Yuvavahini

ನಾರಾಯಣ ಗುರು

ಶಿವಗಿರಿ ಯಾತ್ರೆ

ಯುವವಾಹಿನಿ(ರಿ) ಕೆಂಜಾರು-ಕರಂಬಾರು ಘಟಕದ ನೇತ್ರತ್ವದಲ್ಲಿ ದಿನಾಂಕ 21/04/2018 ರಿಂದ 24/04/2018 ರ ವರೆಗೆ ಶಿವಗಿರಿಯಾತ್ರೆಯು ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಯಾತ್ರೆಯಲ್ಲಿ ಒಟ್ಟು 41 ಸದಸ್ಯರು ಯಾತ್ರಿಗಳು ಭಾಗವಹಿಸಿದ್ದರು. ಯಾತ್ರೆಯು ಶಿವಗಿರಿ, ಗುರು ಜನ್ಮಸ್ಥಳ ಚಂಬಳಂತಿ, ಅರವೀಪುರ, ಕನ್ಯಾಕುಮಾರಿ, ಮರತ್ತಮಲೆ ಬೆಟ್ಟ ಹಾಗೂ ತಿರುವನಂತಪುರ ಅನಂತಪದ್ಮನಾಭ ದೇವಸ್ಥಾನಗಳನ್ನು ಒಳಗೊಂಡಿತ್ತು. ಘಟಕದ ಕಾರ್ಯದರ್ಶಿ ಜೀತೇಶ್ ಸಾಲ್ಯಾನ್, ಕೋಶಾದಿಕಾರಿ ಯಶವಂತ್ ಬಿ., ಸಂಚಾಲಕರಾದ ಶೇಖರ್ ಪೂಜಾರಿ ಹಾಗೂ ಸಂದೀಪ್ […]

Read More

ನಾರಾಯಣಗುರು ಜೀವನ ವಿಧಾನ-ಸಂದೇಶ ಸರ್ವಕಾಲಿಕ : ಪ್ರಮೀಳಾ ಎಮ್.ಕೆ

ಮಂಗಳೂರು : ಹತ್ತೊಂಬತ್ತನೆಯ ಶತಮಾನದ ಕೇರಳದ ಸಂತ ನಾರಾಯಣಗುರು ಮಾನವ ಧರ್ಮಕ್ಕೆ ‌ಮಾದರಿ ಏನೆಂಬುವುದನ್ನು ತೋರಿಸಿ ಕೊಟ್ಟವರು. ಲಕ್ಷಾಂತರ ಮಂದಿ ಶೋಷಿತರ ಬದುಕಿಗೆ ಪರಿವರ್ತನೆಯ ಬೆಳಕು ನೀಡಿದ ಅವರ ತತ್ವ ಸಂದೇಶಗಳನ್ನು ಯುವ ಜನಾಂಗ ಹೆಚ್ಚು ಹೆಚ್ಚು ಅನುಷ್ಠಾನಗೊಳಿಸಬೇಕು, ವಿದ್ಯಾರ್ಥಿ ಸಂವಾದದ ಮೂಲಕ ಯುವ ಜನಾಂಗವನ್ನು ಸೆಳೆಯುವ ಕಾರ್ಯ ಶ್ಲಾಘನೀಯ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಎಮ್.ಕೆ ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು ಯುವವಾಹಿನಿ (ರಿ) ಕೇಂದ್ರ ಸಮಿತಿ, […]

Read More

ಶಿವಗಿರಿ ಯಾತ್ರೆ

ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 10.02.2018 ರಿಂದ 13.02.2018 ರವರೆಗೆ ಮೂರು ದಿನಗಳ ಕಾಲ ಶಿವಗಿರಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಮಾರ್ಗದರ್ಶನ ನೀಡಿದರು

Read More

ನಾರಾಯಣಗುರು ಅನುಸರಿಸಿದ್ದು ಸಂಘರ್ಷದ ಹಾದಿಯಲ್ಲ;ಸಾಮರಸ್ಯ ಮಾರ್ಗ : ದಿನೇಶ್ ಅಮೀನ್ ಮಟ್ಟು

ಬಂಟ್ವಾಳ : ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ ನಮ್ಮ ದೃಷ್ಟಿ ಗುರಿಯ ಸಾಧನೆಯ ಕಡೆಗೆ ಇರಬೇಕು. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರುಗಳು ರೂಪುಗೊಳ್ಳುತ್ತಾರೆ. ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆ ಯಾಗುತ್ತೆ ಎಂಬ ನಂಬಿಕೆ […]

