ಮಂಗಳೂರು : ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಂಪಾದಕೀಯ ಮಂಡಳಿಯ ಸಭೆಯು ದಿನಾಂಕ 05.06.2018 ರಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಕಛೇರಿಯಲ್ಲಿ ಜರುಗಿತು.
ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕ ಯಶವಂತ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಸಿಂಚನ ಪತ್ರಿಕೆಯ ಜಾಹಿರಾತು ದರ ಪರಿಷ್ಕರಣೆಯ ಬಗ್ಗೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಅಗಸ್ಟ್ 5 ರಂದು ಯುವವಾಹಿನಿಯ ವಾರ್ಷಿಕ ಸಮಾವೇಶದಂದು ಬಿಡುಗಡೆಯಾಗಲಿರುವ ಸಿಂಚನ ವಿಶೇಷಾಂಕ ಉತ್ತಮವಾಗಿ ಮೂಡಿಬರಲು ಕೈಗೊಳ್ಳಬೇಕಾದ ಪೂರ್ವ ತಯಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಯುವಸಿಂಚನ ಪತ್ರಿಕೆಯ ಉಪಸಂಪಾದಕ ರಾಜೇಶ್ ಸುವರ್ಣ, ಸಿಂಚನ ಜಾಹಿರಾತು ಸಮಿತಿಯ ಸಂಚಾಲಕ ಜಯಂತ ನಡುಬೈಲು, ಸಹಸಂಚಾಲಕ ಹರೀಶ್ ಪಚ್ಚನಾಡಿ, ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಮಂಗಳೂರು ಘಟಕದ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ, ಸಮಾವೇಶ ನಿರ್ದೇಶಕ ಹರೀಶ್ ಕೆ.ಪೂಜಾರಿ, ಸಂಪಾದಕೀಯ ಮಂಡಳಿಯ ಸದಸ್ಯರಾದ ಉದಯ ಅಮೀನ್ ಮಟ್ಟು, ಶಶಿಧರ ಕಿನ್ನಿಮಜಲು ಮತ್ತಿತರರು ಉಪಸ್ಥಿತರಿದ್ದರು.
ಯುವಸಿಂಚನ ಪತ್ರಿಕೆಯ ಸಂಪಾದಕಿ ಶುಭಾರಾಜೇಂದ್ರ ಧನ್ಯವಾದ ನೀಡಿದರು.
ALL THE BEST