04-01-2026, 11:24 AM
ಮಂಗಳೂರು: ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ, ದಿನಾಂಕ 04-01-2026 ರ ಆದಿತ್ಯವಾರದಂದು ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ವತಿಯಿಂದ ಕ್ಷೇತ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬೆಳಿಗ್ಗೆ 10 ಗಂಟೆಗೆ ಕರಂಬಾರು ಮಾರಿಯಮ್ಮ ಕೋಟೆ ಬಬ್ಬುಸ್ವಾಮಿ ಪರಿವಾರ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಯುವವಾಹಿನಿ ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳು ಸೇರಿ ಒಟ್ಟು 72 ಮಂದಿ ಒಂದೇ ಬಸ್ಸಿನಲ್ಲಿ ಪುಣ್ಯಕ್ಷೇತ್ರಕ್ಕೆ ತೆರಳಿದರು. ದೇವಾಲಯದ ಕೆರೆಯಲ್ಲಿ ಸ್ನಾನ ಮಾಡಿ, ಅರ್ಚಕರ […]
Read More
04-01-2026, 7:01 AM
ದೈವ ದಶಕಂ ಕನ್ನಡ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಯುವವಾಹಿನಿ ಮಹಿಳಾ ಘಟಕದ ಭಾಗವಹಿಕೆ ಮಂಗಳೂರು: ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಆಶ್ರಯದಲ್ಲಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆತಿಥ್ಯದಲ್ಲಿ, ಕ್ಷೇತ್ರದ ಸಭಾಂಗಣದಲ್ಲಿ ದಿನಾಂಕ 04-01-2026ರಂದು ಪೂಜ್ಯ ನಾರಾಯಣ ಗುರುಗಳು ರಚಿಸಿದ “ದೈವ ದಶಕಂ” ಕೃತಿಯ ಕನ್ನಡ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಸದಸ್ಯರು […]
Read More
04-01-2026, 3:32 AM
ಪಣಂಬೂರು ಕುಳಾಯಿ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ, ಕಂಕನಾಡಿಯಲ್ಲಿ ನಡೆದ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ದಿನಾಂಕ 04.01.2026 ರಂದು ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ಸದಸ್ಯರು ಸ್ವಯಂಸೇವೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು. ಉತ್ಸವದ ಅವಧಿಯಲ್ಲಿ ಶಿಸ್ತು, ಸಹಕಾರ ಮತ್ತು ಸೇವಾಭಾವನೆಯೊಂದಿಗೆ ಯುವವಾಹಿನಿ ಸದಸ್ಯರು ಕಾರ್ಯ ನಿರ್ವಹಿಸಿದರು
Read More
03-01-2026, 11:00 PM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ಎರಡು ದಿನಗಳ ಸಂಘಟನಾ ಪ್ರವಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ದಿನಾಂಕ 03.01.2026ರಂದು ಸುರತ್ಕಲ್ ಬಸ್ಸ್ಟ್ಯಾಂಡ್ನಿಂದ ಪ್ರಯಾಣ ಆರಂಭಿಸಿದ ತಂಡವು ಸೂರ್ಮನೆ ವಾಟರ್ಫಾಲ್, ಹೊರನಾಡು ದೇವಸ್ಥಾನ, ಕ್ಯಾತನಮಕ್ಕಿ ರೆಸಾರ್ಟ್ ಹಾಗೂ ಸನ್ಸೆಟ್ ಪಾಯಿಂಟ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತು. ದಿನಪೂರ್ತಿ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ ನಂತರ ತಂಡವು ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆದುಕೊಂಡಿತು. ಮರುದಿನ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ಮುಗಿಸಿ, ಹಿಂತಿರುಗುವ ಸಂದರ್ಭದಲ್ಲಿ ದಾರಿಮಧ್ಯೆ ಕಂಡುಬಂದ […]
Read More
03-01-2026, 4:09 AM
ಕಾರ್ಕಳ: ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ “ಗುರುಭೋ ನಮಃ – ಯುವಮನಸ್ಸಿಗೆ ಗುರು ಸಂದೇಶ” ಕಾರ್ಯಕ್ರಮವು ಜನವರಿ 3ರಂದು ಘಟಕದ ಪೂರ್ವಾಧ್ಯಕ್ಷರಾದ ಗಣೇಶ್ ಸಾಲ್ಯಾನ್ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮವನ್ನು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಸರಕಾರ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು […]
