ಮೂಡಿಗೆರೆ : ಯುವವಾಹಿನಿಯ 35ನೇ ನೂತನ ಘಟಕ ಯುವವಾಹಿನಿ(ರಿ) ಮೂಡಿಗೆರೆ ಘಟಕ ಉದ್ಘಾಟನೆಸಮಾರಂಭವು ದಿನಾಂಕ 14.07.2019 ರಂದು ಮೂಡಿಗೆರೆ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಯುವವಾಹಿನಿ ಸಂಸ್ಥೆಯು ಯುವಜನರ ಪ್ರೇರಕ ಶಕ್ತಿಯಾಗಿದೆ, ಮೂಡಿಗೆರೆಯಲ್ಲಿ ಯುವವಾಹಿನಿ ಘಟಕ ಸ್ಥಾಪನೆಯಾಗಿರುವುದು ಅತ್ಯಂತ ಸಂತಸ ತಂದಿದೆ ಎಂದು
ಮೂಡಿಗೆರೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೇಶದಲ್ಲಿ ಯುವಕರೇ ದೇಶದ ಜೀವನಾಡಿಯಾಗಿದ್ದು, ಯುವ ಸಮುದಾಯವನ್ನು ಸಮಾಜಮುಖಿಯನ್ನಾಗಿಸುವುದು ಬಹುದೊಡ್ಡ ಸವಾಲಾಗಿದೆ. ಯುವಜನಾಂಗಕ್ಕೆ ಉದ್ಯೋಗ, ಸಹಕಾರ ತತ್ವ ಹಾಗೂ ಸಹಬಾಳ್ವೆ ಯನ್ನು ಕಲಿಸಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವಲ್ಲಿ ಯುವವಾಹಿನಿ ಸಂಸ್ಥೆಯ ಪಾತ್ರ ಅಮೂಲ್ಯವಾದುದು ಎಂದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಯೋಗೀಶ್ ಪೂಜಾರಿ ನೇತ್ರತ್ವದ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಕೆ ಮಾಡಿದರು.
ಯುವವಾಹಿನಿ ಮೂಡಿಗೆರೆಯ ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಯೋಗೀಶ್ ಪೂಜಾರಿಯವರು ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೂಡಿಗೆರೆ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ತಿಳಿಸಿದರು.
ಮೂಡಿಗೆರೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಚಂದ್ರು ಸಾಲ್ಯಾನ್, ಚಿಕ್ಕಮಗಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಎಚ್.ಎಮ್.ಸತೀಶ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಮೂಡಿಗೆರೆ ಘಟಕದ ಸಲಹೆಗಾರರಾದ ಸಾಧು ಪೂಜಾರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ 16 ಘಟಕದ ಅಧ್ಯಕ್ಷರುಗಳನ್ನು ಹಾಗೂ ಯುವವಾಹಿನಿಯ ವಿವಿಧ ಘಟಕಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ನರೇಶ್ ಕುಮಾರ್ ಸಸಿಹಿತ್ಲು ಪ್ರಸ್ತಾವನೆ ಮಾಡಿದರು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಬಲ್ನಾಡ್ ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್.ಕೆ.ಅಂಚನ್ ಸ್ವಾಗತಿಸಿದರು. ಮೂಡಿಗೆರೆ ಘಟಕದ ನೂತನ ಕಾರ್ಯದರ್ಶಿ ಪ್ರಥ್ವೀ ಸಾಗರ್ ಪೂಜಾರಿ ಧನ್ಯವಾದ ನೀಡಿದರು, ಕೇಂದ್ರ ಸಮಿತಿಯ ಸಮಾವೇಶ ನಿರ್ದೇಶಕರಾದ ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರ್ವಹಿಸಿದರು
All the best Yuvavahini….
Wish you all the best