10-11-2019, 2:44 AM
ಗುತ್ತು ಮನೆಯಲ್ಲಿ ಯುವವಾಹಿನಿ ಮಾಣಿ ಘಟಕದ ತುಳಸಿ ಪರ್ಬ ಕಾರ್ಯಕ್ರಮ ‘ಗುತ್ತು’ ಎಂದರೆ ಇತಿಹಾಸ ಘನೀಭವಿಸಿದಂತೆ ಮತ್ತು ಮರುಜೀವಿಸಿದಂತೆ. ಅದು ಒಂದು ವಾಸ್ತವವೂ ಹೌದು, ಕಲ್ಪನೆಯೂ ಹೌದು. ಅದೊಂದು ಅನುಭವಜನ್ಯ ಸತ್ಯ ಮತ್ತು ಪುನಃ ಪಡೆದುಕೊಂಡ ಅನುಭವ”. ಇಂತಹ ಗುತ್ತು ಮನೆತನದಲ್ಲಿ ಒಂದು ಇಡ್ಕಿದು ಗ್ರಾಮದ ಸೂರ್ಯ ಚಂದ್ರಾವತಿ ಅಮ್ಮನವರ ಗುತ್ತು ಮನೆತನ. ನಮ್ಮ ಸಂಸ್ಕೃತಿಯನ್ನು ನೆನಪಿಸುವ, ಹಾಗೂ ಧಾರ್ಮಿಕತೆಯನ್ನು ಬಿಂಬಿಸುವ ಯುವವಾಹಿನಿ ತುಳಸಿಪರ್ಬ ಕಾರ್ಯಕ್ರಮ ಘಟಕದ ನೂತನ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ ಇವರ ಅಧ್ಯಕ್ಷತೆಯಲ್ಲಿ […]
Read More
20-10-2019, 4:35 AM
“ಯುವವಾಹಿನಿವೆಂಬುದು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವಮನಸ್ಸುಗಳನ್ನು ಧನಾತ್ಮಕವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ ಬದ್ಧತೆ ಅಭಿನಂದನೀಯವಾದುದು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಹೇಳಿದರು. ಅವರು ದಿನಾಂಕ 20-10- 2019ರ ರವಿವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ(ರಿ.) ಮಾಣಿ ಘಟಕದ 2019-20 ನೇ ಸಾಲಿನ ನೂತನ […]
Read More
28-07-2019, 5:46 AM
ಮಾಣಿ : “ಮನುಷ್ಯನ ಬದುಕನ್ನು ಪ್ರಕೃತಿಯೇ ರೂಪಿಸುತ್ತದೆ.ಆದರೆ ಇಂದು ನಾವು ವಿಕೃತಿಯೆಡೆಗೆ ಸಾಗಿ ಪ್ರಕೃತಿ ರೂಪಿತ ಸಹಜ ಬದುಕನ್ನು ಅದಃ ಪತನಗೊಳಿಸುತ್ತಿದ್ದೇವೆ.ನಮ್ಮಲ್ಲಿ ಇಂದು ಮಣ್ಣನ್ನು ಮಣ್ಣಾಗಿ ನೋಡುವ ದೃಷ್ಟಿ ಇಲ್ಲದಾಗಿದೆ.ಆದರಲ್ಲಿಯೂ ದುರಾಸೆಯ ಪ್ರತಿರೂಪವನ್ನು ರೂಪಿಸುತ್ತಿದ್ದೇವೆ. ಬದುಕಿನ ಪ್ರಕ್ರಿಯೆಯಲ್ಲಿ ಪ್ರಕೃತಿಯು ರೂಪಿಸಿರುವ ವಿವಿಧ ಕಾಲಮಾನಗಳ ಅರಿವು ನಮ್ಮಲ್ಲಿ ಅಗತ್ಯವಾಗಿರಬೇಕು ಎಂದು ತುಳು ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಧ್ಯಾಪಕ ರಮೇಶ್ ಉಳಯ ನುಡಿದರು.ಅವರು ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ದಿನಾಂಕ:28-07-19ರ ಆದಿತ್ಯವಾರದಂದು ಮಾಣಿ ನಾರಾಯಣ ಗುರು ಸಭಾ ಭವನದಲ್ಲಿ […]
Read More
26-07-2019, 4:58 PM
