ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ಯುವಪೀಳಿಗೆ ಅನುಸರಿಸುವಂತೆ ಮಾಡುವ ಯುವವಾಹಿನಿಯ ಕಾರ್ಯ ಶ್ಲಾಘನೀಯ, ವಿದ್ಯೆಗೆ ಭದ್ರ ಬುನಾದಿ ಹಾಕುವ ಮೂಲಕ ಉದ್ಯೋಗ , ವ್ಯಕ್ತಿತ್ವ ವಿಕಸನ, ಕ್ರೀಡೆ, ಆರೋಗ್ಯ, ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಮೂಲಕ ಯುವವಾಹಿನಿಯ ಎಲ್ಲಾ ಘಟಕಗಳು ಸಮಾಜದಲ್ಲಿ ವಿಶಿಷ್ಠ ಸಂಚಲನ ಮೂಡಿಸಿದೆ ಎಂದು ಕಾಪು ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆ ತಿಳಿಸಿದರು.
ಅವರು ದಿನಾಂಕ 11.02.2018 ನೇ ಆದಿತ್ಯವಾರ ಕಾಪು ಬಿಲ್ಲವ ಸಂಘದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿಯ 29 ಘಟಕ ಯುವವಾಹಿನಿ (ರಿ) ಕಾಪು ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದೀಪಕ್ ಕುಮಾರ್ ಎರ್ಮಾಳ್ ನೇತ್ರತ್ವದಲ್ಲಿ 20 ಸದಸ್ಯರ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವೈಭವ ಹಾಗೂ ವೈಫಲ್ಯದಿಂದ ಕೂಡಿದ ಬಿಲ್ಲವ ಸಮಾಜದಲ್ಲಿ ಯುವವಾಹಿನಿಯು ಭರವಸೆಯ ಬೆಳಕಿನ ಆಶಾಕಿರಣವಾಗಿ ಮೂಡಿದೆ, ಎಂದು ಪ್ರಧಾನ ಭಾಷಣ ಮಾಡಿದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ.ಸುವರ್ಣ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಬಿಡುಗಡೆ ಮಾಡಿದರು, ಕಾಪು ಬಿಲ್ಲವ ಸಹಾಯಕ ಸಂಘದ ಅಧ್ಯಕ್ಷರಾದ ಮಾಧವ ಪಾಲನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸನ್ಮಾನ :
ಚಲನಚಿತ್ರ ನಟ ನಟಿಯರಾದ ಪ್ರಥ್ವೀ ಅಂಬಾರ್, ಸ್ವಾತಿ ಬಂಗೇರ, ಚಿರಶ್ರೀ ಅಂಚನ್, ಕರಾಟೆ ಪಟು ಜಿಯಾ.ಸಿ.ಪೂಜಾರಿ, ಜೇಸೀ ವಲಯ ಅಧ್ಯಕ್ಷರಾದ ರಾಕೇಶ್ ಕುಂಜೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಎಲ್ಲರ ಸಹಕಾರದಿಂದ ಉತ್ತಮ ಸಮಾಜಮುಖಿ ಕಾರ್ಯಗಳ ಮೂಲಕ ಯುವವಾಹಿನಿ ಕಾಪು ಘಟಕವನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯುವುದಾಗಿ ನೂತನ ಅಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್ ತಿಳುಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಉದ್ಯಾವರ ಪ್ರಸ್ತಾವನೆ ಮಾಡಿದರು, ಸುಧಾಕರ್ ಸಾಲ್ಯಾನ್ ಸ್ವಾಗತಿಸಿದರು, ಜತೆಕಾರ್ಯದರ್ಶಿ ಸಂದೀಪ್ ಕುಮಾರ್ ಧನ್ಯವಾದ ನೀಡಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Nice programme.. All the Deepak Kumar Yermal sir and your team..
Nice programme.. All the best Deepak Kumar Yermal sir and your team..
Nice programme.. All the best Deepak Kumar Yermal sir and your team..