
06-09-2017, 1:21 PM
ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜನ್ಮದಿನಾಚರಣೆ ಪ್ರಯುಕ್ತ ಸಾನಿದ್ಯ ವಿಶೇಷ ಚೇತನ ಮಕ್ಜಳ ಜೊತೆ ಗುರುವರ್ಯರ ಜನ್ಮದಿನಾಚರಣೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.ಸಾನಿದ್ಯದಲ್ಲಿರುವ 160 ಮಕ್ಕಳ ಯೋಗಕ್ಷೇಮ ವಿಚಾರಿಸಿದ ಕೂಳೂರು ಯುವವಾಹಿನಿ ಸದಸ್ಯರು ಅವರೊಂದಿಗೆ ಮಕ್ಜಳಂತೆ ಬೆರೆತರು.ಮಕ್ಕಳಿಗೆ ಸಿಹಿತಿಂಡಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಕುಳೂರು ಯುವವಾಹಿನಿ ಅಧ್ಯಕ್ಷರಾದ ಪುಷ್ಪರಾಜ್, ಕಾರ್ಯದರ್ಶಿ ವಿನೀತ್, ನಿಕಟ ಪೂರ್ವ ಅಧ್ಯಕ್ಷರಾದ ಸುಜಿತ್ ರಾಜ್, ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು
Read More

06-09-2017, 12:43 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಬ್ರಹ್ಮಶ್ರೀ ನಾರಾಯಣಗುರುಗಳ 163 ನೇ ಜನ್ಮದಿನಾಚರಣೆ ಪ್ರಯುಕ್ತ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ದಿನಾಂಕ 06.09.2017ರಂದು ಗುರುವಂದನೆ ಕಾರ್ಯಕ್ರಮ ಜರಗಿತು. ಮಂಗಳೂರಿನ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಪ್ಪಲತಾ ಹಾಗೂ ಸಿ.ಇ.ಒ ಪ್ರಭಾ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ, ಕಾರ್ಯದರ್ಶಿ ಸುನೀತಾ, ಉಪಾಧ್ಯಕ್ಷರಾದ ರಶ್ಮಿ ಚಂದ್ರಶೇಖರ್, ನಿಕಟ ಪೂರ್ವ ಅಧ್ಯಕ್ಷರಾದ ವಿದ್ಯಾ ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು ಅಂದು ಬೆಳಗ್ಗೆ […]
Read More

21-04-2017, 3:30 PM
ಯುವವಾಹಿನಿ ಪಣಂಬೂರು ಘಟಕದ ಸದಸ್ಯರು ದಿನಾಂಕ 22.04.2017 ರಿಂದ. 24.04.2017 ರ ವರಗೆ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು 50 ಸದಸ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು
Read More

12-03-2017, 5:43 AM
ಇಂದು ಬಡವರ ಮಕ್ಕಳು ಸಹ ಶಿಕ್ಷಣ ಪಡೆಯಲು ಅವಕಾಶ ಇದೆ. ಪೋಷಕರು ಇದನ್ನು ಮನಗಂಡು ಮಕ್ಕಳ ವಿದ್ಯೆಗೆ ಪ್ರಾಮುಖ್ಯ ನೀಡಬೇಕು ವಿದ್ಯಾರ್ಜನೆಯಿಂದ ವಂಚಿಸಿದರೆ ದೇವರ ಶಾಪಕ್ಕೆ ಗುರಿಯಾಗುವಿರಿ ಎಂದು ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ ವಸಂತ ಬಂಗೇರ ತಿಳಿಸಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮೂಡುಕೋಡಿ ಗ್ರಾಮದ ಬಿಲ್ಲವ ಭಾಂದವರಿಗೆ ನಾರಾಯಣಗುರು, ಕೋಟಿ ಚೆನ್ನಯ, ಕಿಮ್ಮಲೆ ನಾಗಬ್ರಹ್ಮರ ಉಚಿತ ಭಾವಚಿತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ […]
Read More

15-02-2017, 7:38 AM
ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ 15.02.2017 ರಂದು ಅಳದಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ಕಾರ್ಯಕ್ರಮ ಜರುಗಿತು. ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಶತಮಾನಗಳ ಹಿಂದಿನ ಕಾಲಘಟ್ಟದಲ್ಲಿ ಮಾಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಜನ್ಮತಾಳದಿದ್ದರೆ ಇಂದಿಗೂ ಅಸ್ಪೃಶ್ಯತೆ ಇರುತಿತ್ತು, ಗುರುವರ್ಯರ ಮುಖ್ಯ ಉದ್ದೇಶ ವಿದ್ಯೆ, ಉದ್ಯೋಗ, ಸಂಪರ್ಕ ಸಮಾಜದಲ್ಲಿ ಪಸರಿಸುತ್ತಿರುವ ಯುವವಾಹಿನಿ ಸಂಸ್ಥೆ ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬಿದೆ, ಯುವಕರು ದುಶ್ಚಟಗಳಿಂದ ದೂರವಾಗಿ ಗುರುಗಳ ಸಂದೇಶ ಅನುಸರಿಸಬೇಕು ಎಂದು ಕೇರಳದ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ […]
Read More

