Yuvavahini

APR 15, 2018 4.43 PM IST

ಯುವಸಿಂಚನ ಏಪ್ರಿಲ್ 2018

ಗೌರವ ಸಂಪಾದಕರ ಮಾತು : ಯಶವಂತ ಪೂಜಾರಿ

ಬಂಧುಗಳೇ,
ಒಂದು ವರುಷ ವೇಗವಾಗಿ ಉರುಳಿ ಹೋಗುತ್ತಿದೆ, ಮೊನ್ನೆ ಮೊನ್ನೆ ಅಧಿಕಾರ ಸ್ವೀಕರಿಸಿದ್ದೆ ಈಗ ಮುಂದಿನ ಸಮಾವೇಶಕ್ಕೆ ಸಿದ್ದಗೊಳ್ಳಬೇಕಾಗಿದೆ. ಸಿಕ್ಕಿದ 365 ದಿನವನ್ನು ಯುವವಾಹಿನಿಗಾಗಿ ನೀಡಬೇಕುಎನ್ನುವುದು ನನ್ನ ಆಶಯ ಈ ನೆಲೆಯಲ್ಲಿ ಯುವವಾಹಿನಿಯನ್ನು ಉಸಿರಾಗಿಸಿಕೊಂಡಿದ್ದೇನೆ. ಮಾರ್ಚ್- ಎಪ್ರಿಲ್ ತಿಂಗಳು ನನಗೆ ಅತ್ಯಂತ ಖುಷಿಯ ತಿಂಗಳು, ನನ್ನ ಅಧಿಕಾರಾವಧಿ ಯುವವಾಹಿನಿಯ 30ನೇ ವರುಷ. ಈ ನೆಲೆಯಲ್ಲಿ ಯುವವಾಹಿನಿಗೆ 30 ಘಟಕಗಳನ್ನು ಸೇರ್ಪಡೆಗೊಳಿಸಿ ಯುವವಾಹಿನಿಯನ್ನು ಬಲ ಪಡಿಸಬೇಕು ಎನ್ನುವ ಆಶಯವಿತ್ತು. ಈ ಆಸೆ ಇಂದು ಕೈಗೂಡಿದೆ. ಯುವವಾಹಿನಿಗೆ ಬಲಿಷ್ಠವಾದ 30ನೇ ಘಟಕ ಕುಪ್ಪೆಪದವು ಘಟಕ ಸೇರ್ಪಡೆಗೊಂಡಿದೆ. ಇನ್ನೂ ಸಂತಸದ ವಿಚಾರ ಎಂದರೆ ರಾಜ್ಯದ ರಾಜಧಾನಿ ಬೆಂಗಳೂರಿನ ಯುವಕರ ತಂಡವು ಯುವವಾಹಿನಿ ಘಟಕ ರಚಿಸಲು ಉತ್ಸುಕರಾಗಿರುವುದು ಒಂದು ಉತ್ತಮ ಬೆಳವಣಗೆ.  ನೆನೆದದು ಎಲ್ಲಾ ನಡೆದೇ ಹೋದರೆ ದೇವರೇ ನಿನಗೆ ಬೆಲೆ ಎಲ್ಲಿ ಎಂದು ಅನುಭವಿಗಳು ಹೇಳಿದ್ದಾರೆ. ಆದರೆ ದೇವರ ದಯೆಯಿಂದ ನಾನೇನು ಕೆಲಸ ಮಾಡಬೇಕು ಎಂದು ನೆನೆಸಿದ್ದೆನೋ ಅದೆಲ್ಲವೂ ನಡೆದು
ಅದಕ್ಕಿಂತಲೂ ಹೆಚ್ಚಿನ ಕೆಲಸಗಳು ಯುವವಾಹಿನಿಯಲ್ಲಿ ನಡೆದು ಹೋಗಿದೆ, ಮಾಜಿ ಅಧ್ಯಕ್ಷರುಗಳ ಸಲಹೆ ಸಹಕಾರ ಮಾರ್ಗದರ್ಶನ, ಘಟಕದ ಅಧ್ಯಕ್ಷರುಗಳ ಸಹಕಾರ ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ ಬೆಂಬಲದಿಂದ ಯುವವಾಹಿನಿಯಲ್ಲಿ ಹೊಸ ಸಂಚಲನ ಮೂಡಿದೆ. ಕಳೆದ ಫೆಬ್ರವರಿ 17ರಂದು ಮಂಗಳೂರು ಪುರಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ನಾರಾಯಣಗುರು ಅಧ್ಯಯನ ಪೀಠದ ಸಹಕಾರದಲ್ಲಿ ನಡೆದ ಶ್ರೀ ಗುರು ಅಂದು-ಇಂದು-ಮುಂದು ವಿದ್ಯಾರ್ಥಿ ಸಂವಾದ 50 ಕಾಲೇಜಿನ
600ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿತು. ಇದಲ್ಲದೆ ನಾವು ನಿರೀಕ್ಷಿಸದ ಅವಕಾಶವೊಂದು ನಮ್ಮ ಸಂಸ್ಥೆಗೆ ಬಂದು ನಮ್ಮ ಸಂಸ್ಥೆಯ ಹೆಸರನ್ನು ಇಮ್ಮಡಿಗೊಳಿಸಿತು. ಅಲ್ಲದೆ ನಮ್ಮ ಘಟಕ-ಘಟಕಗಳ ನಡುವೆ, ನಮ್ಮ ಸದಸ್ಯರುಗಳ ನಡುವೆ ಹೊಸ ಸಾಮರಸ್ಯವನ್ನು