ಬ್ರಹ್ಮಶ್ರೀ ನಾರಾಯಣಗುರುಗಳು ತಾನು ಸಮಾಜಕ್ಕೆ ನೀಡಿದ್ದ ಪ್ರತಿ ಸಂದೇಶವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಮಾನವತಾವಾದದ ಪ್ರತಿಪಾದಕರಾಗಿದ್ದರು, ಮನುಕುಲಕ್ಕೆ ಜ್ಞಾನದ ಬೆಳಕು ತೋರಿದ ಗುರುಗಳ ಸಂದೇಶದ ಅನುಷ್ಠಾನದ ಜತೆ ಅವರು ತೋರಿಸಿದ ದಾರಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಅಗತ್ತಾಡಿ ಗರೋಡಿಯ ಶೈಲು ಬಿರ್ವ ತಿಳಿಸಿದರು
ಅವರು ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜಯಂತಿ ಪ್ರಯುಕ್ತ ಯುವವಾಹಿನಿ(ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 10.09.2017 ರಂದು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಜನಾರ್ದನ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಬ್ರಹ್ಮಶ್ರೀ ನಾರಾಯಣಗುರುಗಳ ಒಂದೇ ಜಾತಿ, ಒಂದೇ ಮತ,ಒಂದೇ ದೇವರು ಎಂಬ ಸಂದೇಶ ಭೂತ,ವರ್ತಮಾನ, ಭವಿಷ್ಯ ಹೀಗೆ ಎಲ್ಲಾ ಕಾಲಗಳಿಗೂ ಅನ್ವಯವಾಗುತ್ತದೆ ಎಂದರು.ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಉದ್ಯಮಿ ಶ್ರೀನಿವಾಸ್ ವಾಮಂಜೂರು, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸ್ಪರ್ಧಾ ಕಾರ್ಯಕ್ರಮ
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಾನಪದ ಸಮೂಹ ಗಾನ ಸ್ಪರ್ಧೆ ಹಾಗೂ ರಸ ಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಕಲ್ಲಂಗಾಲ್ ಸೂರಿಂಜೆ ಅನಂತ ಪದ್ಮನಾಭ ಭಟ್ ಸ್ಪರ್ದಾ ಕಾರ್ಯಕ್ರಮ ಉದ್ಘಾಟಿಸಿದರು, ವಿಜಯ ಎಸ್.ಕುಕ್ಯಾನ್ ,ದಿಪೇಶ್ ರಾಜ್ ಉಪಸ್ಥಿತರಿದ್ದರು.
ಸನ್ಮಾನ
ನಾಟಿ ವೈದ್ಯರು – ಲೀಲಾ ವಸಂತ್ ಅಗ್ಗದಕಳಿಯ,
ಕುಂಬಾರಿಕೆ – ಜಾರಪ್ಪ ಮೂಲ್ಯ ಬಾಳ
ಪತ್ರಿಕಾ ವಿನ್ಯಾಸ – ದಿನಕರ್ ಡಿ.ಬಂಗೇರ
ಕರಾಟೆ ಪಟು – ಗೌತಮ್ ಸನಿಲ್ ಕೃಷ್ಣಾಪುರ
ಭರತನಾಟ್ಯ – ಜಾನ್ಸಿ
ಬಹುಮುಖ ಪ್ರತಿಭೆ – ಚಿತ್ರಾ ಶ್ರೀ ಚೆಳ್ಯಾರು
ಇವರುಗಳ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು
ಯುವವಾಹಿನಿ (ರಿ) ಸುರತ್ಕಲ್ ಘಟಕದ ಅಧ್ಯಕ್ಷರಾದ ರವೀಂದ್ರ ಎಸ್.ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಗಂಗಾಧರ ಪೂಜಾರಿ ಪ್ರಸ್ತಾವನೆ ಮಾಡಿದರು, ಸಂಚಾಲಕರಾದ ವಿವೇಕ್ ಬಿ.ಕೋಟ್ಯಾನ್ ಹಾಗೂ ಕಾರ್ಯದರ್ಶಿ ರಿತೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
An unique programme. Keep it up
Thank you sir