Read More

ದೇಶದಲ್ಲಿ ಕ್ರಾಂತಿಯಕಾರಿ ವಿಚಾರ ಧಾರೆಗಳು ನಿಂತುಹೋಗಿವೆ : ಶಿವರಾಮ

 ಸುಳ್ಯ ; ದೇಶದಲ್ಲಿ ಕ್ರಾಂತಿಯಕಾರಿ ವಿಚಾರ ಧಾರೆಗಳು ನಿಂತುಹೋಗಿವೆ .ಅಸಹಿಷ್ಣುತೆ ಜಾಸ್ತಿ ಯಾಗಿದೆ .ಉಡುಪಿಯಲ್ಲಿ ಧರ್ಮ ಸಂತರ ಸಂಸತ್ ನಡೆಯುತ್ತಿದೆ ಆದರೆ ಅದು ಧರ್ಮ ಸಂತೃಪ್ತರ ಸಭೆ ನಾವೆಲ್ಲ ಧರ್ಮಸಂತ್ರಸ್ತರು .ಪುರೋಹಿತಶಾಹಿ ವರ್ಗದಿಂದ ಧರ್ಮ ಉಳಿದುದಲ್ಲ ಶೋಷಿತ ವರ್ಗದಿಂದ ಉಳಿದುದು ಎಂದು ಬೆಂಗಳೂರಿನ ನಿವೃತ್ತ ಎ.ಸಿ.ಪಿ ಬಿ.ಕೆ .ಶಿವರಾಮ ಹೇಳಿದರು .ಅವರು ನ.25ರಂದುಯುವವಾಹಿನಿ (ರಿ) ಸುಳ್ಯ ಘಟಕ ಮತ್ತು ಸುಳ್ಯದ ಮಾನವ ಬಂಧುತ್ವ ವೇದಿಕೆ ವತಿಯಿಂದ ಯುವಜನ ಸಂಯುಕ್ತ ಮಂಡಳಿ ಸಂಭಾಂಗಣದಲ್ಲಿ ನಡೆದ ಸಮಾಜ ಸುಧಾರಕ ಶ್ರೀ […]

Read More

ಶಿವಗಿರಿ ಯಾತ್ರೆ

ಯುವವಾಹಿನಿ (ರಿ) ಬಜ್ಪೆ ಘಟಕದ ನೇತೃತ್ವದಲ್ಲಿ ದಿನಾಂಕ 21/10/2017ರಿಂದ 24/10/2017ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹದಿಂದ ಮತ್ತು ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶಿವಗಿರಿ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಯಾತ್ರೆಯಲ್ಲಿ ಒಟ್ಟು 52 ಯಾತ್ರಾರ್ಥಿಗಳು ಭಾಗವಹಿಸಿದ್ದರು. ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಮತ್ತು ಕಾರ್ಯದರ್ಶಿ ಕನಕಾ ಮೋಹನ್, ಸಂಚಾಲಕರಾದ ದೇವರಾಜ್ ಅಮೀನ್, ಶಿವರಾಮ ಪೂಜಾರಿ ಇವರು ಶಿವಗಿರಿ ಯಾತ್ರೆಯ ನೇತ್ರತ್ವ ವಹಿಸಿದ್ದರು.

Read More

ಗುರುಗಳು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಿಸಬೇಕು

ಮಹಾ ಮಾನವತಾವಾದಿ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುವರ್ಯರು ಸಮಾಜದ ಒಳಿತಿಗಾಗಿ ದುಡಿದವರು. ಸಮಸ್ತ ಮಾನವ ಜನಾಂಗಕ್ಕೆ ಹೊಸ ಹಾದಿ ತೋರಿದ ಅವರ ಸಂದೇಶದ ಅನುಷ್ಠಾನದ ಜತೆಗೆ ಅವರು ತೋರಿದ ಹಾದಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಮಂಗಳೂರಿನ ಖ್ಯಾತ ವಕೀಲರು ಹಾಗು ಕಾಂತಾವರದ ಅಲ್ಲಮ ಪ್ರಭು ಪೀಠದ ಅಧ್ಯಕ್ಷರಾದ ಶ್ರೀ ಯಶೋಧರ ಪಿ. ಕರ್ಕೇರರವರು ತಿಳಿಸಿದರು ಅವರು ಯುವವಾಹಿನಿ(ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜಯಂತಿಯ ಪ್ರಯುಕ್ತ ದಿನಾಂಕ […]