ಹುಟ್ಟುಹಾಕಿದೆ. ಅದೇ ವಿಶುಕುಮಾರ್‍ಅವರ ಕೋಟಿ-ಚೆನ್ನಯ್ಯ ನಾಟಕ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ನಮ್ಮ ಸಂಸ್ಥೆಯ 51 ಮಂದಿ ಸದಸ್ಯರು ವಿಶುಕುಮಾರ್ ಅವರ ಕೋಟಿ-ಚೆನ್ನಯ್ಯ ನಾಟಕವನ್ನು ನಮ್ಮ ಉಪಾಧ್ಯಕ್ಷರಾದ ನರೇಶ್‍ಕುಮಾರ್‍ಇವರ ದಕ್ಷ ನಿರ್ದೇಶನದಲ್ಲಿ ಅಭಿನಯಿಸಿದ್ದರು. ಎಂಟು ದಿನಗಳ ಕಾಲ ನಡೆದ ಎಂಟು ನಾಟಕದಲ್ಲಿ ನಾವು ಅಭಿನಯಿಸಿದ ನಾಟಕಕ್ಕೆ ಉತ್ತಮ ಹೆಸರು ಬಂದಿತ್ತು. 8 ಘಟಕದಿಂದ 51 ಮಂದಿ ಸದಸ್ಯರು 6 ತಿಂಗಳ ಮಗುವಿನಿಂದ 60 ವರುಷದೊಳಗಿನವರು ಕಲಾವಿದರಾಗಿ ಭಾಗವಹಿಸಿದ್ದರು. ಈ ಮೂಲಕ ಯುವವಾಹಿನಿ ಸದಸ್ಯರ ಪ್ರತಿಭೆ ಮತ್ತೊಮ್ಮೆ ಜನಮಾನಸಕ್ಕೆ ತಲುಪಿತು. ಇದಲ್ಲದೆ ಎಪ್ರಿಲ್ 8 ರಂದು ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಖಿ ಸಂವಾದವೂ ಹೊಸತನದ ಮೆರುಗಿನಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಇದರ
ಹಿಂದೆ ದುಡಿದ ಯುವವಾಹಿನಿ ಉಡುಪಿ ಘಟಕ ಮತ್ತು ಮಹಿಳಾ ಸಂಘಟನಾ ನಿರ್ದೇಶಕರಾದ ಸಂಧ್ಯಾ ಅಶೋಕ್ ಅವರನ್ನು ಅಭಿನಂದಿಸುತ್ತೇನೆ. ಇದಲ್ಲದೆ ಯುವವಾಹಿನಿಯ 30 ಘಟಕಗಳೂ ಅದ್ಬುತ ಕಾರ್ಯಕ್ರಮವನ್ನು ನಡೆಸುತ್ತಿದ್ದು ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಯುವವಾಹಿನಿ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ, ಉತ್ತಮ ಕಾರ್ಯಕ್ರಮವನ್ನು ಸಂಘಟಿಸುವ ಮತ್ತು ಶಿಸ್ತನಿಂದ ಕಾರ್ಯಕ್ರಮವನ್ನು ನಡೆಸುವ ಕಲೆಯನ್ನು ಯುವವಾಹಿನಿಯಿಂದ ಕಲಿಯಬೇಕಾಗಿದೆ ಎನ್ನುವ ಪ್ರಶಂಸೆಯನ್ನು ಇತರರಿಂದ ಕೇಳುವಾಗ ಸಾರ್ಥಕ ಭಾವನೆ ಮೂಡುತ್ತಿದೆ.
ಬಂಧುಗಳೇ, ಮುಂದೆಯೂ ನಮ್ಮಲ್ಲಿ ಇದೇ ಬದ್ದತೆ ಇರಲಿ, ಬದುಕಿನಲ್ಲಿ ನಮ್ಮಲ್ಲಿರುವ ಒಟ್ಟು ದಿನದಲ್ಲಿ ಕೆಲವೇ ಕೆಲವು ದಿನಗಳನ್ನು ಯುವವಾಹಿನಿಗಾಗಿ ನೀಡುವ. ಆ ಮೂಲಕ ಸಮಾಜಕ್ಕೆ ಸಹಾಯ ಮಾಡೋಣ ಎಂದು ಆಶಿಸುತ್ತೇನೆ. ಮುಂದಿನ ಆಗಸ್ಟ್ 5ರಂದು ಯುವವಾಹಿನಿ 31ನೇ ವಾರ್ಷಿಕ ಸಮಾವೇಶ ಮಂಗಳೂರು ಘಟಕದ ಆಶ್ರಯದಲ್ಲಿ ನಡೆಯಲಿದೆ. ಇದಕ್ಕಾಗಿ ನಾವು ಇಂದೇ ಸಿದ್ದಗೊಳ್ಳೋಣ, ಯುವವಾಹಿನಿಯಲ್ಲಿ ಎಂದಿಗೂ ಜೊತೆಯಾಗಿರೋಣ ಎಂದು ಆಶಿಸುತ್ತೇನೆ.
ನಮಸ್ಕಾರ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!