ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರು ವಂದನಾ ಮತ್ತು ಶ್ರೀ ಗುರು ಚಿಂತನ ಮಂಥನ ಕಾರ್ಯಕ್ರಮ ದಿನಾಂಕ 16.07.2019 ರಂದು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.
ಮೊದಲಾಗಿ ಘಟಕದ ಎಲ್ಲಾ ಸದಸ್ಯರು ಮತ್ತು ಮಹಿಳಾ ಘಟಕದ ಸದಸ್ಯರು 5.30ರಿಂದ 7.00 ಗಂಟೆಯವರೆಗೆ ಶುಶ್ರಾವ್ಯಯವಾಗಿ ಭಜನೆ ಹಾಡಿದರು. ನಂತರ ನಡೆದ ಸಾಪ್ತಾಹಿಕ ಸಭೆಯಲ್ಲಿ ರಾಮಚಂದ್ರ ಪೂಜಾರಿಯವರು ಗುರುಪೂರ್ಣಿಮೆಯ ಮಹತ್ವ, ಆಚರಣೆಗಳು ಮತ್ತು ಶಿವಗಿರಿ ತೀರ್ಥಟನೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಗುರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮದ್ಯ ವಿಷ, ಅದರ ತಯಾರಿ, ಮಾರಾಟ ಮತ್ತು ಸೇವನೆ ಶ್ರೇಯವಲ್ಲ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಯನ್ನು ರಾಜೇಶ್ ಅಮೀನ್ ರವರು ಪ್ರಸ್ತುತ ಪಡಿಸಿದರು. ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಶೇಖರ ಕರ್ಕೇರ ಮತ್ತು ನಾರಾಯಣ ಕರ್ಕೇರರವರು ಶೈಕ್ಷಣಿಕ ದತ್ತು ಸ್ವೀಕಾರ ನಿಧಿಗೆ ದೇಣಿಗೆಯನ್ನು ನೀಡಿದರು.
ಸಭೆಯಲ್ಲಿ ಹಾಜರಿದ್ದ ಶಕ್ತಿನಗರ ಘಟಕದ ಅಧ್ಯಕ್ಷರು ಭಾರತಿ ಜಿ. ಅಮೀನ್ ಮತ್ತು ಕಾರ್ಯದರ್ಶಿ ಜಯರಾಮ ಪೂಜಾರಿಯವರು ಆಟಿಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಎಲ್ಲಾ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಯುವವಾಹಿನಿಯ 35ನೇ ಘಟಕದ ಉದ್ಘಾಟನಾ ಸಮಾರಂಭದ ವರದಿಯನ್ನು ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿಯವರು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕೆ. ಆರ್. ಲಕ್ಷ್ಮೀ ನಾರಾಯಣ ರವರು ವಹಿಸಿದ್ದರು. ಗತ ಸಭೆಯ ವರದಿಯನ್ನು ಕಾರ್ಯದರ್ಶಿ ಗಣೇಶ್ ವಿ.ಕೋಡಿಕಲ್ ರವರು ಪ್ರಸ್ತುತ ಪಡಿಸಿದರು. ಪ್ರಚಾರ ನಿರ್ದೇಶಕರಾದ ತಿಲಕ್ ರಾಜ್ ರವರು ಎಲ್ಲಾರಿಗೂ ಕೃತಜ್ಙತೆ ಸಲ್ಲಿಸಿದರು. ಗುರುಪೂಜೆಯ ನಂತರ ಎಲ್ಲರೂ ಗುರುಗಳ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಎಲ್ಲರಿಗೂ ಪ್ರಸಾದ ಹಂಚಲಾಯಿತು.