Read More

ಯುವ ಜನತೆಗೆ ನಾರಾಯಣಗುರುಗಳ ಚಿಂತನೆ ಪ್ರೇರಣೆಯಾಗಲಿ : ಮಟ್ಟು

ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಬಡತನ, ಕಂದಾಚಾರ, ಮೂಢನಂಬಿಕೆ, ಹಾಗೂ ದುಂದುವೆಚ್ಚದ ಸಮಾರಂಭ ಮುಂತಾದ ಸಮಸ್ಯೆಗಳಿಂದ ಮುಕ್ತವಾದ ಸಮಾಜವೊಂದರ ನಿರ್ಮಾಣದ ಗುರುತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದ್ದು ಈ ಕಾರ್ಯಕ್ಕೆ ಶ್ರೀ ನಾರಾಯಣಗುರುಗಳ ಚಿಂತನೆಗಳನ್ನು ಪ್ರೇರಣೆಯಾಗಿ ಸ್ವೀಕರಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಹೇಳಿದರು ನಾರಾಯಣಗುರು ವಿಚಾರ ಕಮ್ಮಟ (ನಾವಿಕ) ಮಂಗಳೂರು ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನಾಚರಣೆ ಅಂಗವಾಗಿ ಯುವಜನರ ಗುರು ಮತ್ತು ಗುರಿ – ನಾರಾಯಣಗುರು ವಿಷಯದ ಕುರಿತು […]

Read More

ತುಳುನಾಡ : ಆರಾಧನೆ-ಆಶಯ-ಸ್ವರೂಪ

ಆಧುನೀಕರಣ ಪ್ರಭಾವದಿಂದ ತಂತ್ರಜ್ಞಾನದ ಒಳಿತುಗಳಂತೆ ಕೆಡುಕುಗಳು ಉಂಟಾಗಿ ಯುವ ಸಮುದಾಯದ ಮೇಲೆ ಅದರ ಪರಿಣಾಮ ಪ್ರಖರವಾಗಿದೆ. ಹೆತ್ತವರು ಉತ್ತಮವಾಗಿ ಶಿಶು ಆರೈಕೆಯೊಂದಿಗೆ ಮಕ್ಕಳ ಮೇಲೆ ಯಾವುದೇ ಕೆಟ್ಟ ಪ್ರಭಾವ ಆಗದಂತೆ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ನಾರಾಯಣಗುರುವರ್ಯರಂತ ಮಹನೀಯರ ತತ್ವಾದರ್ಶಗಳನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂಜ, ಕುತ್ಯಾರು ಬ್ರಹ್ಮಬೈದರ್ಕಳ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಉಮೇಶ್ ಕೋಟ್ಯಾನ್ ತಿಳಿಸಿದರು. ಅವರು ಪಡುಬಿದ್ರಿ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ […]

Read More

ಸದೃಡ ಸಮಾಜ ನಿರ್ಮಿಸಿದ ನಾರಾಯಣಗುರುಗಳು

ಬ್ರಹ್ಮಶ್ರೀ ನಾರಾಯಣಗುರುಗಳು ತಾನು ಸಮಾಜಕ್ಕೆ ನೀಡಿದ್ದ ಪ್ರತಿ ಸಂದೇಶವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಮಾನವತಾವಾದದ ಪ್ರತಿಪಾದಕರಾಗಿದ್ದರು, ಮನುಕುಲಕ್ಕೆ ಜ್ಞಾನದ ಬೆಳಕು ತೋರಿದ ಗುರುಗಳ ಸಂದೇಶದ ಅನುಷ್ಠಾನದ ಜತೆ ಅವರು ತೋರಿಸಿದ ದಾರಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಅಗತ್ತಾಡಿ ಗರೋಡಿಯ ಶೈಲು ಬಿರ್ವ ತಿಳಿಸಿದರು ಅವರು ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜಯಂತಿ ಪ್ರಯುಕ್ತ ಯುವವಾಹಿನಿ(ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 10.09.2017 ರಂದು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಅಗಸ್ಟ್ 23
ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!