
29-08-2026, 4:00 PM
ಶಕ್ತಿನಗರ ಅಗಸ್ಟ್ 29 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿಯ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿ ಹಾಗೂ ಯುವವಾಹಿನಿ (ರಿ.) ಶಕ್ತಿನಗರ ಘಟಕದ ಸಹಯೋಗದಲ್ಲಿ ಆಗಸ್ಟ್ 29ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನ್ಮ ಜಯಂತಿ ಮಹೋತ್ಸವ ಹಾಗೂ ಬೃಹತ್ ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗಣಹೋಮ ನೆರವೇರಿಸಿ ಮಂದಿರವನ್ನು ಶುದ್ಧೀಕರಿಸಲಾಯಿತು. ಬಳಿಕ ಗುರುಗಳ ಪಂಚಲೋಹದ ಮೂರ್ತಿಗೆ ವಿಶೇಷ […]
Read More

28-08-2026, 9:00 PM
ಮಂಗಳೂರು ಅಗಸ್ಟ್ 28 : ಭಾರತವು ಹಬ್ಬಗಳ ತವರೂರಾಗಿದ್ದು, ಇಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಅಂತಹ ವಿಶಿಷ್ಟ ಹಬ್ಬಗಳಲ್ಲಿ ಒಂದಾದ ‘ರಕ್ಷಾ ಬಂಧನ’ವನ್ನು ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ಆಗಸ್ಟ್ 28ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಕುಂಟಲ್ಪಾಡಿ ಇಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ರಕ್ಷಾ ಬಂಧನವು ಸಹೋದರ–ಸಹೋದರಿಯರ ನಡುವಿನ ಪವಿತ್ರ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯದ ಸಂಕೇತವಾಗಿದೆ. ಇದೇ ಆಶಯದೊಂದಿಗೆ […]
Read More

15-08-2026, 9:10 AM
ಮಂಗಳೂರು, ಆಗಸ್ಟ್ 15: ಯುವವಾಹಿನಿ (ರಿ.) ಶಕ್ತಿನಗರ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಕುಂಟಲ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಕುಂಟಲ್ಪಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಆರಂಭಗೊಂಡಿತು. ಬಳಿಕ ಯುವವಾಹಿನಿ (ರಿ.) ಶಕ್ತಿನಗರ ಘಟಕದ ಅಧ್ಯಕ್ಷ ತೇಜಸ್ ವಿ. ಪೂಜಾರಿ ಅವರು ಎಲ್ಲರನ್ನು ಸ್ವಾಗತಿಸಿದರು. ಘಟಕದ ಸದಸ್ಯರು ಹಾಗೂ ಉಪಸ್ಥಿತರಿದ್ದವರು ಒಗ್ಗೂಡಿ ‘ವಂದೇ […]
Read More

26-07-2026, 8:00 PM
ಶಕ್ತಿನಗರ, ಜುಲೈ 26 : ಯುವವಾಹಿನಿ (ರಿ.) ಶಕ್ತಿನಗರ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಕುಂಟಲ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಜುಲೈ 26ರಂದು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಆರಂಭಗೊಂಡಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ಮೌನ […]
Read More

28-06-2026, 2:00 PM
ಶಕ್ತಿನಗರ, ಜೂನ್ 28: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಯುವವಾಹಿನಿ (ರಿ.) ಶಕ್ತಿನಗರ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಸೇವಾ ಟ್ರಸ್ಟ್ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಮಂದಿರದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ […]
Read More

21-06-2026, 8:00 PM
ಶಕ್ತಿನಗರ ಜೂನ್ 21 : ಯುವವಾಹಿನಿ (ರಿ.) ಶಕ್ತಿನಗರ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಶಕ್ತಿನಗರ ಕುಂಟಲ್ಪಾಡಿ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಅಂತರಾಷ್ಟ್ರೀಯ 12ನೇ ವಿಶ್ವ ಯೋಗ ದಿನಾಚರಣೆಯನ್ನು ಜೂನ್ 21ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಕುಂಟಲ್ಪಾಡಿ ಇಲ್ಲಿ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನಾಚರಣೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಸಾರುವ ದಿನವಾಗಿದ್ದು, ಯೋಗದ ಮೂಲಕ ಆರೋಗ್ಯಕರ ಜೀವನ ಹಾಗೂ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ […]
Read More

