Yuvavahini

ಸಿಂಚನ

ಯುವಸಿಂಚನ ಪತ್ರಿಕೆ ಬಿಡುಗಡೆ

  ಪುತ್ತೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಎಪ್ರಿಲ್ ತಿಂಗಳ ಆವೃತ್ತಿಯನ್ನು ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು. ದಿನಾಂಕ 15.04.2018 ರಂದು ಜರುಗಿದ ಯುವವಾಹಿನಿ (ರಿ) ಪುತ್ತೂರು ಘಟಕದ ಮಾಸಿಕ ಸಭೆಯಲ್ಲಿ ಪುತ್ತೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಶೀನಪ್ಪ ಪೂಜಾರಿಯವರು ಯುವಸಿಂಚನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕರಾದ ಯಶವಂತ ಪೂಜಾರಿ, ಸಂಪಾದಕರಾದ ಶುಭಾ ರಾಜೇಂದ್ರ, ಉಪಸಂಪಾದಕರಾದ ರಾಜೇಶ್ ಸುವರ್ಣ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ನಾರಾಯಣಗುರು […]

Read More

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ. ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು. ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ […]

Read More

ಸಂಪಾದಕರ ಮಾತು : ಶುಭ ರಾಜೇಂದ್ರ

  ಯುವಸಿಂಚನದ ಓದುಗ ಮಿತ್ರರಿಗೆ ನಮಸ್ಕಾರಗಳು ಕತ್ತಲಾಯಿತು ರಾತ್ರಿಯಾಗುತ್ತದೆ ಎನ್ನುವ ಭಯ ಬೇಡ ನಾಳೆ ಮತ್ತೆ ಸೂರ್ಯೋದಯವಿದೆ ಮತ್ತೆ ಹೊಸ ದಿನ ನಿಮ್ಮನ್ನು ಎದುರುಗೊಳ್ಳುತ್ತದೆ ಸಾಧಿಸಬೇಕೇÉ ಅನಿಸಿದರೆ ನಾಳಿನ ಅವಕಾಶÀವನ್ನು ಬಳಸಿಕೋ ಎಂದು ಲೇಖಕರ ಮಾತೊಂದು ನೆನಪಿಗೆ ಬರುತ್ತಿದೆ. ಯುವ ಸಿಂಚನಕ್ಕೆ ಹೊಸ ರೂಪ ನೀಡಬೇಕು ಎಂದು ಸಾಕಷ್ಟು ಪ್ರಯತ್ನದ ನಡುವೆಯೂ ಇನ್ನೂ ಚೆಂದವಾಗಿಸುವ ನಿಮ್ಮ ಅನಿಸಿಕೆಗಳು ನಮ್ಮನ್ನು ಪ್ರೇರೆಪಿಸುತ್ತದೆ ಆದರೆ ಅಷ್ಟರಲ್ಲಿ ಸಿಂಚನ ಅಚ್ಚಾಗಿರುತ್ತದೆ ಆಗ ನಮಗೆ ಸಮಾಧಾನ ಮಾಡುವುದು ಈ ಮೇಲಿನ ಮಾತು, ಮತ್ತೆ […]

Read More

ಗೌರವ ಸಂಪಾದಕರ ಮಾತು : ಯಶವಂತ ಪೂಜಾರಿ

ಪ್ರೀತಿಯ ಯುವವಾಹಿನಿಯ ಬಂಧುಗಳೇ, ಪದವಾಗಿ ಬಂದಿತ್ತು ನೂರೊಂದು ಮಾತು ಎದೆಯಲ್ಲಿ ಉಳಿದಿತ್ತು ಮುನ್ನೂರ ಒಂದು ಎಂದು ಕವಿ ಹಾಡಿನಂತೆ ನನ್ನ ಭಾವನೆಯೂ ಮೂಡಿದೆ. ಆಶಯದ ಪುಟ್ಟ ಕೈ ದೀಪವನ್ನು ಹಿಡಿದು ಆಗಸ್ಟ್‍ನಲ್ಲಿ ಅಧ್ಯಕ್ಷಗಾದಿಯ ನಡಿಗೆಯನ್ನು ಆರಂಭಿಸಿದವ ನಾನು, ಕನಸಿನ ನಡಿಗೆಯಲ್ಲಿ ಎರಡೆಜ್ಜೆಯನ್ನಷ್ಟೇ ಇಟ್ಟಿದ್ದೆ, ಅಷ್ಟರಲ್ಲಿ ಅಷ್ಟದಿಕ್ಕುಗಳಿಂದಲೂ ಪ್ರಖರವಾದ ಬೆಳಕು ಬೀಳುತ್ತಿದ್ದವು, ತಡಕಾಡುತ್ತಿದ್ದ ಹೆಜ್ಜೆ ವೇಗ ಪಡೆದುಕೊಳ್ಳಲು ಆರಂಭಿಸಿದವು.ಈ ಪ್ರಖರ ಬೆಳಕನ್ನು ಬೀರಿದವರು ಯಾರು ಎಂದು ಚಿತ್ತ ಹರಿಸಿದರೆ ಕಂಡಿದ್ದು ನನ್ನ ಯುವವಾಹಿನಿಯ ಕುಟುಂಬ ಪ್ರತಿಯೊಂದು ಘಟಕವೂ ಅತ್ಯದ್ಬುತವಾದ […]

