
22-10-2026, 12:30 PM
ಮಂಗಳೂರು, ಅ. 21: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆದ ಮಂಗಳೂರು ದಸರಾ ಮಹೋತ್ಸವದ ಅನ್ನದಾನ ಸೇವೆಗಾಗಿ ಯುವವಾಹಿನಿ ಸಂಸ್ಥೆಯ ವತಿಯಿಂದ ₹5,00,000 (ಐದು ಲಕ್ಷ ರೂಪಾಯಿ) ದೇಣಿಗೆಯನ್ನು ಸಮರ್ಪಿಸಲಾಯಿತು. ಯುವವಾಹಿನಿ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅನ್ನದಾನ ಸೇವೆಗಾಗಿ ಇಷ್ಟೊಂದು ಬೃಹತ್ ಮೊತ್ತದ ದೇಣಿಗೆಯನ್ನು ಸಂಗ್ರಹಿಸಿ ಸಮರ್ಪಿಸಿರುವುದು ವಿಶೇಷವಾಗಿದೆ. ಸಂಸ್ಥೆಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು-ಕುಳಾಯಿ, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರಿ, ಕಟಪಾಡಿ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಉಡುಪಿ, ಮುಲ್ಕಿ, […]
Read More

19-10-2026, 9:00 PM
ಮಂಗಳೂರು, ಅ. 19: ಮಂಗಳೂರು ದಸರಾ ಮಹೋತ್ಸವ–2026ರ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಒಂದು ದಿನದ ಸ್ವಯಂಸೇವಾ ಕಾರ್ಯವನ್ನು ನಡೆಸಲಾಯಿತು. ಕಾರ್ಯಕ್ರಮದ ಸಂಚಾಲಕಿ ಶಶಿಪ್ರಭಾ ಮಿತ್ತೂರು ಅವರ ಸಂಪೂರ್ಣ ಸಹಕಾರದೊಂದಿಗೆ ಘಟಕದ ಸದಸ್ಯರು ಸ್ವಯಂಸೇವೆ ಹಾಗೂ ಅನ್ನದಾನ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಗೆ ಘಟಕದ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ₹15,000 ಮೊತ್ತದ ದೇಣಿಗೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ […]
Read More

18-10-2026, 9:00 PM
ಬಜಪೆ, ಅ. 18: ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ‘ಅಮ್ಮನೆಡೆಗೆ ನಮ್ಮ ನಡೆ’ ಎಂಬ ಧ್ಯೇಯದೊಂದಿಗೆ ಭಾನುವಾರ ಬಜಪೆಯ ಶಕ್ತಿ ಕೇಂದ್ರ ಮಂಟಪದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು. ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯಂದು ಶಾಂತಿ ಹಾಗೂ ಆತ್ಮವಿಶ್ವಾಸವನ್ನು ಕರುಣಿಸುವ ಮಹಾಗೌರಿ ದೇವಿಯನ್ನು ಆರಾಧಿಸುವ ಶುಭ ಸಂದರ್ಭದಲ್ಲಿ, ಘಟಕದ ಸದಸ್ಯರು ಅಕ್ಟೋಬರ್ 18ರಂದು ಬೆಳಗಿನ ಜಾವ 4.30ಕ್ಕೆ ಬಜಪೆಯ ಶಕ್ತಿ ಕೇಂದ್ರ ಮಂಟಪದಿಂದ ಭಕ್ತಿಭಾವದಿಂದ ಪಾದಯಾತ್ರೆ ಆರಂಭಿಸಿದರು. ಬೆಳಿಗ್ಗೆ […]
Read More

18-10-2026, 9:00 PM
ವಿಟ್ಲ, ಅ. 18: ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ಭಾನುವಾರ ಅಳಕೆಮಜಲಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಭಜನಾ ಸಂಕೀರ್ತನೆ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆ 10.15ರಿಂದ 11.45ರವರೆಗೆ ನಡೆದ ಭಜನಾ ಸೇವೆಯಲ್ಲಿ ಯುವವಾಹಿನಿ ಬಂಧುಗಳು ಭಕ್ತಿಪೂರ್ವಕವಾಗಿ ಶ್ರೀ ಶಾರದಾ ಮಾತೆಯ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡಿದರು. “ಭಜನೆಗೆ ವಿಭಜನೆಯಿಲ್ಲ” ಎಂಬ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶದೊಂದಿಗೆ ನಡೆದ ಈ ಸಂಕೀರ್ತನೆಯು ಭಕ್ತಿಯ ಮೂಲಕ ಎಲ್ಲರೂ ಒಂದಾಗುವ ಸುಂದರ ವಾತಾವರಣವನ್ನು ನಿರ್ಮಿಸಿತು. ಭಜನಾ ಸೇವೆಯಲ್ಲಿ ಪಾಲ್ಗೊಂಡ […]
Read More

18-10-2026, 9:00 PM
ಕೊಲ್ಯ, ಅ. 18: ಶಕ್ತಿ ಸ್ವರೂಪಿಣಿ ದೇವಿಯ ಆರಾಧನೆಯ ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಭಾನುವಾರ ಕೊಲ್ಯ ಸುತ್ತಮುತ್ತಲಿನ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನವರಾತ್ರಿ ಪೂಜೆ ಮತ್ತು ಅನ್ನದಾನ ಸೇವೆ ಸಲ್ಲಿಸಲಾಯಿತು. ಮೊದಲಿಗೆ ಕೊಲ ಮುನಿಗಳ ತಪಸ್ಸಿನಿಂದ ಪುಣ್ಯಪ್ರಸಿದ್ಧಿ ಪಡೆದ ಹಾಗೂ ಶ್ರೀ ರಮಾನಂದ ಸ್ವಾಮೀಜಿಯವರ ಆರಾಧನೆಗೆ ಪಾತ್ರವಾದ ಮೂಕಾಂಬಿಕೆ ದೇವಿಯ ಸನ್ನಿಧಿಯಿರುವ ಶ್ರೀ ಕ್ಷೇತ್ರ ಕೊಲ್ಯಕ್ಕೆ ಭೇಟಿ ನೀಡಿ ಪೂಜೆ ಹಾಗೂ ಅನ್ನದಾನ ಸೇವೆ ಸಲ್ಲಿಸಲಾಯಿತು. ಬಳಿಕ ದೇವರ […]
Read More

