ದಿನಾಂಕ 25-9-2016 ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಉಜ್ಜೋಡಿಯ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162 ನೇ ಜಯಂತಿ ಆಚರಣೆ ಹಾಗೂ ಗುರುಗಳ ಬಗ್ಗೆ ಶಾಲಾ ಮಕ್ಕಳಿಗೆ ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಸಿಂಚನ ಲೈಟಿಂಗ್ ಕಂಟ್ರೋಲ್‌ನ CEO ರತ್ನಾಕರ ಸುವರ್ಣ, ಮಾಜಿ ಶಾಸಕ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್, ಉಜ್ಜೋಡಿಯ ಶ್ರೀ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ್ ಬಂಗೇರ ಹಾಗೂ ಘಟಕದ ಸಲಹೆಗಾರರಾದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನೇಮಿರಾಜ್ ಮತ್ತು ಪ್ರೇಮನಾಥ ಕೆ. ಮೊದಲಾದವರು ಭಾಗವಹಿಸಿದ್ದರು.
ಘಟಕಾಧ್ಯಕ್ಷ ಹರೀಶ್ ಕೆ. ಸನಿಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದಲ್ಲಿ ಎಂ.ಎ. ಪದವಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಶ್ರೀಮತಿ ಲತಾ ದಿವ್ಯ ಪ್ರಸಾದ್ ಅವರಿಗೆ ಹಾಗೂ ಆಲ್ ಕಾಲೇಜ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕುಮಾರಿ ಪ್ರತೀಕ್ಷ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದಿರುವ ಎರಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಬಳಿಕ ದಿನಾಂಕ18-9-2016 ರಂದು ನಡೆಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಧ್ಯಕ್ಷ ಹರೀಶ್ ಕೆ. ಸನಿಲ್‌ರವರು ಸ್ವಾಗತಿಸಿದರು. ಕಾರ್ಯದರ್ಶಿ ಭವಿತ್‌ರಾಜ್‌ರವರು ವಂದಿಸಿದರು. ರಾಕೇಶ್ ಕುಮಾರ್ ಹಾಗೂ ಕುಮಾರಿ ಅಶ್ವಿತ ಅವರು ಕಾರ್ಯಕ್ರಮ ನಿರೂಪಿಸಿದರು.