದ ಕಾರ್ಯಕ್ರಮ ನಮ್ಮ ಕೊಪ್ಪ ದಲ್ಲಿ ಮಾಡುವುದಕ್ಕೆ ಎನು ಮಾಡಬೇಕು ತಿಳಿಸಿ