ಬಜಪೆ, ಅ. 18: ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ‘ಅಮ್ಮನೆಡೆಗೆ ನಮ್ಮ ನಡೆ’ ಎಂಬ ಧ್ಯೇಯದೊಂದಿಗೆ ಭಾನುವಾರ ಬಜಪೆಯ ಶಕ್ತಿ ಕೇಂದ್ರ ಮಂಟಪದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು.

ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯಂದು ಶಾಂತಿ ಹಾಗೂ ಆತ್ಮವಿಶ್ವಾಸವನ್ನು ಕರುಣಿಸುವ ಮಹಾಗೌರಿ ದೇವಿಯನ್ನು ಆರಾಧಿಸುವ ಶುಭ ಸಂದರ್ಭದಲ್ಲಿ, ಘಟಕದ ಸದಸ್ಯರು ಅಕ್ಟೋಬರ್ 18ರಂದು ಬೆಳಗಿನ ಜಾವ 4.30ಕ್ಕೆ ಬಜಪೆಯ ಶಕ್ತಿ ಕೇಂದ್ರ ಮಂಟಪದಿಂದ ಭಕ್ತಿಭಾವದಿಂದ ಪಾದಯಾತ್ರೆ ಆರಂಭಿಸಿದರು.
ಬೆಳಿಗ್ಗೆ 6 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತಲುಪಿದ ಸದಸ್ಯರು ಶ್ರೀ ದೇವಿಯ ಪೂಜೆ ಹಾಗೂ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು. ಭಕ್ತಿಯೊಂದಿಗೆ ಹೆಜ್ಜೆ ಹಾಕಿದ ಈ ಪಾದಯಾತ್ರೆಯು ಸದಸ್ಯರಲ್ಲಿ ಆಧ್ಯಾತ್ಮಿಕ ಭಾವನೆ, ಒಗ್ಗಟ್ಟು ಹಾಗೂ ಧಾರ್ಮಿಕ ಶ್ರದ್ಧೆಯನ್ನು ಮತ್ತಷ್ಟು ಬಲಪಡಿಸಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







