ಮೂಲ್ಕಿ, ಅ. 17: ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರು ಹಾಗೂ ಅವರ ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ ಬೆಸೆಯುವ ಮತ್ತು ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮನೆ ಮನೆ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಘಟಕದ ಕಾರ್ಯದರ್ಶಿ ಶ್ರೀಮತಿ ವೇದಾ ಜಯ ಕುಬೇರ್ ಅವರ ಮನೆಯಲ್ಲಿ ಅಕ್ಟೋಬರ್ 17ರಂದು ನಡೆದ ಈ ಕಾರ್ಯಕ್ರಮದಲ್ಲಿ ಗುರು ಸಂದೇಶವನ್ನು ಸಾರುವ ಭಜನೆಗಳನ್ನು ಭಕ್ತಿಭಾವದಿಂದ ಹಾಡಲಾಯಿತು.
ಭಜನಾ ಸಂಕೀರ್ತನೆಯ ಮೂಲಕ ಗುರುಗಳ ತತ್ವಾದರ್ಶಗಳನ್ನು ಸ್ಮರಿಸುವುದರೊಂದಿಗೆ ಸದಸ್ಯರು ಹಾಗೂ ಅವರ ಕುಟುಂಬದವರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು. ಇಂತಹ ಕಾರ್ಯಕ್ರಮಗಳು ಸಂಘಟನೆಯ ಸದಸ್ಯರ ನಡುವಿನ ಆತ್ಮೀಯತೆಯನ್ನು ಹೆಚ್ಚಿಸುವುದರ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಹಕಾರಿಯಾಗಿವೆ.