04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.
Read More

01-02-2017, 12:45 PM
“ಓಂ ನಮೋಃ ನಾರಾಯಣ ಪರಮ ಗುರುವೇ ನಮಃ”. ಬ್ರಹ್ಮಶ್ರೀ ನಾರಾಯಣ ಗುರುಗಳ ಈ ನಾಮ ಸ್ಮರಣೆ ಮುಗಿಲು ಮುಟ್ಟುವಂತಿದ್ದುದು ಶಿವಗಿರಿಯ ಮಹಾತೀರ್ಥಾಟನಾ ಉತ್ಸವದಲ್ಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪವಿತ್ರ ಭೂಮಿ ವರ್ಕಳದ ಶಿವಗಿರಿಯ ವೈಭವದ ದೃಶ್ಯ ಕಣ್ಮನ ಸೆಳೆಯುವುದು, ಭಕ್ತಸಾಗರವೇ ಹರಿದುಬರುವ ಶಿವಗಿರಿಯ ತಿರ್ಥಾಟನಾ ಸಂದರ್ಭದಲ್ಲಿ. ಇದಕ್ಕೆ ಸಾಕ್ಷೀಭೂತವಾಗಿದ್ದು ಇತ್ತೀಚೆಗೆ ನಡೆದ 84 ನೇ ಶಿವಗಿರಿ ತಿರ್ಥಾಟನೆಯಲ್ಲಿ ಪಾಲ್ಗೊಂಡ ಮಂಗಳೂರು ಯುವವಾಹಿನಿ ಘಟಕದ ತಂಡ. ಹೌದು, ಸೇವಾ ಮನೋಭಾವನೆಯ ಮನಸಂಕಲ್ಪದಿಂದ ಹಾಗೂ ಶಿವಗಿರಿಯ ತೀರ್ಥಾಟನಾ ಉತ್ಸವವನ್ನು ನೋಡಿ […]
Read More

11-12-2016, 11:39 AM
ದಿನಾಂಕ 11-12-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಯುವವಾಹಿನಿ ಕೂಳೂರು ಘಟಕದ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದಲ್ಲಿ ಬಿಲ್ಲವ ಸಮಾಜ ಎಂಬ ವಿಚಾರ ಕಮ್ಮಟ ನಡೆಯಿತು. ಕುಳಾಯಿ ಸಂಘದ ಅಧ್ಯಕ್ಷ ಎಂ.ಟಿ. ಸಾಲ್ಯಾನ್ ದೀಪ ಬೆಳಗಿಸಿ ಕಮ್ಮಟವನ್ನು ಉದ್ಘಾಟಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ್ರವರು ಪಣಂಬೂರು ಹಾಗೂ ಕೂಳೂರು ಘಟಕದ ಬೆಳವಣಿಗೆಯನ್ನು ತಿಳಿಸುತ್ತಾ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಗೈದರು. ಯುವವಾಹಿನಿ (ರಿ) ಕೇಂದ್ರ […]
Read More

01-10-2016, 5:14 AM
ತುಳುನಾಡಿನ ಪರಂಪರೆ, ದೈವಾರಾಧನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 88 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕವು ಜಂಟಿಯಾಗಿ ನಡೆಸಿದ ಕೊಡಿಯಡಿತ ಸತ್ಯೊಲು ಎಂಬ ವಿಚಾರಗೋಷ್ಟಿಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ ಪುರಾತನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಮಹಿಳೆಯರೇ ದೈವಗಳಿಗೆ ದೀಪವಿಡುವ ಪರಿಕ್ರಮವಿದ್ದು ಕಾಲಾನಂತರ ಮಹಿಳೆಯರನ್ನು […]
Read More

25-09-2016, 5:36 AM
ದಿನಾಂಕ 25-9-2016 ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಉಜ್ಜೋಡಿಯ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162 ನೇ ಜಯಂತಿ ಆಚರಣೆ ಹಾಗೂ ಗುರುಗಳ ಬಗ್ಗೆ ಶಾಲಾ ಮಕ್ಕಳಿಗೆ ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಸಿಂಚನ ಲೈಟಿಂಗ್ ಕಂಟ್ರೋಲ್ನ CEO ರತ್ನಾಕರ ಸುವರ್ಣ, ಮಾಜಿ […]
Read More