18-10-2026, 9:00 PM
ಕಡಬ, ಅ. 18: ಪಾಲ್ತಿಮಾರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದಿಂದ ಭಾನುವಾರ ರಾತ್ರಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು. ರಾತ್ರಿ 7.30ರಿಂದ 9 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಸುಮಧುರ ಭಜನೆಗಳನ್ನು ಹಾಡುವ ಮೂಲಕ ಶ್ರೀ ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು. ಭಜನಾ ಸಂಕೀರ್ತನೆಯು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿ ನವರಾತ್ರಿ ಉತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು. ಈ ಸಂದರ್ಭದಲ್ಲಿ […]
Read More

17-10-2026, 9:00 PM
ಬಜಪೆ, ಅ. 17: ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಕರಂಬಾರು ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನೆರವೇರಿತು. ನವರಾತ್ರಿಯ ಏಳನೇ ದಿನವಾದ ಶನಿವಾರ, ಅಕ್ಟೋಬರ್ 17ರಂದು ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಯಲ್ಲಿ ಭಕ್ತಿಗೀತೆ ಹಾಗೂ ದೇವರ ನಾಮಸ್ಮರಣೆಯ ಮೂಲಕ ಭಕ್ತಿಮಯ ವಾತಾವರಣವನ್ನು ನಿರ್ಮಿಸಿದರು. ನವರಾತ್ರಿಯ ಏಳನೇ ದಿನದಂದು ದುರ್ಗಾದೇವಿಯನ್ನು ಕಾಳರಾತ್ರಿ ರೂಪದಲ್ಲಿ ಆರಾಧಿಸುವುದು ವಿಶೇಷ. ಅಜ್ಞಾನ […]
Read More

17-10-2026, 9:00 PM
ಮೂಲ್ಕಿ, ಅ. 17: ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರು ಹಾಗೂ ಅವರ ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ ಬೆಸೆಯುವ ಮತ್ತು ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮನೆ ಮನೆ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಘಟಕದ ಕಾರ್ಯದರ್ಶಿ ಶ್ರೀಮತಿ ವೇದಾ ಜಯ ಕುಬೇರ್ ಅವರ ಮನೆಯಲ್ಲಿ ಅಕ್ಟೋಬರ್ 17ರಂದು ನಡೆದ ಈ ಕಾರ್ಯಕ್ರಮದಲ್ಲಿ ಗುರು ಸಂದೇಶವನ್ನು ಸಾರುವ ಭಜನೆಗಳನ್ನು ಭಕ್ತಿಭಾವದಿಂದ ಹಾಡಲಾಯಿತು. ಭಜನಾ ಸಂಕೀರ್ತನೆಯ ಮೂಲಕ ಗುರುಗಳ ತತ್ವಾದರ್ಶಗಳನ್ನು ಸ್ಮರಿಸುವುದರೊಂದಿಗೆ ಸದಸ್ಯರು ಹಾಗೂ ಅವರ […]
Read More

17-10-2026, 9:00 AM
ಮಾಣಿ, ಅ. 17: ತುಳುನಾಡಿನ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅಕ್ಟೋಬರ್ 17ರಂದು ಬಿಲ್ಲವ ಕಿರೋಡಿಯನ್ಸ್ ಕುಟುಂಬದ ಚಾವಡಿಯಲ್ಲಿ ‘ಪುದ್ದಾರ್ದ ಪೊರ್ಲು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಮಾತುಗಾರರಾಗಿ ಭಾಗವಹಿಸಿದ ಲೋಕನಾಥ್ ತಿಮರಾಜೆ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಭತ್ತ ಮತ್ತು ಅನ್ನಕ್ಕೆ ನೀಡಲಾಗುತ್ತಿದ್ದ ಮಹತ್ವವನ್ನು ವಿವರಿಸಿದರು. ಭತ್ತವನ್ನು ದೈವಸ್ವರೂಪವಾಗಿ ಕಂಡು, ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವ […]
Read More

16-10-2026, 9:30 PM
ಮಂಗಳೂರು, ಅ. 16: ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮಾತೆಯ ಸನ್ನಿಧಿಯಲ್ಲಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು. ಅಕ್ಟೋಬರ್ 16ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಘಟಕದ ಸದಸ್ಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶಾರದಾ ಮಾತೆಯ ನಾಮಸ್ಮರಣೆ ಹಾಗೂ ಸುಮಧುರ ಭಜನೆಗಳನ್ನು ಹಾಡಿದರು. ಸದಸ್ಯರ ಭಕ್ತಿಪೂರ್ಣ ಗಾಯನವು ಭಕ್ತರ ಮನಸೂರೆಗೊಂಡಿತು. ಭಜನಾ ಸಂಕೀರ್ತನೆಯಿಂದ ಕ್ಷೇತ್ರದ ಪರಿಸರದಲ್ಲಿ ಭಕ್ತಿಮಯ ವಾತಾವರಣ […]
Read More