ಶಿವಗಿರಿ ಯಾತ್ರೆ
22-10-2019, 7:11 AM
ವು ದಿ 20/10/2019 ರಂದು 2 ದಿನದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ವರ್ಕುಲ,ಚೆoಬಳಂತಿ, ಅರವಿಪುರ,ಮರುತಮಲೇ, ಕನ್ಯಾಕುಮಾರಿ, ಅನಂತ ಪದ್ಮನಾಭ ಮುಂತಾದ ಪುಣ್ಯಕ್ಷೇತ್ರಕ್ಕೆ ಭೇಟಿಕೊಡಲಾಯಿತು. ಒಟ್ಟು 50 ಮಂದಿ ಯಾತ್ರಿಗಳು ಪಾಲ್ಗೊಂಡಿದ್ದರು.
22-10-2019, 7:11 AM
ವು ದಿ 20/10/2019 ರಂದು 2 ದಿನದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ವರ್ಕುಲ,ಚೆoಬಳಂತಿ, ಅರವಿಪುರ,ಮರುತಮಲೇ, ಕನ್ಯಾಕುಮಾರಿ, ಅನಂತ ಪದ್ಮನಾಭ ಮುಂತಾದ ಪುಣ್ಯಕ್ಷೇತ್ರಕ್ಕೆ ಭೇಟಿಕೊಡಲಾಯಿತು. ಒಟ್ಟು 50 ಮಂದಿ ಯಾತ್ರಿಗಳು ಪಾಲ್ಗೊಂಡಿದ್ದರು.
20-10-2019, 4:24 PM
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕಡಬ ಘಟಕ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ, ಮರ್ದಾಳ,ಆಲಂಕಾರು ವಲಯಗಳ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 165ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುಪೂಜೆ, ಭಜನೆ, ಧಾರ್ಮಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ 20.10.2019 ರಂದು ನಡೆಯಿತು. ಈ ಸಂದರ್ಭದಲ್ಲಿ ನಮ್ಮ ಸಮಾಜದ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ , ಮಠಾಧೀಶರು ಶ್ರೀರಾಮಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ ಇವರು ಆಶೀರ್ವಚನ […]
06-10-2019, 8:11 AM
ಯುವವಾಹಿನಿ (ರಿ) ಪಣಂಬೂರು -ಕುಳಾಯಿ ಘಟಕದ ವತಿಯಿಂದ ಅಕ್ಟೋಬರ್ 2ರಿಂದ 5ರ ತನಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ಸ್ಥಳವಾದ ಕೇರಳದ ಶಿವಗಿರಿಗೆ 50 ಸದಸ್ಯರ ತಂಡ ದೊಂದಿಗೆ ಯಾತ್ರೆಯನ್ನು ಹಮ್ಮಿ ಕೊಂಡು ಯಶಸ್ವಿಯಾಗಿದೆ
21-09-2019, 10:10 AM
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.), ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿ.ವಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಪಡುಬಿದ್ರಿ ಘಟಕದ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 91ನೇ ಪುಣ್ಯ ತಿಥಿಯು ದಿನಾಂಕ 21/09/2019 ರಂದು ಅರ್ಥಪೂರ್ಣವಾಗಿ ಜರುಗಿತು. ಈ ಕಾರ್ಯಕ್ರಮವು ಕುಮಾರಿ ಐಶ್ವರ್ಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ನಾರಾಯಣ ಗುರುಗಳ ಬಗೆಗಿನ ವಿಷಯಗಳನ್ನು ಘಟಕದ ಹಿರಿಯ ಸದಸ್ಯರಾದ, ಪಡುಬಿದ್ರಿ ನಾರಾಯಣಗುರು ಮಂದಿರದ ಅರ್ಚಕರಾದ ಚಂದ್ರಶೇಖರ ಶಾಂತಿ ಪ್ರಸ್ತಾಪಿಸಿದರು ಯುವವಾಹಿನಿ […]
16-09-2019, 4:30 PM
ಯುವವಾಹಿನಿ (ರಿ.)ಕಂಕನಾಡಿ ಘಟಕದ ವತಿಯಿಂದ ದಿನಾಂಕ 15.09.2019ರಂದು ಆದಿತ್ಯವಾರ ಸಂಜೆ 5 ಕ್ಕೆ ಶ್ರೀ ಬ್ರಹ್ಮಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತಿಯ ಪ್ರಯುಕ್ತ ಗುರುಸ್ಮರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಶ್ರೀ ಬ್ರಹ್ಮಮುಗೇರ ಶ್ರೀ ಮಹಾಂಕಾಳಿ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರು ಶ್ರೀನಿವಾಸ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಪಿ ಎಲ್ […]
