ಬಿಲ್ಲವ ವಧುವರರ ಅನ್ವೇಷಣೆ : 2019
21-12-2018, 1:16 AM
18-12-2018, 4:46 PM
ಬೆಳ್ತಂಗಡಿ : ಮೂಂಡೂರು ಗ್ರಾಮದ ಪರನೀರು ಯೋಗೀಶ್ ಯಾನೆ ಗೋಪಾಲ್ ಇವರು ಬಸ್ ಅಪಘಾತಕ್ಕಿಡಾಗಿ ಬಲ ಕಾಲನ್ನು ಕಳೆದುಕೊಂಡಿದ್ದು ಇವರ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಯುವವಾಹಿನಿ(ರಿ) ಬೆಳ್ತಂಗಡಿ ಘಟಕ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಅತಿಥಿಗಳು ಹಾಗೂ ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತ ಮತ್ತು ಮಾಜಿ ಶಾಸಕರಾದ ಕೆ ವಸಂತ ಬಂಗೇರರು ನೀಡಿದ 10000.00 ಮೊತ್ತವನ್ನು ಒಟ್ಟು ಸೇರಿಸಿ 50000.00 ರೂಪಾಯಿ ಸ್ವಾಂತ್ವನ ನಿಧಿಯನ್ನು ದಿನಾಂಕ 18.12.2018 ರಂದು ಮಾಜಿ ಶಾಸಕರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರು ಯುವವಾಹಿನಿ ಸಂಘಟನೆಯು […]
16-12-2018, 5:06 PM
ಕಡಬ : ಯುವವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ) ಕಡಬ ಘಟಕದ ಆತಿಥ್ಯದಲ್ಲಿ ದಿನಾಂಕ 16.12.2018 ರಂದು ನಡೆದ ಕಥೆ ನಾಟಕಕಾರ ನಟ ಕಾದಂಬರಿಗಾರ ಸಾಹಿತಿ ದಿವಂಗತ ವಿಶು ಕುಮಾರ್ ಅವರ ವಿಶುಕುಮಾರ್ ಪರಿಚಯ ಸರಣಿ ಕಾರ್ಯಕ್ರಮದ ಮಾಲಿಕೆ 11 ರ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಮಾತನಾಡಿ , ವಿಶು ಕಮಾರ್ ರವರು ಒಬ್ಬ ಉತ್ತಮ ಸಾಹಿತಿ, ಅಂಕಣಕಾರ, ಸಿನಿಮಾನಟ, ನಿರ್ಧೇಶಕ, […]
16-12-2018, 4:19 PM
ಬೆಳ್ತಂಗಡಿ : ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಅಶಕ್ತರಿಗೆ ಸಂಜೀವಿನಿಯಾಗಿ.ಇಂತಹ ಕ್ರೀಡಾಕೂಟದ ಮೂಲಕ ನೊಂದವರಿಗೆ ನೆರವನ್ನು ನೀಡುತ್ತಾ ನುಡಿದಂತೆ ನಡೆಯುತ್ತಿರುವ ಸಂಘಟನೆ ಅದು ಯುವವಾಹಿನಿ ಬೆಳ್ತಂಗಡಿ ಘಟಕ ಎಂದು ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಭಗೀರಥ ಜಿ ಹೇಳಿದರು. ಅವರು ದಿನಾಂಕ 16.12.2018 ರಂದು ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿಯ ಸಹಾಯಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ […]
16-12-2018, 2:46 PM
ಕಡಬ : ಯುವವಾಹಿನಿ (ರಿ) ಕಡಬ ಘಟಕದ ವತಿಯಿಂದ ಹಳೆನೇರಂಕಿ ಗ್ರಾಮದ ನಾರಾಯಣ ಸಾಂತ್ಯ ಇವರ ಮನೆಯಲ್ಲಿ ದಿನಾಂಕ 16.12.2018 ರಂದು ನಡೆದ “ಗುರುಸ್ಪೂರ್ತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಯೋಗೀಶ್ ಕುಮಾರ್ ಅಗತ್ತಾಡಿಯವರು, ಗ್ರಾಮ ಮಟ್ಟದಿಂದಲೆ ನಮ್ಮ ಸಮಾಜ ಬಾಂಧವರನ್ನು ನಾಯಕರಾಗಿಸುವಲ್ಲಿ ಪ್ರೋತ್ಸಾಹ ನೀಡೋಣ ಎಂದು ತಿಳಿಸಿದರು. ಮನೆಯ ಹಿರಿಯರಾದ ಬಾಳಪ್ಪ ಪೂಜಾರಿ ಸಾಂತ್ಯ ಕಾರ್ಯಕ್ರಮ ಉಧ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು – ನಾರಾಯಣ ಗುರುಗಳ […]
16-12-2018, 2:37 PM
ಬೆಂಗಳೂರು : ಯುವವಾಹಿನಿ ಕೇಂದ್ರ ಸಮಿತಿಯ ಹಾಗು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಇದರ ಆಶ್ರಯದಲ್ಲಿ ಸರಣಿ ಕಾರ್ಯಕ್ರಮವಾದ ವಿಶುಕುಮಾರ್ ಪರಿಚಯ ಕಾರ್ಯಕ್ರಮವನ್ನು ದಿನಾಂಕ 16-12-2018 ರಂದು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಾನ್ಶಿರಾಮ್ ನಗರದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ್ ಸುವರ್ಣರವರು ವಿಶುಕುಮಾರ್ ಅವರ ಸಾಹಿತ್ಯ, ಕಾದಂಬರಿ, ಸಿನಿಮಾ ಕ್ಷೇತ್ರದ ಸಾಧನೆಯನ್ನು ಘಟಕದ ಸದಸ್ಯರಿಗೆ ಪರಿಚಯಿಸಿದರು. ನ್ಯಾಯವಾದಿ ನವನೀತ್ ಹಿಂಗಾಣಿ ವಿಶುಕುಮಾರ್ ಬದುಕು ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದರು. […]