Read More
01-01-2026, 12:29 PM
ಬಂಟ್ವಾಳ : ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶವು ಜಾತಿ–ಮತ–ಭೇದಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸುವ ಶಾಶ್ವತ ಚಿಂತನೆಯಾಗಿದೆ. ಗುರುಗಳ ತತ್ತ್ವಗಳು, ಶಾಂತಿ, ಸೌಹಾರ್ದತೆ ಮತ್ತು ಸಮತೋಲನದ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ. ಗುರುಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸಮಾಜ ಸಮರಸತೆ ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ಈ ಚಿಂತನೆ ನಮಗೆ ನೆನಪಿಸುತ್ತದೆ ಎಂದು ಪೆರಿಯಾವು ಗುತ್ತು ಶಿವರಾಜ್ ಗಟ್ಟಿ ಹೇಳಿದರು. ಅವರು ಜನವರಿ 01ರಂದು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ರಾಮನಗರ ಮದ್ವದಲ್ಲಿ, ಯುವವಾಹಿನಿ ಬಂಟ್ವಾಳ […]
Read More
30-12-2025, 7:31 AM
ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ತಾಲೂಕು ಇವರ ಸಹಕಾರದೊಂದಿಗೆ ದಿನಾಂಕ 30-12-2025ರಂದು ಸಂಭ್ರಮ ಯುವವಾಹಿನಿ ಕುಟುಂಬದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಘಟಕದ ನಿರ್ದೇಶಕ ಸೌಮ್ಯ ಲಾಯಿಲಾ ಅವರ “ಕನಸು” ನಿವಾಸದಲ್ಲಿ ಯುವವಾಹಿನಿ ಕುಟುಂಬ ಸದಸ್ಯರ ಭಾಗವಹಿಸುವಿಕೆಯೊಂದಿಗೆ ನಡೆಯಿತು. ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಕಾರ್ಯಕ್ರಮವನ್ನು ಹಿರಿಯರಾದ ಗಿರಿಧರ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, […]
Read More
29-12-2025, 6:08 AM
ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯರು ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳ ತಂಡವು ದಿನಾಂಕ: 29- 12-2025 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಕೇರಳದ ಶಿವಗಿರಿಯಲ್ಲಿ ಡಿಸಂಬರ್ 30, 31 ರಂದು ನಡೆಯಲಿರುವ ತೀರ್ಥಾಟನೆಯಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.)ಮಂಗಳೂರು ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಪೂಜಾರಿ, ಹರೀಶ್ ವಿ. ಪಚ್ಚನಾಡಿ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.
Read More
23-12-2025, 3:55 AM
ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ 6ನೇ ವರ್ಷದ “ಯುವವಾಹಿನಿ ಪೊರ್ಲಾ ಬಾಲೆ – 2025” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 23ರಂದು ಮಂಗಳವಾರ ಸಂಜೆ 5.30ಕ್ಕೆ ಕಾರ್ಕಳದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಸೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಾಲ್ ಕುಮಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ […]
Read More
21-12-2025, 6:58 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ನಡೆದ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಯುವವಾಹಿನಿಯ 38 ನೇ ವಾರ್ಷಿಕ ಸಮಾವೇಶದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರೇಖಾಗೋಪಾಲ್, ಪ್ರಥಮ ಉಪಾಧ್ಯಕ್ಷರಾಗಿ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಸತೀಶ್ ಕಿಲ್ಪಾಡಿ ಮೂಲ್ಕಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಕೋಟ್ಯಾನ್ […]
Read More