ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ದಿನಾಂಕ: 14-05-2026 ರಿಂದ 16-05-2026 ರವರೆಗೆ ಆಯೋಜಿಸಲಾಗಿದ್ದ ಮೂರು ದಿನಗಳ ‘ಶಿವಗಿರಿ ಯಾತ್ರೆ’ಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಆಧ್ಯಾತ್ಮಿಕ ಅನುಭೂತಿ ನೀಡಿದ ಯಾತ್ರೆ : ಘಟಕದ ಪ್ರವಾಸ ಸಂಚಾಲಕರಾದ ಸದಾನಂದ ಪೂಜಾರಿ ಕುಳಾಯಿ ಅವರು ಯಾತ್ರಾರ್ಥಿಗಳಿಗೆ ಶಿವಗಿರಿ ಕ್ಷೇತ್ರದ ಇತಿಹಾಸ, ಮಹಿಮೆ ಮತ್ತು ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಾ ಸುಸೂತ್ರವಾಗಿ ಕ್ಷೇತ್ರ ದರ್ಶನ ಮಾಡಿಸಿದರು. ಈ ಆಧ್ಯಾತ್ಮಿಕ ಪ್ರವಾಸದಲ್ಲಿ ಒಟ್ಟು 53 ಹಿರಿಯರು ಹಾಗೂ 7 ಮಕ್ಕಳು ಸೇರಿದಂತೆ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು.
ಯಾತ್ರೆಗೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳು ಶಿವಗಿರಿ ಕ್ಷೇತ್ರದ ದೈವಿಕ ಪರಿಸರದಲ್ಲಿ ಆಧ್ಯಾತ್ಮಿಕ ಅನುಭವ ಪಡೆದು ಹರ್ಷ ವ್ಯಕ್ತಪಡಿಸಿದರಲ್ಲದೆ, ಇಂತಹ ಅತ್ಯುತ್ತಮ ಪ್ರವಾಸವನ್ನು ಆಯೋಜಿಸಿದ ಮಂಗಳೂರು ಘಟಕಕ್ಕೆ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. ಈ ಯಶಸ್ವಿ ಯಾತ್ರೆಯು ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ ಅವರ ಸಮರ್ಥ ನೇತೃತ್ವದಲ್ಲಿ ಹಾಗೂ ಪ್ರವಾಸ ಸಂಚಾಲಕರಾದ ಸದಾನಂದ ಪೂಜಾರಿ ಕುಳಾಯಿ ಅವರ ಸಂಚಾಲಕತ್ವದಲ್ಲಿ ನೆರವೇರಿತು. ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಹಕಾರದಿಂದ ಶಿವಗಿರಿ ಯಾತ್ರೆಯು ಅತ್ಯಂತ ಶಿಸ್ತುಬದ್ಧವಾಗಿ ಮೂಡಿಬಂತು.


