ಮಾಣಿ ಘಟಕದ “ಕೆಸರ್ಡ್ ಒಂಜಿ ದಿನ” ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನ
ಮಣ್ಣು ಅಂದರೆ ಅದಕ್ಕೆ ಅದರದೇ ಆದ ಗುಣವಿದೆ. ರೋಗರುಜಿನ ಗುಣ ಮಾಡುವ ಶಕ್ತಿ ಇದೆ. ಅದರಲ್ಲೂ ಕೆಸರುಗದ್ದೆಯ ಮಣ್ಣು ಅಂದರೆ ಇನ್ನೂ ಶ್ರೇಷ್ಠವಾದದ್ದು ಅಂಥ ನಮ್ಮ ಹಿರಿಯರ ಮಾತು. ಇದರ ಜೊತೆಗೆ ನಮ್ಮ ಗ್ರಾಮೀಣ ಕ್ರೀಡೆಯನ್ನು ನೆನಪಿಸುವ ದೃಷ್ಠಿಯಿಂದ ಇಂದು ಘಟಕದ ಸದಸ್ಯರಿಗೆ ಕುಟುಂಬ ಸಮ್ಮಿಲನ ರೀತಿಯಲ್ಲಿ ಸುತ್ತಲಿನ ಹತ್ತು ಗ್ರಾಮದ ಬಿಲ್ಲವ ಬಾಂಧವರ ಜೊತೆಗೂಡಿ ಯುವವಾಹಿನಿ ಮಾಣಿ ಘಟಕದ ಆತಿಥ್ಯದಲ್ಲಿ ಅನಂತಾಡಿಯ ಪಡಿಪ್ಪಿರೆ ಗದ್ದೆಯಲ್ಲಿ ನಡೆದ “ಕೆಸರ್ಡ್ ಒಂಜಿ ದಿನ” ಕ್ರೀಡಾಕೂಟ ನಿರೀಕ್ಷೆಯನ್ನು ಮೀರಿ ಯಶಸ್ವಿಯಾಗಿದ್ದು, ಸುತ್ತಲಿನ ಊರ ಪರಊರ ಭಾರಿ ಜನಮನ್ನಣೆಯನ್ನು ಗಳಿಸಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಮೇಶ್ ಮುಜಾಲ ವಹಿಸಿದ್ದರು. ಹೊನ್ನಪ್ಪ ಹಿರ್ತಂದಬೈಲು ದೀಪ ಬೆಳಗಿಸಿ ಉಧ್ಘಾಟಿಸಿದರು. ಗೀತಾ ಚಂದ್ರಶೇಶರ್, ಶೋಭ ರಾಜೇಶ್ ಬಾಬಣಕಟ್ಟೆ, ಗೋಪಾಲ ಪೂಜಾರಿ ನೆಟ್ಲಮುಡ್ನೂರ್, ಸುರೇಶ್ ಪೂಜಾರಿ ಬಾಕಿಲ ಹಾಗೂ ಸಂಚಾಲಕರಾದ ನವೀನ್ ಪೂಂಜಾವು, ಪವನ್ ಎಚ್. ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜಯಂತ್ ನಡುಬೈಲ್ ಹಾಗೂ ಪ್ರೇಮನಾಥ್ ಕೆ. ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.