Read More

ಬಂಟ್ವಾಳದಲ್ಲಿ ‘ಡೆನ್ನಾನ… ಡೆನ್ನನ’ದ ಇಂಪು

ತುಳು ನಾಡ ವೀರ ಪುರುಷರ ಕಥೆಗಳು ಇಂದಿಗೂ ಜೀವಂತವಾಗಿದೆ ಎಂದರೆ ಅದು ತುಳುನಾಡ ಪಾಡ್ದನದ ಮೂಲಕ. ಅದು ನಮ್ಮ ಹಿರಿಯರ ಸಂಸ್ಕೃತಿಯ ಮೂಲಕ , ತುಳುನಾಡ ಸಂಸ್ಕೃತಿಯಲ್ಲಿ ಬೆರೆತು ಹೋದ ವೀರ ಪುರುಷರ, ಮಾತೆಯರ ಕಥೆಗಳು ಪ್ರಾರಂಭವಾಗುವುದೇ ಪಾಡ್ದನದ ಮೊದಲ ಎರಡು ಪದಗಳಾದ ಡೆನ್ನಾನ ಡೆನ್ನಾನದಿಂದ ಬಿ.ಸಿ ರೋಡಿನ ನಾರಾಯಣ ಗುರು ವೃತದ ಬಳಿಯಿರುವ ಸ್ಪರ್ಶ ಕಲಾಮಂದಿರದಲ್ಲಿ , ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ಆತಿಥ್ಯದಲ್ಲಿ . ಡೆನ್ನಾನ ಡೆನ್ನಾನ […]

Read More

ಗುಪ್ತಗಾಮಿನಿ ಯುವವಾಹಿನಿ…….. ರಮ್ಯ ಸುಜೀರ್

ಬದುಕು ಆಧುನೀಕತೆಯತ್ತ ಹೊರಳುತ್ತಿದೆ. ಗತವೈಭವದ ಸಂದಿ ಪಾಡ್ದನಗಳು ನೇಪಥ್ಯಕ್ಕೆ ಸರಿಯುತ್ತಿದೆ. ತುಳುವ ಆಚಾರ-ವಿಚಾರ, ಹಿರಿಮೆ-ಗರಿಮೆಗಳು ಸದ್ದಡಗಿಸಿ ಮೂಕವಾಗಿದೆಯೆನೋ ಎನ್ನುವಂತಹ ದಿನಗಳಲ್ಲಿಯೇ, ಸಂದಿ ಹೋದ ಕಾಲವನ್ನು ಮರುಕಳಿಸುವಂತೆ ಮಾಡಿ, ಸತ್ಯದ ಹೊಳಪ ಲೇಪನವನ್ನು ನೀಡುತ್ತಾ, ನಿತ್ಯ-ನಿರಂತರ ಗುಪ್ತಗಾಮಿನಿಯಾಗಿ ಹರಿಯುತ್ತಾ, ತನ್ನೊಂದಿಗೆ ತುಳುವ ಮಣ್ಣಿನ ಸತ್ವ-ಸಾರ, ಬಿರುವ ಸಮುದಾಯದ ಯುವಜನತೆಯ ಪ್ರತಿಭಾ ಕೌಶಲ್ಯವನ್ನು ಒಗ್ಗೂಡಿಸಿಕೊಂಡು, ಎಲ್ಲೋ ಮರೆಯಾಗಿ ಹೋಗುತ್ತಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿ, ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಸಾಧನಾಲೋಕಕ್ಕೆ ಪರಿಚಯಿಸಿಕೊಂಡು ಸಾಧನೆಯ ಮೇರುಶಿಖರದ ಅನಂತತೆಯ ಪಥದತ್ತ ಸಾಗಿಬರುತ್ತಿರುವ ಹೆಮ್ಮೆಯ […]

Read More

ಯುವಸಿಂಚನ ಪತ್ರಿಕೆ ಬಿಡುಗಡೆ

ಯುವವಾಹಿನಿಯ ಮುಖವಾಣಿ ಯುವಸಿಂಚನ‌ ಪತ್ರಿಕೆಯ ಫೆಬ್ರವರಿ ತಿಂಗಳ ಆವೃತ್ತಿಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿ ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ವಿನಯ ಕುಮಾರ್ , ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕರಾದ ಯಶವಂತ ಪೂಜಾರಿ, ಯುವಸಿಂಚನ ಪತ್ರಿಕೆಯ ಸಂಪಾದಕರಾದ ಶುಭ ರಾಜೇಂದ್ರ, ಸಂಪತ್ ಬಿ.ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ , ಯುವವಾಹಿನಿ ಕಾಪು ಘಟಕದ ಅಧ್ಯಕ್ಷರಾದ ದೀಪಕ್ ಕುಮಾರ್ […]

