ಗುತ್ತು ಮನೆಯಲ್ಲಿ ಯುವವಾಹಿನಿ ಮಾಣಿ ಘಟಕದ ತುಳಸಿ ಪರ್ಬ ಕಾರ್ಯಕ್ರಮ
‘ಗುತ್ತು’ ಎಂದರೆ ಇತಿಹಾಸ ಘನೀಭವಿಸಿದಂತೆ ಮತ್ತು ಮರುಜೀವಿಸಿದಂತೆ. ಅದು ಒಂದು ವಾಸ್ತವವೂ ಹೌದು, ಕಲ್ಪನೆಯೂ ಹೌದು. ಅದೊಂದು ಅನುಭವಜನ್ಯ ಸತ್ಯ ಮತ್ತು ಪುನಃ ಪಡೆದುಕೊಂಡ ಅನುಭವ”. ಇಂತಹ ಗುತ್ತು ಮನೆತನದಲ್ಲಿ ಒಂದು ಇಡ್ಕಿದು ಗ್ರಾಮದ ಸೂರ್ಯ ಚಂದ್ರಾವತಿ ಅಮ್ಮನವರ ಗುತ್ತು ಮನೆತನ. ನಮ್ಮ ಸಂಸ್ಕೃತಿಯನ್ನು ನೆನಪಿಸುವ, ಹಾಗೂ ಧಾರ್ಮಿಕತೆಯನ್ನು ಬಿಂಬಿಸುವ ಯುವವಾಹಿನಿ ತುಳಸಿಪರ್ಬ ಕಾರ್ಯಕ್ರಮ ಘಟಕದ ನೂತನ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ ಇವರ ಅಧ್ಯಕ್ಷತೆಯಲ್ಲಿ ನಿನ್ನೆಯ ದಿನ ಸಂಜೆ ಬಹಳ ಯಶಸ್ವಿಯಾಗಿ ನಡೆಯಿತು. ಸಭಾಕಾರ್ಯಕ್ರವದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಯಂತ್ ನಡುಬೈಲ್, ಪ್ರೇಮನಾಥ್ ಕೆ., ಈಶ್ವರ ಪೂಜಾರಿ, ನಾರಾಯಣ ಸಾಲ್ಯಾನ್, ರಾಜೇಶ್ ಬಾಬಣಕಟ್ಟೆ ಹಾಗೂ ಗುತ್ತು ಮನೆಯ ಹಿರಿಯರು ಉಪಸ್ಥಿತರಿದ್ದರು. ದಿನಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ಧನ ಕೊಡಂಗೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಜನಾ ಕಾರ್ಯಕ್ರಮ, ಗೋ ಪೂಜೆ, ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಿತು. ಅದೇ ರೀತಿ ಗುತ್ತು ಮನೆಯವರ ವತಿಯಿಂದ ವಿಶೇಷ ಉಪಹಾರ ಮತ್ತು ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.