18-06-2026, 9:00 PM
ಶಕ್ತಿನಗರ : ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದರೆ ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು. ಇಂತಹ ಪವಿತ್ರವಾದ ಮಾತ್ರಭೂಮಿಯ ಸೇವೆಯನ್ನು ಮಾಡಲು ಸಿದ್ಧರಾದ ಶರತ್ ಶಕ್ತಿನಗರ ಇವರಿಗೆ, ನಿನ್ನೆ ಸಂಜೆ ದಿನಾಂಕ 18/06/2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪ್ರಸಾದವನ್ನು ನೀಡಿ ನಮ್ಮ ಘಟಕದ ವತಿಯಿಂದ ಅಧ್ಯಕ್ಷರ, ಮಾಜಿ ಅಧ್ಯಕ್ಷರುಗಳ ,ಹಾಗೂ ಎಲ್ಲಾ ಸದಸ್ಯರ ಶುಭಾಶೀರ್ವದದೊಂದಿಗೆ ಗೌರವಿಸಿ ಅಭಿನಂದಿಸಲಾಯಿತು. ಅಧ್ಯಕ್ಷರಾದ ತೇಜಸ್ ವಿ […]
Read More

14-06-2026, 1:00 PM
ಶಕ್ತಿನಗರ : ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 14-06-2026ರಂದು ಶಕ್ತಿನಗರ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ವೃಕ್ಷೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಘಟಕದ ಸದಸ್ಯರು ರುದ್ರಭೂಮಿ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ವಿಶ್ವ ಪರಿಸರ ದಿನದ ಪ್ರಯುಕ್ತ ಸದಸ್ಯರೆಲ್ಲರೂ ಒಟ್ಟಾಗಿ ಹಣ್ಣುಗಳ ಸಸಿಗಳನ್ನು ನೆಟ್ಟು ವೃಕ್ಷಾರೋಪಣಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ರುದ್ರಭೂಮಿಯ ವ್ಯವಸ್ಥಾಪಕರಾದ ಪದ್ಮನಾಭ ಅಂಚನ್ ಕಕ್ಕೆಬೆಟ್ಟು ಅವರು ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಸಂಸ್ಥೆಯು […]
Read More

07-06-2026, 10:00 PM
ಶಕ್ತಿನಗರ : ವರ್ಷದಲ್ಲಿ ಕೇವಲ 28 ದಿನಗಳ ಕಾಲ ಮಾತ್ರ ದರ್ಶನಕ್ಕೆ ಅವಕಾಶವಿರುವ ಈ ಪುಣ್ಯಕ್ಷೇತ್ರಕ್ಕೆ ತೆರಳಲು ಜೂನ್ 6, 2026ರಂದು ಶನಿವಾರ ರಾತ್ರಿ 10.45 ಗಂಟೆಗೆ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ಸುಮಾರು 33 ಮಂದಿ ನಾಲ್ಯಪದವು ಶಕ್ತಿನಗರ ಶಾಲೆಯ ಬಳಿ ಸೇರಿದರು. ಪ್ರಯಾಣ ಆರಂಭಿಸುವ ಮುನ್ನ ಎಲ್ಲರೂ ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿ, ಮಹಾದೇವನ ದರ್ಶನದ ಸಂಕಲ್ಪದೊಂದಿಗೆ ಯಾತ್ರೆಯನ್ನು ಆರಂಭಿಸಿದರು. ಮರುದಿನ ಬೆಳಿಗ್ಗೆ ಸುಮಾರು 4.30 ಗಂಟೆಗೆ ಕೊಟ್ಟಿಯೂರು ತಲುಪಿದ […]
Read More

27-05-2026, 9:00 PM
ಮಂಗಳೂರು, ಮೇ 27: ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ತುಳುನಾಡಿನ ಅಪ್ರತಿಮ ಕ್ರಾಂತಿವೀರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಸಂಸ್ಮರಣಾ ಕಾರ್ಯಕ್ರಮವನ್ನು ಮೇ 27, 2026 ರಂದು ಕುಂಟಲ್ಪಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಯೋಜಿಸಲಾಯಿತು. ಬ್ರಿಟಿಷರ ದಾಸ್ಯದಿಂದ ಜನರನ್ನು ಮುಕ್ತಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಂಜ ಬೈದ್ಯರು, ತಮ್ಮ ಧೈರ್ಯಶಾಲಿ ಹೋರಾಟದ ಪರಿಣಾಮವಾಗಿ 1837 ರ ಮೇ 27 ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟು ವೀರಮರಣವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ […]
Read More