ಸುಳ್ಯ ; ದೇಶದಲ್ಲಿ ಕ್ರಾಂತಿಯಕಾರಿ ವಿಚಾರ ಧಾರೆಗಳು ನಿಂತುಹೋಗಿವೆ .ಅಸಹಿಷ್ಣುತೆ ಜಾಸ್ತಿ ಯಾಗಿದೆ .ಉಡುಪಿಯಲ್ಲಿ ಧರ್ಮ ಸಂತರ ಸಂಸತ್ ನಡೆಯುತ್ತಿದೆ ಆದರೆ ಅದು ಧರ್ಮ ಸಂತೃಪ್ತರ ಸಭೆ ನಾವೆಲ್ಲ ಧರ್ಮಸಂತ್ರಸ್ತರು .ಪುರೋಹಿತಶಾಹಿ ವರ್ಗದಿಂದ ಧರ್ಮ ಉಳಿದುದಲ್ಲ ಶೋಷಿತ ವರ್ಗದಿಂದ ಉಳಿದುದು ಎಂದು ಬೆಂಗಳೂರಿನ ನಿವೃತ್ತ ಎ.ಸಿ.ಪಿ ಬಿ.ಕೆ .ಶಿವರಾಮ ಹೇಳಿದರು .ಅವರು ನ.25ರಂದುಯುವವಾಹಿನಿ (ರಿ) ಸುಳ್ಯ ಘಟಕ ಮತ್ತು ಸುಳ್ಯದ ಮಾನವ ಬಂಧುತ್ವ ವೇದಿಕೆ ವತಿಯಿಂದ ಯುವಜನ ಸಂಯುಕ್ತ ಮಂಡಳಿ ಸಂಭಾಂಗಣದಲ್ಲಿ ನಡೆದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಸಂದೇಶ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಸುಳ್ಯ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಅಚ್ಚುತ ಪೂಜಾರಿ ಬ್ರಹ್ಮಶ್ರೀ ನಾರಾಯಣ ಗುರುಗಳು ಈ ಸಮಾಜ ಕಂಡ ಅಪ್ರತಿಮ ಸಮಾಜ ಸುಧಾರಕರು. ಅವರು ಕೇರಳ ದಲ್ಲಿ ಸಮಾಜಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು . ದಲಿತರಿಗೆ ,ಹಿಂದುಳಿದ ವರ್ಗದವರಿಗೆ ತಲೆ ಎತ್ತಿ ನಡೆಯುವಂತಹ ಸ್ವಾಭಿಮಾನ ತುಂಬಿದರು. ಬಿಲ್ಲವ ಸಮುದಾಯವೂ ಸೇರಿದಂತೆ ಹಲವು ಜಾತಿಯ ವರಿಗೆ ದೇವಸ್ಥಾನಗಳಿಗೆ ಪ್ರವೇಶ ಇಲ್ಲದಿದ್ದಾಗ ಪ್ರತ್ಯೇಕ ದೇವಸ್ಥಾನಗಳನ್ನೇ ಕಟ್ಟಿಸುವ ಕಾರ್ಯ ಆರಂಭಿಸಿದರು. ನಿನ್ನ ಧರ್ಮವನ್ನು ಪ್ರೀತಿಸು ಇತರ ಧರ್ಮವನ್ನು ಗೌರವಿಸು ಎಂದು ಹೇಳಿಕೊಟ್ಟರು ಎಂದು ಹೇಳಿದರು.
ಸಭಾದ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಯ ಸಂಚಾಲಕ ವಿಲ್ಪ್ರೆಡ್ ಡಿಸೋಜ ವಹಿಸಿದ್ದರು.ಯುವವಾಹಿನಿ ಸುಳ್ಯ ಘಟಕ ದ ಅಧ್ಯಕ್ಷ ಶಿವಪ್ರಸಾದ್ ಕೆ.ವಿ, ಬಿಲ್ಲವ ಸಂಘದ ಕಾರ್ಯದರ್ಶಿ ಬಾಲಕೃಷ್ಣ ನೂಜಾಡಿ, ಎಂ.ಬಿ ಸದಾಶಿವ, ಅಶೋಕ್ ಎಡಮಲೆ,ಶ್ರೀಮತಿ ಲೀಲಾ ಸಂಪಿಗೆ ,ಅಬ್ಬಾಸ್ ಕಟ್ಟೆಕ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾನವ ಬಂಧುತ್ವ ವೇದಿಕೆಯ ಸತೀಶ್ ಕುಮಾರ್ ಪ್ರಸ್ತಾವಿಕ ಭಾಷಣಗೈದರು, ಗೋಪಾಲ ಪೆರಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಸಂಘಟನ ಕಾರ್ಯದರ್ಶಿ ಮಹೇಶ್ ಚಂದ್ರ ಸಾಲ್ಯಾನ್, ರವೀಂದ್ರ ಎಚ್, ರವಿಕುಮಾರ್, ರವಿಕಿರಣ್, ರಮೇಶ್ ಜಯನಗರ , ಜಯಂತಿ , ದಿನೇಶ್, ಸರೋಜಿನಿ,ಚಂದ್ರಾವತಿ, ಗುರುನಾಥೇಶ್ವರ ,ಸುಂದರ ಪೂಜಾರಿ, ಚಂದ್ರಶೇಖರ್, ಸುಂದರಿ,ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.