12-05-2026, 1:00 PM
ಮೂಡಬಿದಿರೆ : ಯುವವಾಹಿನಿ (ರಿ.) ಮೂಡಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ (BVT) ಮಣಿಪಾಲ ಹಾಗೂ ನೋಮಿ ಯೋಜನೆ ಪ್ರಾಯೋಜಕತ್ವದಲ್ಲಿ, ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವರ ಸಹಕಾರದೊಂದಿಗೆ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ 15 ದಿನಗಳ ‘ಉಚಿತ ಫ್ಯಾಷನ್ ಡಿಸೈನ್ ತರಬೇತಿ’ ಕಾರ್ಯಕ್ರಮವು ದಿನಾಂಕ 12.05.2026 ರ ಮಂಗಳವಾರದಂದು ಇಲ್ಲಿನ ಸಮಾಜ ಮಂದಿರದಲ್ಲಿ ದೀಪ ಪ್ರಜ್ವಲನೆಗಳೊಂದಿಗೆ ಸಡಗರದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಮೂಡಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಅವರು, “ಇಂದಿನ ದಿನಗಳಲ್ಲಿ ಮಹಿಳೆಯರು […]
Read More
11-05-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 11-05-2026 ರಂದು ಸಂಜೆ 5.30 ಗಂಟೆಗೆ ಶ್ರೀ ತ್ರಯಂಬಕ ಭಜನಾ ಮಂಡಳಿ ಸುರತ್ಕಲ್ ಇವರ ಸಹಯೋಗದೊಂದಿಗೆ ನಡೆಯಿತು. ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More
10-05-2026, 7:00 PM
ಕುಪ್ಪೆಪದವು : “ನಾರಾಯಣ ಗುರುಗಳ ತತ್ವದಂತೆ ‘ವಿದ್ಯೆ–ಉದ್ಯೋಗ–ಸಂಪರ್ಕ’ ಎಂಬ ಧ್ಯೇಯೋದ್ದೇಶದೊಂದಿಗೆ ರಾಜ್ಯವ್ಯಾಪಿ ಬೆಳೆಯುತ್ತಿರುವ ಯುವವಾಹಿನಿ ಸಂಸ್ಥೆಯು, ಯುವಶಕ್ತಿಯನ್ನು ಸಮಾಜಸೇವೆಯತ್ತ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಚಾರ,” ಎಂದು ಶಾಸಕರಾದ ವೈ ಭರತ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ವಿದ್ಯಾನಿಧಿ ಸಹಾಯಾರ್ಥವಾಗಿ ಕಿಲೆಂಜಾರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಘಟಕವು ಯುವಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು. ಪಂದ್ಯಕೂಟವನ್ನು ಕಿಲೆಂಜಾರು ಅರಮನೆ […]
Read More
10-05-2026, 2:00 PM
ಸುರತ್ಕಲ್ : ದಿನಾಂಕ 10-05-2026 ರಂದು ಇಡ್ಯಾ ಕ್ಷೇತ್ರದಲ್ಲಿ ನಡೆದ ಶ್ರೀ ವಿಠೋಭ ರುಕುಮಾಯಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪುನಃಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ರೂ.15,000 ಮೊತ್ತದ ಚೆಕ್ ಅನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಮತ್ತು ಕ್ಷೇತ್ರದ ಶಾಂತಿಯವರು ಘಟಕದ ಅಧ್ಯಕ್ಷರನ್ನು ಸ್ಮರಣಿಕೆ ಹಾಗೂ ಶಾಲು […]
Read More
09-05-2026, 9:00 PM
ಹೆಜಮಾಡಿ: ಯುವವಾಹಿನಿ (ರಿ.) ಹೆಜಮಾಡಿ ಘಟಕ ಹಾಗೂ ಹೆಜಮಾಡಿ ಬಿಲ್ಲವರ ಸಂಘದ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶನಿಪೂಜೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಹಾಗೂ ಕೋಶಾಧಿಕಾರಿಯಾದ ಸತೀಶ್ ಕಿಲ್ಪಾಡಿ ಅವರು ಭಾಗವಹಿಸಿ ಶುಭ ಹಾರೈಸಿದರು. ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು. ಸಾರ್ವಜನಿಕ ಶನಿಪೂಜೆಯಲ್ಲಿ […]
Read More
09-05-2026, 8:00 PM
ಹೆಜಮಾಡಿ : ಯುವವಾಹಿನಿ(ರಿ.) ಹೆಜಮಾಡಿ ಘಟಕದ ಆಶ್ರಯದಲ್ಲಿ ಹರೀಶ್ ಶಾಂತಿ ಹೆಜಮಾಡಿ ಇವರ ಪೌರೋಹಿತ್ಯದಲ್ಲಿ 28 ನೇ ವರ್ಷದ ಸಾರ್ವಜನಿಕ ಶನಿಪೂಜೆ ಮತ್ತು ಭಾಸ್ಕರ್. ಕೆ. ಪಡುಬಿದ್ರಿ ಇವರ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಹೆಜಮಾಡಿ ನಾರಾಯಣಗುರು ಮಂದಿರದಲ್ಲಿ ದಿನಾಂಕ:09-05-2026 ರಂದು ಆದಿತ್ಯವಾರ ಜರಗಿತು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮತ್ತು ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು.
