ಮಂಗಳೂರು, ಸೆ. 27 : ಯುವವಾಹಿನಿ (ರಿ.) ಸಂಸ್ಥೆಯ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಸೆಪ್ಟೆಂಬರ್ ತಿಂಗಳ ಸಂಚಿಕೆಯ 4,250 ಪ್ರತಿಗಳ ಪೋಸ್ಟಿಂಗ್ ಕಾರ್ಯವು ಯುವವಾಹಿನಿ ಶಕ್ತಿನಗರ, ಪಣಂಬೂರು–ಕುಳಾಯಿ ಹಾಗೂ ಕೊಲ್ಯ ಘಟಕಗಳ ಸದಸ್ಯರ ಸಹಕಾರದೊಂದಿಗೆ ನಡೆಯಿತು.

‘ಯುವಸಿಂಚನ’ ಪತ್ರಿಕೆಯ ಪ್ರತಿಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಸದಸ್ಯರು ಹಾಗೂ ಹಿತೈಷಿಗಳಿಗೆ ತಲುಪಿಸುವ ಉದ್ದೇಶದಿಂದ ನಡೆದ ಪೋಸ್ಟಿಂಗ್ ಕಾರ್ಯದಲ್ಲಿ ಮೂರು ಘಟಕಗಳ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.
ಪತ್ರಿಕೆಯ ಪ್ರತಿಗಳ ವಿಂಗಡಣೆ, ವಿಳಾಸ ಪರಿಶೀಲನೆ, ಪ್ಯಾಕಿಂಗ್ ಹಾಗೂ ಪೋಸ್ಟಿಂಗ್ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸದಸ್ಯರು ಕೈಜೋಡಿಸಿದರು. 4,250 ಪ್ರತಿಗಳ ಪೋಸ್ಟಿಂಗ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಹಾಗೂ ‘ಯುವಸಿಂಚನ’ ಸಂಪಾದಕೀಯ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.