ಮಾಣಿ : ಸರಕಾರಿ ಶಾಲೆ ಉಳಿಯಲಿ,ಬೆಳೆಯಲಿ ಎಂಬ ಆಶಯದೊಂದಿಗೆ ಯುವವಾಹಿನಿ(ರಿ.)ಮಾಣಿ ಘಟಕಕ್ಕೆ ಮತ್ತೊಂದು ಸರಕಾರಿ ಶಾಲೆಯ ಅವಶ್ಯಕತೆಯನ್ನು ಸಾಕಾರಗೊಳಿಸುವ ಅವಕಾಶಯೊಂದು ಇಂದು ಒದಗಿಬಂತು.. ದಿನಾಂಕ .26-07-2019ರಂದು ಸ.ಹಿ.ಪ್ರಾ.ಶಾಲೆ ಮಲ್ಲಡ್ಕ, ಪೆರ್ನೆ ಇದರ ಶಾಲಾ ಮಕ್ಕಳಿಗೆ ಊಟದ ತಟ್ಟೆಗಳನ್ನು ಘಟಕದ ವತಿಯಿಂದ ನೀಡಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಹರೀಶ್ ಬಾಕಿಲ ತಟ್ಟೆಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಜೊತೆಯಲ್ಲಿ ಕಾರ್ಯದರ್ಶಿ ಸುಜಿತ್ ಅಂಚನ್,ನಿ.ಪೂ ಅಧ್ಯಕ್ಷರು ರಾಜೇಶ್ ಬಾಬನಕಟ್ಟೆ, ಜೊತೆ ಕಾರ್ಯದರ್ಶಿ ಜನಾರ್ದನ ಕೊಡಂಗೆ,ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಚೇತನ್ […]
Read More
07-07-2019, 8:27 AM
ಮಾಣಿ : ದಿನಾಂಕ 07-07-19ರಂದು ಬೆಳಿಗ್ಗೆ 8.30ರಿಂದ ಬಾಕಿಲ ಕೋಟಿ-ಚೆನ್ನಯ ಗರಡಿ ಅವರಣದಲ್ಲಿ ಮಾಣಿ ಘಟಕದ ವತಿಯಿಂದ ವನಮೋಹತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅಥಿತಿಯಾಗಿ ಉಪವಲಯ ಅರಣ್ಯಾಧಿಕಾರಿ ಯಶೋಧರ ಪೂಜಾರಿ,ಅನಂತಾಡಿ ಸಾಮಾಜಿಕ ಉಪವಲಯ ಅರಣ್ಯಾಧಿಕಾರಿ ರಂಜಿತ,ಅನಂತಾಡಿ ಅರಣ್ಯ ರಕ್ಷಕ ಖ್ಯಾತಲಿಂಗ ಆಗಮಿಸಿದರು. ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ,ಬಾಕಿಲಗುತ್ತಿನ ಪ್ರಮುಖರಾದ ಜನಾರ್ದನ ಪೂಜಾರಿ ಮತ್ತು ಮೊನಪ್ಪ ಪೂಜಾರಿ ಉಪಸ್ಥಿತರಿದ್ದರು. ಇಂದು ಕಾಡು ನಾಶದ ಪರಿಣಾಮ ಮಳೆಯ ಪ್ರಮಾಣ ವಿಪರೀತ ಕುಸಿತ ಕಂಡಿದೆ,ಅರಣ್ಯ ಉಳಿಸುವ ನಿಟ್ಟಿನಲ್ಲಿ ನಾಗರಿಕರಾದ ನಾವೆಲ್ಲರೂ […]
Read More
16-06-2019, 4:03 PM
ಮಾಣಿ : ದಿನಾಂಕ 16-06-2019ರಂದು ಯುವವಾಹಿನಿ(ರಿ.)ಮಾಣಿ ಘಟಕದ ವತಿಯಿಂದ ಸ.ಹಿ.ಪ್ರಾ.ಶಾಲೆ ಗಡಿಯಾರ, ಕೆದಿಲ ಇಲ್ಲಿ ಯುವ ಸ್ಪೂರ್ತಿ 2018-19 ಪರಿಣಾಮಕಾರಿ ಭಾಷಣ ಕಲೆ, ಸಂವಹನ ಮತ್ತು ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು. ಬೆಳಿಗ್ಗೆ 9.30ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ಜರಗಿತು.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು,ನಿವೃತ್ತ ಸಿಎ ಬ್ಯಾಂಕ್ ಉದ್ಯೋಗಿ ಸೋಮಪ್ಪ ಪೂಜಾರಿ ಮಾದೆಲು, ,ಮಾಣಿ ಘಟಕ ಸಲಹೆಗಾರ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರವಿಚಂದ್ರ , ಗಡಿಯಾರ […]
Read More
28-04-2019, 3:47 PM
ಮಾಣಿ : ಅದು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳಗದ್ದೆ . ಯುವವಾಹಿನಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ಒಂದು ಯಶಸ್ಸಿನ ಚಟುವಟಿಕೆಯ ಸಾಕ್ಷಾತ್ಕಾರಕ್ಕೆ ಆ ಕಂಬಳ ಗದ್ದೆ ಸಾಕ್ಷಿಯಾಗಿತ್ತು. 2018 ರ ಡಿಸೆಂಬರ್ ತಿಂಗಳ 23 ರಂದು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಹಾಗೂ ಮಾಣಿ ಘಟಕದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಗುರು ಸೇವಾ ಸಂಘ(ರಿ) ಮಾಣಿ ಇದರ ಸಹಕಾರದೊಂದಿಗೆ ಅಂತರ್ ಘಟಕ ಒಡಗೂಡುವಿಕೆಯ ಕೋಟಿ ಚೆನ್ನಯ ಕೆಸರುಗದ್ದೆ […]
