ಮಾಣಿ, ಸೆ. 26: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 26ರಂದು ಸೀತಾ ಗುರುಕ್ ಕಡೇಶಿವಾಲಯ ಅವರ ಮನೆಯಲ್ಲಿ ಗುರುತತ್ತ್ವ ಸಂದೇಶ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, “ನಾರಾಯಣ ಗುರುಗಳ ತತ್ತ್ವ, ಆದರ್ಶ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಆಳವಾಗಿ ಅರಿಯಲು ಶಿವಗಿರಿ ಯಾತ್ರೆ ಒಂದು ಅಪೂರ್ವ ಅವಕಾಶ. ಶಿವಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಗುರುಗಳ ವಿಚಾರಧಾರೆ, ಜೀವನ ಸಂದೇಶ ಹಾಗೂ ಸಮಾಜ ಪರಿವರ್ತನೆಯ ಆಶಯಗಳ ನಿಜರೂಪವನ್ನು ಕಣ್ಣಾರೆ ಕಾಣಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ರಾಜೇಶ್ ಕೋಟ್ಯಾನ್, ಜನಾರ್ದನ ಕೊಡಂಗೆ, ಲೋಕೇಶ್, ಬಾಲಕೃಷ್ಣ ಶೇರಾ, ಸತೀಶ್, ಸುಧಾ, ಸೀತಾ ಹಾಗೂ ವಿದ್ಯಾಧರ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಮನೆಯವರು ನಾರಾಯಣ ಗುರುಗಳ ತತ್ತ್ವ–ಸಂದೇಶವನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ನಾರಾಯಣ ಗುರು ತತ್ತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಶ್ರೀಧರ ಪೂಜಾರಿ ಮುಜಾಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.