Read More
08-05-2026, 1:00 PM
ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ಬಿಲ್ಲವ ಸಂಘ (ರಿ) ಕುಂಡಡ್ಕ ಸಹಕಾರದೊಂದಿಗೆದಿನಾಂಕ 08/05/2026 ರಂದು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ರಾಜ್ಯಕ್ಕೆ ಎಸ್ ಎಸ್ ಎಲ್ ಸಿ ಯಲ್ಲಿ 7ನೇ ರಾಂಕ್ ಬಂದ ವಿದ್ಯಾರ್ಥಿಗೆ ಸನ್ಮಾನಿಸಲಾಯಿತು
Read More
07-05-2026, 9:00 PM
ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 04-05-2026 ರಿಂದ 07-05-2026 ರವರೆಗೆ ಆಯೋಜಿಸಲಾದ “ಶಿವಗಿರಿ ಕ್ಷೇತ್ರ ದರ್ಶನ ಯಾತ್ರೆ” ಭಕ್ತಿಭಾವದಿಂದ ಯಶಸ್ವಿಯಾಗಿ ನಡೆಯಿತು. ಈ ಯಾತ್ರೆಯಲ್ಲಿ ಒಟ್ಟು 35 ಮಂದಿ ಸದಸ್ಯರು ಭಾಗವಹಿಸಿದ್ದರು. ದಿನಾಂಕ 04-05-2026 ರಂದು ಸಂಜೆ 5:40ಕ್ಕೆ ಮಂಗಳೂರು ರೈಲ್ವೆ ನಿಲ್ದಾಣದಿಂದ ಭಕ್ತಾದಿಗಳು ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಕಾರ್ಯದರ್ಶಿ ಸೋನಿಯಾ ರಾಜ್, ಉಪಾಧ್ಯಕ್ಷೆ ದೀಪಿಕಾ ಮನೋಜ್ ಹಾಗೂ ಕೋಶಾಧಿಕಾರಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಕೇಂದ್ರ […]
Read More
05-05-2026, 6:00 PM
ಸಸಿಹಿತ್ಲು : ಯುವವಾಹಿನಿ (ರಿ.) ಸಸಿಹಿತ್ಲು ಘಟಕದ ಸದಸ್ಯರ ವಾರ್ಷಿಕ ಕುಟುಂಬ ಸ್ನೇಹ ಮಿಲನ ಕಾರ್ಯಕ್ರಮ “ಸಂಭ್ರಮ – 2026” ದಿನಾಂಕ 05-04-2026 ರಂದು ಸಸಿಹಿತ್ಲುವಿನ ಪಂಚಪುಷ್ಪ ನಿವಾಸದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ನಾಲ್ಕು ಕರೆಯ ಹಿರಿಯ ಗುರಿಕಾರರಾದ ದಯಾನಂದ್ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ಸಸಿಹಿತ್ಲು ಘಟಕವು ಹಮ್ಮಿಕೊಳ್ಳುತ್ತಿರುವ ವಿನೂತನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ […]
Read More
04-05-2026, 9:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 04-05-2026 ರಂದು ಸಂಜೆ 5.30 ಗಂಟೆಗೆ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಕುತ್ತಾರು ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಿತು. ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
Read More