Read More
21-04-2019, 3:49 PM
ಮಾಣಿ : ಹೆಣ್ಣು ಜಗದ ಕಣ್ಣು,ಮಹಿಳೆ ತನ್ನ ಮೌಲ್ಯಯುತ ಸಮಯವನ್ನು ತನ್ನ ಮನೆಗಾಗಿ ಮಾತ್ರ ಮೀಸಲಿರಿಸಿದೆ ಹೊರಜಗತ್ತಿಗೆ ತೆರೆದುಕೊಳ್ಳಬೇಕು.ತನ್ನವರ ಒಳಿತಿನೊಂದಿಗೆ ಸಂಸ್ಕಾರಯುತ ಜೀವನದ ಮಾದರಿಯಾಗಿ ಇತರರ ಬದುಕಿಗೂ ದಾರಿದೀಪವಾಗಬೇಕೆಂದು ವಿಶ್ವ ಮಹಿಳಾ ದಿನಾಚರಣೆಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಮಾಣಿ ಇದರ ಮಹಿಳಾ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ರಮೇಶ್ ಮುಜಲ ತಿಳಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ನಿರ್ದೇಶಕರಾದ ಪಾರ್ವತಿ ಅಮಿನ್ ಅವರು ಯುವವಾಹಿನಿ ಸಮಾಜಿಕ ಕಳಕಳಿ ಬಗ್ಗೆ ಪ್ರಾಸ್ತಾವಿಕ […]
Read More
04-04-2019, 1:36 PM
ಮಾಣಿ : ಜೀವನ ಪಯಣದ ಹಾದಿಯಲ್ಲಿ ಸಂಬಂಧಗಳು ಬಲು ಮಹತ್ವ ಪಡೆದಿದೆ. ಸಂಬಂಧಗಳು ಉಳಿಯಬೇಕಾದರೆ ಸ್ಪಂದನೆಯ ಅಗತ್ಯವಿದೆ. ಅದಕ್ಕೆ ಸಕಾಲ ಎಂಬಂತೆ ದುರ್ದೈವವಸಾತ್ ನಮ್ಮಘಟಕದ ಸದಸ್ಯರಾದ ನಮ್ಮ ಹತ್ತಿರದ ನಿವಾಸಿ ಬರಿಮಾರ್ ಗ್ರಾಮದ, ಬಲ್ಯ ಬಳಿ ವಾಸವಾಗಿರುವ ಸದಾನಂದ ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರ, “ಅಶ್ವಥ್” ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಏ.ಜೆ ಹಾಸ್ಪಿಟಲ್ ನ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು ಹಾಗೂ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ . ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ […]
Read More
03-03-2019, 3:32 PM
ಮಾಣಿ : ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಅನುಭವ ವಿಸ್ತಾರ ಹಾಗೂ ಯುವವಾಹಿನಿ ಕುಟುಂಬದ ಸದಸ್ಯರೊಳಗಿನ ಸ್ನೇಹ, ವಾತ್ಸಲ್ಯದ ಗಟ್ಟಿತನಕ್ಕಾಗಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡ ಸುಂದರ ಕಾರ್ಯಕ್ರಮವೇ “ಸ್ನೇಹ ಸಿಂಚನ- ಯುವವಾಹಿನಿ ಕುಟುಂಬದ ವಾತ್ಸಲ್ಯ ಪಯಣ” ಸ್ನೇಹ ಸಿಂಚನ ಪಯಣ ಸಾಗಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ.ದಿನಾಂಕ 03-03-19 ಅದಿತ್ಯವಾರದಂದು ಬೆಳಿಗ್ಗೆ 63ಮಂದಿ ಯುವವಾಹಿನಿ ಸದಸ್ಯರೊಂದಿಗೆ ತಂಡವು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಇವರ ನೇತೃತ್ವದೊಂದಿಗೆ […]
Read More