
27-09-2026, 8:00 PM
ಮಾಣಿ ಸೆ 27: ನಾರಾಯಣ ಗುರುಗಳ ತತ್ತ್ವಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ 46ನೇ ಸಂಚಿಕೆ ಸೆಪ್ಟೆಂಬರ್ 27ರಂದು ಶಕೀಲಾ ಕೃಷ್ಣ ಮಿತ್ತಕೋಡಿ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಯುವವಾಹಿನಿಯ ಮಾಜಿ ಅಧ್ಯಕ್ಷ ರಾಜೇಶ್ ಬಲ್ಯ, “ನಾರಾಯಣ ಗುರುಗಳು ಸಮಾಜದ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಆಶಯ ಹೊಂದಿದ್ದರು. ದುಡಿಮೆಗೆ ಗೌರವ ನೀಡುತ್ತಾ, ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯವನ್ನು […]
Read More

27-09-2026, 3:00 PM
ಮಂಗಳೂರು, ಸೆ. 27 : ಯುವವಾಹಿನಿ (ರಿ.) ಸಂಸ್ಥೆಯ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಸೆಪ್ಟೆಂಬರ್ ತಿಂಗಳ ಸಂಚಿಕೆಯ 4,250 ಪ್ರತಿಗಳ ಪೋಸ್ಟಿಂಗ್ ಕಾರ್ಯವು ಯುವವಾಹಿನಿ ಶಕ್ತಿನಗರ, ಪಣಂಬೂರು–ಕುಳಾಯಿ ಹಾಗೂ ಕೊಲ್ಯ ಘಟಕಗಳ ಸದಸ್ಯರ ಸಹಕಾರದೊಂದಿಗೆ ನಡೆಯಿತು. ‘ಯುವಸಿಂಚನ’ ಪತ್ರಿಕೆಯ ಪ್ರತಿಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಸದಸ್ಯರು ಹಾಗೂ ಹಿತೈಷಿಗಳಿಗೆ ತಲುಪಿಸುವ ಉದ್ದೇಶದಿಂದ ನಡೆದ ಪೋಸ್ಟಿಂಗ್ ಕಾರ್ಯದಲ್ಲಿ ಮೂರು ಘಟಕಗಳ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು. ಪತ್ರಿಕೆಯ ಪ್ರತಿಗಳ ವಿಂಗಡಣೆ, ವಿಳಾಸ ಪರಿಶೀಲನೆ, ಪ್ಯಾಕಿಂಗ್ ಹಾಗೂ ಪೋಸ್ಟಿಂಗ್ ಸೇರಿದಂತೆ ವಿವಿಧ […]
Read More

27-09-2026, 2:00 PM
ಕೆಂಜಾರು–ಕರಂಬಾರು, ಸೆ. 27: ಪ್ರತಿಯೊಬ್ಬ ನಾಗರಿಕನೂ ತನ್ನ ಕುಟುಂಬದ ಭವಿಷ್ಯದ ಸುರಕ್ಷತೆಗಾಗಿ ವಿಮಾ ರಕ್ಷಣೆ ಹೊಂದುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳು, ಉಳಿತಾಯ ಹಾಗೂ ವಿಮಾ ಯೋಜನೆಗಳನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಯುವವಾಹಿನಿ ಸಂಸ್ಥೆಯು ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಮಂಗಳೂರು ಪ್ರಧಾನ ಅಂಚೆ ಕಚೇರಿ, ಪಾಂಡೇಶ್ವರ ವಿಭಾಗದ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ. ಸಾಲ್ಯಾನ್ ಹೇಳಿದರು. ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ವತಿಯಿಂದ […]
Read More

27-09-2026, 2:00 PM
ಮಂಗಳೂರು ಸೆ 27: ಯುವವಾಹಿನಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳು ರಾಜ್ಯ ಪ್ರಶಸ್ತಿಗೆ ಸೀಮಿತವಾಗದೆ, ರಾಷ್ಟ್ರ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಮುಂದುವರಿಯಬೇಕು ಎಂದು ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್, ಕುದ್ರೋಳಿ ಇದರ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಹೇಳಿದರು.ಅವರು ಸೆ. 27ರಂದು ಕಂಕನಾಡಿ ಗರೋಡಿ ಬಳಿಯ ಸಮೃದ್ಧಿ ಭವನದಲ್ಲಿ ನಡೆದ ಯುವವಾಹಿನಿ (ರಿ.) ಕಂಕನಾಡಿ ಘಟಕದ 2026–27ನೇ ಸಾಲಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿಯಿಂದ ಹಲವಾರು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಮತ್ತು […]
Read More