15-09-2019, 10:37 AM
ನಮ್ಮ ಸಮಾಜದಲ್ಲಿ ಮದುವೆಯ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನವು ವಿಪರೀತವಾಗಿದ್ದು ಅದರಿಂದ ಆಗುವ ತೊಂದರೆಗಳು ಹಲವಾರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮದ್ಯಪಾನವನ್ನು ಬಹಳ ವಿರೋಧಿಸಿದ್ದರು. ಮೂಡಬಿದ್ರೆ ಯುವವಾಹಿನಿ ಘಟಕ ಬ್ರಹ್ಮಶ್ರೀ ನಾರಾಯಣ ಗುರುಗಳ 165 ಜನ್ಮದಿನಾಚರಣೆಯ ಅಂಗವಾಗಿ ಮದ್ಯಪಾನ ಮುಕ್ತ ಮದರಂಗಿ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸುವ ಗುರು ಸಂದೇಶ ಸಂಕಲ್ಪ ಎಂಬ ನಾಮಾಂಕಿತ ಮನವಿ ಪತ್ರವನ್ನು ದಿನಾಂಕ 15/09/2019 ರಂದು ಕಡಂದಲೆ ಪಾಲಡ್ಕ ಬಿಲ್ಲವ ಸಂಘದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಹೊಸ್ಮಾರು ಬಲ್ಲೆಟ್ಟು ಸ್ವಾಮಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ […]
13-09-2019, 5:04 PM
ತಾ 08, 09 ,2019 ರಂದು ಶ್ರೀ ಬ್ರಹ್ಮ ಶ್ರೀ ನಾರಾಯಣ ಗುರು ಗಳ ಜನ್ಮ ದಿನದ ಪ್ರಯುಕ್ತ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಯುವಾಹಿನಿ ಕಟಪಾಡಿ ಘಟಕದ ಸದಸ್ಯರೆಲ್ಲರ ಸಹಕಾರದಿಂದ ನೆರವೇರಿಸಲಾಯಿತು ಯುವವಾಹಿನಿ ಕಟಪಾಡಿ ಘಟಕದ ಸದಸ್ಯರಿಂದ ಶ್ರೀ ವಿಶ್ವನಾಥ ಕ್ಷೇತದಲ್ಲಿ ನಾರಾಯಣ ಗುರು ಜಯಂತಿ ಪ್ರಯುಕ್ತ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
13-09-2019, 4:45 PM
ಅಡ್ವೆ : ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ದಿನಾಂಕ 13/9/2019 ರಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜಯಂತಿಯನ್ನು ಭಜನಾ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಭಜನಾ ಕಾರ್ಯಕ್ರಮವನ್ನು ಘಟಕದ ಸದಸ್ಯರು ಹಾಗೂ ಶ್ರೀ ಅಮೃತವರ್ಷಿಣಿ ಮಹಿಳಾ ವೃಂದದ ಸದಸ್ಯರು ಸೇರಿ ನಡೆಸಿಕೊಟ್ಟರು. ತದನಂತರ ಪ್ರತೀ ವರ್ಷ ಬ್ರಹ್ಮಶ್ರೀ ನಾರಯಣ ಗುರು ಜಯಂತಿಯಂದು ನಡೆಸಿಕೊಂಡು ಬರುತ್ತಿರುವ ಊರಿನ ಹಿರಿಯರೊಬ್ಬರಿಗೆ ಸಮರ್ಪಿಸುವ “ಗುರುವಂದನೆ” ಯನ್ನು ಈ ಬಾರಿ ಹಿಂದಿನಿಂದಲೂ ಕೃಷಿಯನ್ನೇ ತನ್ನ […]
13-09-2019, 4:42 PM
ಯುವವಾಹಿನಿ(ರಿ) ಶಕ್ತಿನಗರ ಘಟಕವು ನಾರಾಯಣ ಜಯಂತಿಯ ಪ್ರಯುಕ್ತ ಗುರುವರ್ಯರು ಸಮಾಜಕ್ಕೆ ಕೊಟ್ಟ ಸಂದೇಶವಾದ ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ಮಾತಿನಂತೆ ವಿವಿಧ ಯುವವಾಹಿನಿ ಸದಸ್ಯರು ಜೊತೆಗೂಡಿಸಿ ಸಂಜೆ 4.30ರಿಂದ ಸಂಜೆ 5.30 ಘಂಟೆಯವರೆಗೆ ಭಜನೆ ಮಾಡುವ ಮೂಲಕ ಸಕ್ರಿಯ ಸದಸ್ಯ ಶ್ರೀಯುತ ಉಮೇಶ್ ದಂಡಕೇರಿ ಯವರ ಸ್ವಗ್ರಹದಲ್ಲಿ ನೆಡದ ಗುರುಪೂಜೆಗೆ ಘಟಕದ ವತಿಯಿಂದ ಹೂ ಸಮರ್ಪಿಸಿಲಾಯಿತು ಕಾರ್ಯಕ್ರಮದಲ್ಲಿ ಶ್ರೀನಿವಾಸ ಪೂಜಾರಿ, ಭವಾನಿ ಶಂಕರ್. ಗಣೇಶ್ ಮಹಾಕಾಳಿ, ಜಯರಾಮ ಪೂಜಾರಿ,ನವೀನ್ ದಂಪತಿಗಳು, ಭವ್ಯಕುಮಾರ್, ಕಿಶೋರ್ ಜೆ,ಯೋಗೀಶ್ ಸುವರ್ಣ,ಮಾರಪ್ಪ […]
13-09-2019, 10:35 AM
ಶ್ರೀ ನಾರಾಯಣ ಗುರು ಜಯಂತಿಯ ಸಂದರ್ಭದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸನ್ನಿಧಾನದಲ್ಲಿ ಶ್ರೀ ನಾರಾಯಣ ಗುರು ವರ್ಯರಿಗೆ ಮುಲ್ಕಿ ಯುವವಾಹಿನಿ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. Attachments area