ಬ್ರಹ್ಮ ಶ್ರೀ ನಾರಾಯಣಗುರು ಧರ್ಮಶಿಕ್ಷಣ ಕೇಂದ್ರ ಕೊಲ್ಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ತರಗತಿಯಲ್ಲಿ “ಗುರುವಂದನಂ” ಕಾರ್ಯಕ್ರಮ ದಿನಾಂಕ 09-09-2025 ನೇ ಮಂಗಳವಾರ
ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರು ಓಂಕಾರದೊಂದಿಗೆ ತರಗತಿ ಪ್ರಾರಂಭಿಸಿದರು, ಗಣಪತಿ ಶ್ಲೋಕ, ಗುರುಶ್ಲೋಕ,ನಿತ್ಯಾನುಷ್ಠಾನ ಶ್ಲೋಕ ಜೊತೆಯಾಗಿ ಪಠಿಸಲಾಯಿತು.ಧರ್ಮ ಶಿಕ್ಷಣ ಗುರುಗಳಾದ ಡಾ.ಅರುಣ್ ಉಳ್ಳಾಲ್ ಹಾಗೂ ತರಗತಿಯ ಶಿಕ್ಷಕರು ಮತ್ತು ಕೊಲ್ಯ ಘಟಕದ ಶಿಕ್ಷಕರನ್ನು ಗೌರವಿಸಲಾಯಿತು.ಶಿಕ್ಷಕರ ದಿನಾಚರಣೆ ವಿಶೇಷವಾಗಿ ಧರ್ಮ ಶಿಕ್ಷಣ ತರಗತಿಯ ವಿದ್ಯಾರ್ಥಿಗಳಾದ ಕು| ತನಿಷ್ಕ ಗುರುಕೀರ್ತನೆ ಹಾಡಿದರು,ಕು| ಹೃದ್ವಿ ರಾಜೇಶ್, ಕು| ಹಂಸಿಕ, ಮಾ| ಜೈವಿಕ್ ಗುರುವಿನ ಮಹತ್ವ ಬಗ್ಗೆ ತಿಳಿಸಿದರು.ಮಕ್ಕಳು ಶಿಕ್ಷಕರಿಗೆ ಸಾಷ್ಟಾಂಗ ವಂದಿಸಿ ಆರ್ಶಿವಾದ ಪಡೆದರು.
ಗುರುಗಳಾದ ಶ್ರೀ ಡಾ.ಅರುಣ್ ಉಳ್ಳಾಲ್ ಮತ್ತು ಘಟಕದ ಗೌರವ ಸದಸ್ಯರು ಶ್ರೀಮತಿ ವೇದಾವತಿ ಟೀಚರ್, ಧರ್ಮ ಶಿಕ್ಷಣ ತರಗತಿಯ ಸದಸ್ಯರಾದ ಶ್ರೀಮತಿ ಸುಲೋಚನಾ ಟೀಚರ್ ಮತ್ತು ಶ್ರೀಮತಿ ಗೀತಾ ಟೀಚರ್, ಮಾತನಾಡಿ ಮಕ್ಕಳಿಗೆ ಕೆಲವೊಂದು ಹಿತ-ನುಡಿ ಗಳನ್ನು ತಿಳಿಸಿದರು ಮತ್ತು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರು ವಂದನಂ ಕಾರ್ಯಕ್ರಮ ಆಯೋಜನೆ ಮಾಡಿದ ಘಟಕದ ಎಲ್ಲಾ ಸದಸ್ಯರಿಗೆ ಧನ್ಯವಾದ ತಿಳಿಸಿದರು.ಯುವವಾಹಿನಿ (ರಿ)ಕೇಂದ್ರ ಸಮಿತಿಯ ನಾಮ ನಿರ್ದೇಶನ ಸದಸ್ಯರಾದ, ಶ್ರೀ ಗಣೇಶ್ ಕಿನ್ಯ ಇವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸದಸ್ಯರಿಗೆ ಲಘು ಉಪಹಾರ ವ್ಯವಸ್ಥೆ ಮಾಡಿದ್ದರು.ಘಟಕದ ಸದಸ್ಯರು, ಧರ್ಮ ಶಿಕ್ಷಣ ತರಗತಿಯ ಸಂಚಾಲಕರದ ಶ್ರೀ ಜಗಜೀವನ್ ಕೊಲ್ಯ, ಶ್ರೀ ಯತೀಶ್ ವೆಂಕುಹಿತ್ಲು ಉತ್ತಮ ವ್ಯವಸ್ಥೆ ಮಾಡಿದರು, ಘಟಕದ ಪ್ರಥಮ ಉಪಾಧ್ಯಕ್ಷರು ಶ್ರೀ ಜೀವನ್ ಕೊಲ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.ಮಾತೃ ಸಂಸ್ಥೆ ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಮತ್ತು ಸಮಿತಿ ಕೊಲ್ಯ, ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ, ಮತ್ತು ಕೊಲ್ಯ ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.
SEP 16, 2025 7.07 PM IST


