ಕಾರ್ಕಳ, ಆಗಸ್ಟ್ 16: ಭಜನೆಯ ಮೂಲಕ ಯುವ ಜನತೆಯಲ್ಲಿ ಸಂಸ್ಕಾರ, ಶಿಸ್ತು ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸಲು ಸಾಧ್ಯ. ಭಜನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ, ಶಿರ್ಲಾಲು ಇವರ ಸಹಕಾರದೊಂದಿಗೆ ಶಿರ್ಲಾಲಿನಲ್ಲಿ ನಡೆದ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಬಿಲ್ಲವ ಸಂಘಗಳ ದ್ವಿತೀಯ ವರ್ಷದ ಕುಣಿತ ಭಜನಾ ಸ್ಪರ್ಧೆ “ಶಿವ ಶಿವ ಎನ್ನಿರೋ, ಕುಣಿದು ಭಜಿಸಿರೋ–2026” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ, ಪ್ರಸಾದ್ ಭಟ್, ಸುಶಾಂತ್ ಸುಧಾಕರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ್, ಬಿಲ್ಲವ ಸಂಘ ಶಿರ್ಲಾಲಿನ ಅಧ್ಯಕ್ಷ ಕೃಷ್ಣ ಪೂಜಾರಿ, ಡಾ. ಯಶೋಧರ್ ಎಂ., ತಾರನಾಥ ಪೂಜಾರಿ, ಪ್ರಭಾಕರ್ ಬಂಗೇರ, ತಾರನಾಥ್ ಕೋಟ್ಯಾನ್, ಸತೀಶ್ ಪೂಜಾರಿ ಬೋಳ ಮತ್ತಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಭಜನಾ ಸ್ಪರ್ಧೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 11 ಬಿಲ್ಲವ ಸಂಘಗಳ ಭಜನಾ ಮಂಡಳಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು.
ಮುಂಡ್ಕೂರು ಬಿಲ್ಲವ ಸಂಘಕ್ಕೆ ಪ್ರಥಮ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಜುನಾಥ ಪೂಜಾರಿ ಮುದ್ರಾಡಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಜಗದೀಶ್ ಪೂಜಾರಿ ಸೇನಾರಬೆಟ್ಟು, ಸುನಿಲ್ ಕೆ.ಆರ್., ದಿನೇಶ್ ಎಂ., ರತ್ನಾಕರ ಅಮಿನ್ ಹಾಗೂ ದಯಾನಂದ ಸಾಲ್ಯಾನ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಭಜನಾ ಸ್ಪರ್ಧೆಯಲ್ಲಿ ಮುಂಡ್ಕೂರು ಬಿಲ್ಲವ ಸಂಘ ಪ್ರಥಮ, ಕುಂಟಾಡಿ ಬಿಲ್ಲವ ಸಂಘ ದ್ವಿತೀಯ, ಬಜಗೋಳಿ ಬಿಲ್ಲವ ಸಂಘ ತೃತೀಯ, ಸಾಣೂರು ಬಿಲ್ಲವ ಸಂಘ ಚತುರ್ಥ ಹಾಗೂ ನಕ್ರೆ ಬಿಲ್ಲವ ಸಂಘ ಪಂಚಮ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಭಜನೆಯ ಮೂಲಕ ಯುವ ಸಮುದಾಯವನ್ನು ಸಂಸ್ಕಾರ, ಸಂಸ್ಕೃತಿ ಹಾಗೂ ಧಾರ್ಮಿಕ ಚಿಂತನೆಯೊಂದಿಗೆ ಬೆಸೆಯುವ ನಿಟ್ಟಿನಲ್ಲಿ ನಡೆದ ಕಾರ್ಯಕ್ರಮವು ಗಮನ ಸೆಳೆಯಿತು.