16-12-2018, 1:38 PM
ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ದಿನಾಂಕ 16-12-2018 ರಂದು ಬೆಳಿಗ್ಗೆ 9.30 ಕೆ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಾನ್ಶಿರಾಮ್ ನಗರದಲ್ಲಿ ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ, ಸಮಾಜಸೇವಾ ನಿರ್ದೇಶಕರಾಗಿರುವ ರಘು ಕೋಟ್ಯಾನ್ ಇವರ ಸಾರಥ್ಯದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು, ಶಾಲಾ ಆವರಣದ ಸುತ್ತ ಮುತ್ತವಿದ್ದ ಪ್ಲಾಸ್ಟಿಕ್ ಹಾಗು ಇನ್ನಿತರ ಒಣ ಕಸ ಮತ್ತು ಹಸಿ ಕಸಗಳನ್ನು ವಿಂಗಡಿಸಲಾಯಿತು, ಸ್ವಚ್ಚತಾ ಕಾರ್ಯಕ್ರಮಗಳ ಜೊತೆ ಶಾಲೆಯ ಪರಿಸರಕ್ಕೆ ಅನುಕೂಲಕರವಾಗುವ ಹಾಗೆ […]
16-12-2018, 1:03 PM
ವೇಣೂರು : ಯುವವಾಹಿನಿ (ರಿ) ವೇಣೂರು ಘಟಕ, ಲಯನ್ಸ್ ಕ್ಲಬ್ ವೇಣೂರು, ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುಕ್ಕೇಡಿ, ಆಯುಷ್ ಇಲಾಖೆಯ ಜಂಟಿ ಆಶ್ರಯದಲ್ಲಿ ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ದಿನಾಂಕ 16.12.2018 ರಂದು ಆದಿತ್ಯವಾರ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಆಯುಷ್ ವೈದ್ಯರಾದ ಡಾ.ಕೃಷ್ಣಪ್ರಸಾದ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ […]
15-12-2018, 1:37 PM
ಯುವವಾಹಿನಿ (ರಿ ) ಮಂಗಳೂರು ಘಟಕ ಮತ್ತು ಬಜಪೆ ಘಟಕದ ಜಂಟಿ ಅಶ್ರಯದಲ್ಲಿ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ) ಹಾಗೂ ಲಯನ್ಸ್ ಕ್ಲಬ್ ಮಂಗಳಾದೇವಿ ,ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 15/12/18 ರಂದು ಸುಂಕದಕಟ್ಟೆ ,ಅಂಬಿಕ ಅನ್ನಪೂರ್ಣೆಶ್ವರಿ ಸಭಾಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಭವಿಷ್ಯ ನಿರ್ಮಾಣ ಕಾರ್ಯಾಗಾರ ನಡೆಯಿತು . ಈ ಕಾರ್ಯಕ್ರಮವನ್ನು ಸುಂಕದಕಟ್ಟೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಪೂಜಾರಿ ಉದ್ಘಾಟಿಸಿ ,ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಜಿವನದಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಮಗೆ ತೆಗೆದುಕೊಳ್ಳಬೇಕಾದ ನಿರ್ಧಾರಕ್ಕೆ […]
13-12-2018, 3:58 PM
ಎಕ್ಕಾರು ಪೆರ್ಮುದೆ : ಮನನೊಂದ ಅಶಕ್ತ ಸಮಾಜ ಬಾಂಧವರ ಸಹಾಯಕ್ಕೆ ಸದಾ ಸಿದ್ದ ಎನ್ನುವ ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕವು ತನ್ನ ಧ್ಯೇಯ ವಾಕ್ಯದಂತೆ ಮತ್ತೊಂದು ನೊಂದ ಬಡ ಮನಸ್ಸಿಗೆ ತನ್ನ ಸಹಾಯ ಹಸ್ತವನ್ನು ನೀಡಿರುತ್ತದೆ ಮೂಡಿಗೆರೆಯ ಸುರೇಶ್ ಇವರು ಕಳೆದ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೂಲತಃ ಬಡ ಕುಟುಂಬದವರಾಗಿದ್ದು, ಅವಿವಾಹಿತರಾಗಿದ್ದು ತನ್ನ ತಂದೆಯನ್ನೂ ಕಳೆದುಕೊಂಡಿರುತ್ತಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಸಹೋದರಿ ಸುಮ ಇವರು ಕಷ್ಟ […]