ದಿನಾಂಕ 11-12-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಯುವವಾಹಿನಿ ಕೂಳೂರು ಘಟಕದ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದಲ್ಲಿ ಬಿಲ್ಲವ ಸಮಾಜ ಎಂಬ ವಿಚಾರ ಕಮ್ಮಟ ನಡೆಯಿತು. ಕುಳಾಯಿ ಸಂಘದ ಅಧ್ಯಕ್ಷ ಎಂ.ಟಿ. ಸಾಲ್ಯಾನ್ ದೀಪ ಬೆಳಗಿಸಿ ಕಮ್ಮಟವನ್ನು ಉದ್ಘಾಟಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ್‌ರವರು ಪಣಂಬೂರು ಹಾಗೂ ಕೂಳೂರು ಘಟಕದ ಬೆಳವಣಿಗೆಯನ್ನು ತಿಳಿಸುತ್ತಾ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಗೈದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಹಾಗೂ ಪಣಂಬೂರು ಘಟಕದ ಮಾಜಿ ಅಧ್ಯಕ್ಷ ಕೆ. ರಾಜೀವ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಯಾಗಿ ಕಮ್ಮಟವನ್ನು ನಡೆಸಿಕೊಟ್ಟರು. ಶ್ರೀ ನಾರಾಯಣ ಗುರುಗಳ ಜನನ, ಬೆಳವಣಿಗೆ, ಸಾಧನೆ-ಬೋಧನೆ, ಕಾರ್ಯಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುತ್ತಾ ಬಿಲ್ಲವ ಜನಾಂಗ ಹಾಗೂ ಇನ್ನಿತರ ಹಿಂದುಳಿದ ಜನಾಂಗಕ್ಕೆ ಬ್ರಹ್ಮಶ್ರೀಯವರ ಸೇವೆ ಹಾಗೂ ಕರೆಗಳನ್ನು ಕಮ್ಮಟದಲ್ಲಿ ಮಂಡಿಸಿದರು.
ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಶಾಂತಿಯಾಗಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಶ್ರೀನಿವಾಸ ಶಾಂತಿ ಹಾಗೂ ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಶಾಂತಿಯಾಗಿ ಸುಮಾರು 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಕೃಷ್ಣ ಶಾಂತಿಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಸಂಸ್ಥೆಯು ಆರಂಭವಾಗಿ ಕೇವಲ 5 ವರ್ಷಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿ 2016 ರ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಸಹಕಾರೀ ಸಂಸ್ಥೆಯೆಂಬ ಬಿರುದನ್ನು ಗಳಿಸುವಲ್ಲಿ ಯಶಸ್ವಿಯಾದುದು ಒಂದು ಹೆಮ್ಮೆಯ ಸಂಗತಿ. ಸಹಕಾರಿ ಕ್ಷೇತ್ರದ ಈ ಮಹತ್ತರ ಸಾಧನೆಯ ಹಿಂದೆ ಸಂಸ್ಥೆಯ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‌ರವರ ಪರಿಪಕ್ವತೆಯುಳ್ಳ ನೇತೃತ್ವವನ್ನು ಗುರುತಿಸಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಪಣಂಬೂರು ಘಟಕದ ಅಧ್ಯಕ್ಷ ವಸಂತ ಪೂಜಾರಿ, ಕಾರ್ಯದರ್ಶಿ ಉದಯ ಆರ್., ಕೂಳೂರು ಘಟಕದ ಕಾರ್ಯದರ್ಶಿ ದೀಕ್ಷಿತ್, ಉಪಾಧ್ಯಕ್ಷ ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕುಮಾರಿ ಭೂಮಿಕ ಮತ್ತು ಅನುಜ್ಞ ಪ್ರಾರ್ಥನೆಗೈದರು. ಪಣಂಬೂರು ಘಟಕದ ಅಧ್ಯಕ್ಷ ವಸಂತ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಆರ್. ಕೂಳೂರು ವಂದಿಸಿದರು. ಘಟಕದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಬಿಲ್ಲ,ವ ಸಮಾಜಕ್ಲೇ ಉತ್ತಮ ವಾದ ಸಂದೇಶ- ಒಳ್ಳೆಯ ಕಾರ್ಯ