ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ. ಕೊಲ್ಯ. ಸೋಮೇಶ್ವರ
ಇದರ ಆಶ್ರಯದಲ್ಲಿ
ಭಜನಾ ಗುರು ಅರುಣ್ ಉಳ್ಳಾಲ್ ರವರ ನಿರ್ದೇಶನದಲ್ಲಿ
ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ದಲ್ಲಿ
————————————
*ಆಟಿ ತಿಂಗಳ ವಿಶೇಷ ತರಗತಿಗಳು ನಾಲ್ಕು ಆದಿತ್ಯವಾರ ನಡೆಯಿತು…
ತಾ. 22-07-2025 ನೇ ಮಂಗಳವಾರ ಓಂಕಾರದೊಂದಿಗೆ ತರಗತಿ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು.
ದೇವತಾ ಶ್ಲೋಕ ಹಾಗೂ ಅನುಷ್ಠಾನ ಶ್ಲೋಕ ಪಠಣೆ ಮಾಡಲಾಯಿತು.
ಮಹಾಲಕ್ಷ್ಮಿ ಅಷ್ಟಕ ಪಠಣೆ ಮಾಡಲಾಯಿತು.
ಹಿಂದಿನ ಕಾಲದಲ್ಲಿ ಆಟಕ್ಕೆ ತೆಂಡೆಲ್ ಹಾಗೂ ಪೊರಕೆ ಕಡ್ಡಿ ಬಳಸಿ ಹೇಗೆ ಆಟಿಕೆ ತಯಾರಿಸಲಾಗುತ್ತಿತ್ತು ಎಂಬುದನ್ನು ಆಟಿ ತಿಂಗಳ ವಿಶೇಷ ತರಗತಿಯಲ್ಲಿ ತಿಳಿಸಲಾಯಿತು.
ತಾ. 29-07-2025 ನೇ ಮಂಗಳವಾರ ನಡೆದ ಆಟಿಯ ವಿಶೇಷ ತರಗತಿಯಲ್ಲಿ ತುಳು ತಿಂಗಳ ಪರಿಚಯ, ಆಟಿಗೆ ಸಂಬಂಧಿಸಿದ ಕೆಲವು ಪ್ರಶ್ನೋತ್ತರ ನಡೆಸಲಾಯಿತು.
ಹುಣಸೆ ಬೀಜದ ಪರಿಚಯ ಹಾಗೂ ಹಿಂದಿನ ಕಾಲದಲ್ಲಿ ತಿನಿಸಾಗಿ ಉಪಯೋಗಿಸುತ್ತಿದ್ದ ಬಗ್ಗೆ ತಿಳಿಸಿ ಎಲ್ಲರಿಗೂ ಹುಣಸೆ ಬೀಜ ಹಂಚಲಾಯಿತು.
ತಾ. 05-08-2025 ನೇ ಮಂಗಳವಾರ ನಡೆದ ಆಟಿಯ ವಿಶೇಷ ತರಗತಿಯಲ್ಲಿ ಹಿಂದಿನ ಕಾಲದಲ್ಲಿ ಬಾಲ್ಯದಲ್ಲಿ ಆಟವಾಗಿ ಆಡುತ್ತಿದ್ದ ಕಲ್ಲು ತಿಪ್ಪಿ ಆಟವನ್ನು ಕಲಿಸಿಕೊಡಲಾಯಿತು.
ಆಟಿ ತಿಂಗಳ ವಿಶೇಷವಾಗಿ,ತರಗತಿಯ ಸದಸ್ಯರಾದ ಶ್ರೀಮತಿ ಸುಲೋಚನಿ ಟೀಚರ್ ಎಲ್ಲರಿಗೂ ಉಪ್ಪಡಚ್ಚಿಲ್ ನೀಡಿರುತ್ತಾರೆ,ಪಾನಕ ಸೇವೆ ಹಾಗೂ ಪತ್ರೊಡೆ ಯನ್ನು ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಲತಾ ಶೇಖರ್ ಇವರು ನೀಡಿರುತ್ತಾರೆ.
ತಾ. 12-08-2025 ನೇ ಮಂಗಳವಾರ ಓಂಕಾರದೊಂದಿಗೆ ಪ್ರಾರಂಭಗೊಂಡ ಆಟಿ ತಿಂಗಳ ವಿಶೇಷ ತರಗತಿಯಲ್ಲಿ, ರಕ್ಷಾಬಂಧನ ಆಚರಣೆಗೆ ಪುರಾಣದ ಹಿನ್ನೆಲೆ, ರಕ್ಷೆಯ ಮಹತ್ವದ ಕುರಿತು ಹಾಗೂ ಹಿಂದಿನ ಕಾಲದ ಆಟಿ ತಿಂಗಳ ದಿನಚರಿ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ತರಗತಿ ಶಿಕ್ಷಾರ್ಥಿಯಾದ ಶ್ರೀಮತಿ ಸುಲೋಚನಿ ಟೀಚರ್ ನೀಡಿದರು.
ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಲಾಯಿತು
ಶಾಂತಿ ಮಂತ್ರದೊಂದಿಗೆ ತರಗತಿ ಮಂಗಳವಾಯಿತು


