ಕಾಪು : ಉಡುಪಿ ಜಿಲ್ಲೆ ಸ್ವಚ್ಚತೆಯಲ್ಲಿ ಪ್ರಥಮ, ಹಾಗೂ ಕಾಪು ಪುರಸಭೆ ದ್ವಿತೀಯ ಸ್ಥಾನವನ್ನು ಗಳಿಸಿದ್ದು ನಮ್ಮ ಜಿಲ್ಲೆಯ ಜನ ಸ್ವಚ್ಚತೆಯಲ್ಲಿ ಬದ್ಧತೆ ಹೊಂದಿದವರಾಗಿದ್ದಾರೆ. ಯುವಕರು ಈ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ನಡೆಸುವುದಯ ಶ್ಲಾಘನೀಯ ಎಂದು ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.
ಅವರು ದಿನಾಂಕ 18.02.2018 ನೇ ಆದಿತ್ಯವಾರ ಯುವವಾಹಿನಿ (ರಿ) ಕಾಪು ಘಟಕದ ಆಶ್ರಯದಲ್ಲಿ ಕರಾವಳಿ ಪ್ರೇಂಡ್ಸ್ ಎರ್ಮಾಳ್, ಎಸ್ ಎನ್ ಜಿ ಸ್ಪೋರ್ಟ್ಸ್ ಕ್ಲಬ್ ಎರ್ಮಾಳ್, ಸ್ವರ್ಣ ಸೌಹಾರ್ದ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಉಚ್ಚಿಲ ಹಾಗೂ ಶ್ರೀನಿವಾಸ ದಂತ ವೈದ್ಯಕೀಯ ಆಸ್ಪತ್ರೆ ಮುಕ್ಕ ಇವುಗಳ ಸಂಯುಕ್ತ ಸಹಯೋಗದೊಂದಿಗೆ ತೆಂಕ ಗ್ರಾಮದ ಕಿನಾರ ಆಂಗ್ಲ ಮಾಧ್ಯಯ ಶಾಲೆಯಲ್ಲಿ ಜರುಗಿದ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ (ರಿ) ಕಾಪು ಘಟಕದ ವತಿಯಿಂದ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಎರಡು ಸೀಲಿಂಗ್ ಫ್ಯಾನ್ ಹಾಗೂ ನೋಟ್ ಬುಕ್ ವಿತರಿಸಲಾಯಿತು.ಶ್ರೀನಿವಾಸ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ವಿದ್ಯಾ, ಡಾ.ಕೃಪಾಲ್, ಡಾ.ಸಿದ್ದಾರ್ಥ ಎರ್ಮಾಳ್, ತೆಂಕ ಮೊಗವೀರ ಸಭಾದ ಅಧ್ಯಕ್ಷರಾದ ವೈ ದಾಮೋದರ ಸುವರ್ಣ, ಸ್ವರ್ಣ ಸೌಹಾರ್ದ ಕ್ರೆಡಿಟ್ ಅದ್ಯಕ್ಷ ಶೇಖರ ಕರ್ಕೇರಾ , ಎರ್ಮಾಳ್ ಬಿಲ್ಲವ ಸಂಘದ ಅಧ್ಯಕ್ಷರಾದ ಮಾಧವ ಎರ್ಮಾಳ್, ನಡಿಯಾಲ್ ದೂಮಾವತಿ ದೈವಸ್ಥಾನದ ಅಧ್ಯಕ್ಷರಾದ ರತ್ನಾಕರ್ ಕೋಟ್ಯಾನ್, ಕರಾವಳಿ ಫ್ರೇಂಡ್ಸ್ ಅಧ್ಯಕ್ಷರಾದ ಕಿಶೋರ್ ಎರ್ಮಾಳ್, ಎಸ್ ಎನ್ ಜಿ ಸ್ಪೋರ್ಟ್ಸ್ ಅಧ್ಯಕ್ಷರಾದ ಪ್ರಶಾಂತ್ ವೈ ಉಪಸ್ಥಿತರಿದ್ದರು.ಶಾಸಕ ವಿನಯ ಕುಮಾರ್ ಸೊರಕೆ ಇವರ ಅಳಿಯ ಡಾ.ಸಿದ್ದಾರ್ಥ್ ಎರ್ಮಾಳ್ ಇವರನ್ನು ಸನ್ಮಾನಿಸಲಾಯಿತುಯುವವಾಹಿನಿ (ರಿ) ಕಾಪು ಘಟಕದ ಅಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್ ಸ್ವಾಗತಿಸಿದರು.ಸುಧಾಕರ್ ಕೆ. ಧನ್ಯವಾದ ನೀಡಿದರು