Read More

ಕಲ್ಪನಾ- ವಿಶುಕುಮಾರ್ ಜಗಳ

ಸುಮಾರು 450 ವರ್ಷಗಳ ಹಿಂದೆ ನಡೆದ ಐತಿಹಾಸಿಕ ‘ ಕೋಟಿ- ಚೆನ್ನಯ‘ ಅವಳಿ ವೀರ ಪುರುಷರ ಸ್ವಾಭಿಮಾನದ ಬದುಕಿನ ನೈಜ ಕಥೆ- ವಿಶುಕುಮಾರ್ ಅವರಿಗೆ ಆ ವೀರ ಪುರುಷರು ತುಂಬಾ ಪ್ರಭಾವ ಬೀರಿದ್ದರು. ಅವರ ವ್ಯಕ್ತಿತ್ವ, ನಡೆ-ನುಡಿ ,ಅವರು ಅನ್ಯಾಯದ ವಿರುದ್ಧ ಹೋರಾಡುವುದು ಇತ್ಯಾದಿ. ಇದನ್ನು ವಿಶುಕುಮಾರ್ ಅವರು ತಮ್ಮ ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಆ ವೀರಪುರುಷರನ್ನು ‘ ಮಾದರಿ’ಯಾಗಿಟ್ಟುಕೊಂಡರು.ಆ ಕಥೆ ಹಿಡಿಸಿದ್ದರಿಂದಲೇ ಮೊದಲು ಅವರು ನಾಟಕ ಬರೆದು, ನಿರ್ದೇಶನ ಮಾಡಿದರು. ಅದರಲ್ಲಿ ಯಶಸ್ವಿ ಕೂಡ ಪಡೆದರು. […]

Read More

ಅನ್ಯಾಯಗಳ ವಿರುದ್ಧ ಬರವಣಿಗೆ

ಕಳೆದ ಸಂಚಿಕೆಗಳಲ್ಲಿ ವಿಶುಕುಮಾರ್ ಅವರು ತನ್ನ 30 ರ ಹರೆಯದ ಒಳಗಿನ ಅಂದರೆ 1965 ರ ಮೊದಲು ಬರೆದ ಲೇಖನ, ಕಾದಂಬರಿ, ನಾಟಕಗಳ ಬಗ್ಗೆ ಬರೆದಿದ್ದೇವು. ಮುಂದಿನ ಸಂಚಿಕೆಗಳಲ್ಲಿ 1975 ರ ಒಳಗೆ ಅವರ ಬರವಣಿಗೆ, ಯೋಚನಾ ಮಟ್ಟ, ಸಾಧನೆಗಳ ಕುರಿತು ಬರೆಯುತ್ತೇವೆ. 1965 ರಲ್ಲಿ ವಿಶುಕುಮಾರ್ ಅವರು ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕಗೊಂಡರು. ಅವರು ಕುಂದಾಪುರದಲ್ಲಿ ಕೆಲಸ ಮಾಡತೊಡಗಿದರು. ‘ ಎಂಡೋಮೆಂಟ್ ‘ ಆಗಿರುವ ದೇವಾಲಯಗಳ ಲೆಕ್ಕ ಪರಿಶೋಧನೆ ಮಾಡುವುದೇ ಇವರ ಕೆಲಸ. […]

Read More

ಕರಾವಳಿ : ಸತ್ಯ ಘಟನೆಗಳ ಚಿತ್ರಣ

ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಶುಕುಮಾರ ಅವರ ಹೆಸರನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದ ಕಾದಂಬರಿ ‘ ಕರಾವಳಿ’. ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸಂಚಲನೆ ಮೂಡಿಸಿದ ಕಾದಂಬರಿ. ಕರಾವಳಿ ಬೆಸ್ತರ( ಮೊಗವೀರರ) ಜನಜೀವನವನ್ನು ಅನಾವರಣಗೊಳಿಸಿದ ಕಾದಂಬರಿಯದು. 1966 ರಲ್ಲಿ ವಿಶುಕುಮಾರ ಅವರು ಕಾದಂಬರಿಯನ್ನು ಬರೆದಿದ್ದಾರೆ. ಮೊಗವೀರ ಹೆಣ್ಣು ಮಗಳೊಬ್ಬಳು ಅನ್ಯಕೋಮಿನ ( ಮುಸ್ಲಿಂ) ಯುವಕನನ್ನು ಪ್ರೇಮಿಸಿ, ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕತಾಹಂದರ. ಈ ಘಟನೆಯನ್ನು ಆಧರಿಸಿ ವಿಶುಕುಮಾರ ಕಾದಂಬರಿ ಹೆಣೆದಿದ್ದಾರೆ. ವಿಶುಕುಮಾರ ಅವರು ಕಾದಂಬರಿ ಬರೆದ ಹಿನ್ನಲೆ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!