ಮಂಗಳೂರು, ಅ. 16: ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮಾತೆಯ ಸನ್ನಿಧಿಯಲ್ಲಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು.

ಅಕ್ಟೋಬರ್ 16ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಘಟಕದ ಸದಸ್ಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶಾರದಾ ಮಾತೆಯ ನಾಮಸ್ಮರಣೆ ಹಾಗೂ ಸುಮಧುರ ಭಜನೆಗಳನ್ನು ಹಾಡಿದರು.
ಸದಸ್ಯರ ಭಕ್ತಿಪೂರ್ಣ ಗಾಯನವು ಭಕ್ತರ ಮನಸೂರೆಗೊಂಡಿತು. ಭಜನಾ ಸಂಕೀರ್ತನೆಯಿಂದ ಕ್ಷೇತ್ರದ ಪರಿಸರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು. ನವರಾತ್ರಿ ಮಹೋತ್ಸವದ ಧಾರ್ಮಿಕ ಸಂಭ್ರಮಕ್ಕೆ ಮೆರುಗು ನೀಡಿದ ಈ ಸೇವೆಯಲ್ಲಿ ಘಟಕದ ಸದಸ್ಯರು ಭಕ್ತಿಯಿಂದ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.







