ಶಕ್ತಿನಗರ : ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದರೆ ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲಾದುದು. ಇಂತಹ ಪವಿತ್ರವಾದ ಮಾತ್ರಭೂಮಿಯ ಸೇವೆಯನ್ನು ಮಾಡಲು ಸಿದ್ಧರಾದ ಶರತ್ ಶಕ್ತಿನಗರ ಇವರಿಗೆ,

ನಿನ್ನೆ ಸಂಜೆ ದಿನಾಂಕ 18/06/2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹ ಪ್ರಸಾದವನ್ನು ನೀಡಿ ನಮ್ಮ ಘಟಕದ ವತಿಯಿಂದ ಅಧ್ಯಕ್ಷರ, ಮಾಜಿ ಅಧ್ಯಕ್ಷರುಗಳ ,ಹಾಗೂ ಎಲ್ಲಾ ಸದಸ್ಯರ ಶುಭಾಶೀರ್ವದದೊಂದಿಗೆ ಗೌರವಿಸಿ ಅಭಿನಂದಿಸಲಾಯಿತು.
ಅಧ್ಯಕ್ಷರಾದ ತೇಜಸ್ ವಿ ಪೂಜಾರಿ ಆಗಮಿಸಿದಂತಹ ಎಲ್ಲರನ್ನು ಸ್ವಾಗತಿಸಿದರು, ಕಾರ್ಯದರ್ಶಿಗಳಾದ ಪ್ರತಿಭಾ ಶಶಿರಾಜ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