27-09-2026, 1:00 PM
ಮಂಗಳೂರು, ಸೆ. 27: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುದೇವರ 172ನೇ ಜನ್ಮದಿನಾಚರಣೆಯ ಅಂಗವಾಗಿ ದೇರಳಕಟ್ಟೆಯ ಸೇವಾಭಾವ ಚಾರಿಟೇಬಲ್ ಟ್ರಸ್ಟ್ಗೆ ದ್ವಿತೀಯ ಬಾರಿಗೆ ಭೇಟಿ ನೀಡಿ, ಆಶ್ರಮದ ಹಿರಿಯರಿಗೆ ದಿನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.ನಾರಾಯಣ ಗುರುದೇವರ ಸಮಾನತೆ, ಮಾನವೀಯತೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡ ಸೇವಾ ತತ್ವವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಗುರುಚರಣಗಳಿಗೆ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷೆ ಗೀತಾ ವಸಂತ್, ಕಾರ್ಯದರ್ಶಿ ವಂದೀಪ್, ನಾರಾಯಣಗುರು ತತ್ವ […]
Read More

27-09-2026, 1:00 PM
ಕಂಕನಾಡಿ ಸೆ 27 : ಯುವವಾಹಿನಿ (ರಿ) ಕಂಕನಾಡಿ ಘಟಕದ 26-27 ನೇ ಸಾಲಿನ ಅಧ್ಯಕ್ಷರಾಗಿ ಧನುಷ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ವನಮಾಲ ಉದಯಕುಮಾರ್ ಆಯ್ಕೆಯಾಗಿದ್ದಾರೆ
Read More

26-09-2026, 8:00 PM
ಮಾಣಿ, ಸೆ. 26: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 26ರಂದು ಸೀತಾ ಗುರುಕ್ ಕಡೇಶಿವಾಲಯ ಅವರ ಮನೆಯಲ್ಲಿ ಗುರುತತ್ತ್ವ ಸಂದೇಶ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, “ನಾರಾಯಣ ಗುರುಗಳ ತತ್ತ್ವ, ಆದರ್ಶ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಆಳವಾಗಿ ಅರಿಯಲು ಶಿವಗಿರಿ ಯಾತ್ರೆ ಒಂದು ಅಪೂರ್ವ ಅವಕಾಶ. ಶಿವಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಗುರುಗಳ ವಿಚಾರಧಾರೆ, […]
Read More

26-09-2026, 8:00 PM
ಮೂಲ್ಕಿ, ಸೆ. 26: ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಸದಸ್ಯರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುವ ಉದ್ದೇಶದಿಂದ ಮನೆಮನೆ ಭಜನಾ ಕಾರ್ಯಕ್ರಮ ಆಯೋಜಿಸಲಾಯಿತು. ಸೆ. 26ರಂದು ಸಂಜೆ 6ರಿಂದ 7ರವರೆಗೆ ಘಟಕದ ಉಪಾಧ್ಯಕ್ಷ ವರುಣ್ ಚಿತಾಪು ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಜನಾ ಸಂಕೀರ್ತನೆ ನಡೆಸಿದರು. ಬಳಿಕ ಮಹಾಪೂಜೆ ನೆರವೇರಿಸಿ, ಸದಸ್ಯರು ಹಾಗೂ ಕುಟುಂಬಸ್ಥರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು […]
Read More

26-09-2026, 11:00 AM
ಬಜಪೆ, ಸೆ. 26: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವತಿಯಿಂದ ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಇವರ ಸಹಯೋಗದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರು ಪ್ರತಿನಿಧಿಗಳಿಂದ ವಿಶೇಷವಾಗಿ ಮಹಿಳೆಯರಿಗಾಗಿ “ಪರಿಸರ ಹಾನಿ ಕುರಿತು ಜಾಗೃತಿ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ, ಬಜಪೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಂಜನ್ ಬೆಳ್ಳಿಪಾಡಿ ಮಾತನಾಡಿ, ದೈನಂದಿನ ಬದುಕಿನಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು […]
Read More

25-09-2026, 8:00 PM
ಮಾಣಿ, ಸೆ. 25: “ಸಮಾಜದಲ್ಲಿ ನೆಲೆಸಿದ್ದ ಅನಕ್ಷರತೆ, ಅಜ್ಞಾನ, ಮೌಢ್ಯ ಹಾಗೂ ಅಸಮಾನತೆಯನ್ನು ದೂರಗೊಳಿಸಿ, ಶಿಕ್ಷಣ ಮತ್ತು ಜ್ಞಾನದ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು” ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಕಾರ್ಯದರ್ಶಿ ರಾಜೇಶ್ ಬಲ್ಯ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 25ರಂದು ಧರ್ಮಣ ಪೂಜಾರಿ ಕನಪಾದೆ, ಬಿ.ಸಿ.ರೋಡು ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು […]
Read More